ಶಿವಮೊಗ್ಗ

ಕೈ- ಇಂಡಿಯನ್ ಮುಜಾಹಿದ್ದೀನ್ ನಡುವೆ ವ್ಯತ್ಯಾಸ ಇಲ್ಲ

Published On :

ಶಿವಮೊಗ್ಗ: ಕಾಂಗ್ರೆಸ್ ಪಕ್ಷಕ್ಕೂ ಇಂಡಿಯನ್ ಮುಜಾಹಿದ್ದೀನ್‌ಗೂ ಬಹಳ ವ್ಯತ್ಯಾಸವೇನು ಇಲ್ಲ. ಎರಡು ಒಂದೇ ರೀತಿಯ ನಿಲುವನ್ನು ಹೊಂದಿವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಟೀಕಿಸಿದರು.
ಜಿಲ್ಲಾ ಬಿಜೆಪಿ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಘೋಷಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಂಡಿಯನ್ ಮುಜಾಹಿದ್ದೀನ್ ಮತ್ತು ಕಾಂಗ್ರೆಸ್‌ಗೆ ಭಾರತ ಬಲಾಢ್ಯ ಆಗುವುದು ಇಷ್ಟವಿಲ್ಲ. ಮುಜಾಯಿದ್ದಿನ್ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಮುಗಿಸಲು ಹೊರಟರೆ, ಕಾಂಗ್ರೆಸ್ ಮೋದಿಯನ್ನು ರಾಜಕೀಯವಾಗಿ ಮುಗಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಪ್ರಧಾನಿ ಮೌನ: ಪಾಕಿಸ್ತಾನ ಕಾಲುಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದು, ಸೈನಿಕರನ್ನು ಕತ್ತರಿಸುತ್ತಿದ್ದರೂ, ಚೀನಾ 20 ಕಿ.ಮೀ ಭಾರತ ಗಡಿಯೊಳಗೆ ಕಾಲಿಟ್ಟರೂ ದೇಶದ ಪ್ರಧಾನಿಗೆ ಏನು ಅನಿಸುತ್ತಿಲ್ಲ ಎಂದರೇ, ಈ ದೇಶ ಉಳಿಯುತ್ತದೆಯೇ, ಈ ಬಗ್ಗೆ ಪ್ರಧಾನಿ ಅವರು ಮೌನಿಯಾಗಿರುವುದು ಏಕೆ ಎಂದ ಪ್ರಶ್ನಿಸಿದ ಅವರು, ಈ ದೇಶಕ್ಕೆ ಸಮರ್ಥ ನಾಯಕ, ಪಕ್ಷದ ಅವಶ್ಯಕತೆ ಇದೆ. ಅದು ಬಿಜೆಪಿ ಮಾತ್ರ. ನರೇಂದ್ರ ಮೋದಿ ಮಾತ್ರ ಈ ದೇಶಕ್ಕೆ ಸಮರ್ಥ ನಾಯಕ ಎಂದರು.
ಗಾಂಧಿಜೀ ಅವರು ನನಗೆ ಒಂದು ದಿನ ಅಧಿಕಾರ ದೊರೆತರೆ ಗೋಹತ್ಯೆ ನಿಷೇಧ ಮಾಡುತ್ತಿದ್ದೆ ಎಂದು ಹೇಳಿಕೆ ನೀಡುತ್ತಾರೆ. ಅವರ ಹೆಸರನ್ನು ಬಳಸಿಕೊಂಡು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಗೋಹತ್ಯೆಗೆ ನೇರವಾಗಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ದೊಡ್ಡ ದುರಂತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಜೆ. ಜಾರ್ಜ್ ಅವರನ್ನು ಅಲ್ಪಸಂಖ್ಯಾತರ ರಕ್ಷಣೆಗೆ ಗೃಹ ಸಚಿವರನ್ನಾಗಿ ಮಾಡಿದ್ದೇನೆ ಎಂದು ಹೇಳಿಕೆ ನೀಡಿ ಒಲೈಸುತ್ತಾರೆ.
ಈ ಬಗ್ಗೆ ಯಾರು ಮಾತನಾಡಲಿಲ್ಲ. ಒಂದು ವೇಳೆ ಬಿಜೆಪಿ ಅಧಿಕಾರದಲ್ಲಿ ಇದ್ದು ಭಾನುಪ್ರಕಾಶ್ ಮುಖ್ಯಮಂತ್ರಿಯಾಗಿ, ಸಿ.ಟಿ. ರವಿ ಗೃಹ ಸಚಿವನ್ನಾಗಿದ್ದರೆ ಕೆಲವು ಕೋಮುವಾದಿಗಳು, ಬುದ್ದಿಜೀವಿಗಳು ಇದು ಒಂದು ಕೋಮುವಾದ ಎಂದು ಬಿಂಬಿಸುತ್ತಿದ್ದರು. ಆದರೆ, ಮುಖ್ಯಮಂತ್ರಿಗಳೇ ನೇರವಾಗಿ ಇಂತಹ ಹೇಳಿಕೆ ನೀಡಿದರೂ ಯಾವೊಬ್ಬ ಮುಖಂಡ ಮಾತನಾಡದಿರುವುದು ರಾಜ್ಯದ ದೊಡ್ಡದುರಂತ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಸುವರ್ಣಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಚನ್ನಬಸಪ್ಪ, ಸುಡಾ ಮಾಜಿ ಅಧ್ಯಕ್ಷ ಜ್ಞಾನೇಶ್ವರ್, ದತ್ತಾತ್ರಿ, ಮುಖಂಡ ಗಿರೀಶ್ ಪಟೇಲ್, ನಗರಸಭೆ ಸದಸ್ಯ ಸುಭಾಷ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.