ಶಿವಮೊಗ್ಗ

ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

Published On :

ಸಾಗರ: ಅರಣ್ಯ ನಮ್ಮ ಜೀವಾಳ. ಮನುಷ್ಯನ ಬದುಕಿಗೆ ಬೇಕಾದ ಎಲ್ಲಾ ಅಗತ್ಯತೆ ಪೂರೈಸುವ ಜೊತೆಗೆ ಆರೋಗ್ಯಪೂರ್ಣ ವಾತಾವರಣ ನಿರ್ಮಾಣ ಮಾಡುವಲ್ಲಿ ಅರಣ್ಯದ ಪಾತ್ರ ಮಹತ್ವದ್ದು. ಇಂತಹ ಅರಣ್ಯ ಸಂರಕ್ಷಣೆಗಾಗಿ ಪಣತೊಟ್ಟು ಸಂಕಷ್ಟಗಳ ನಡುವೆಯೂ ನಮ್ಮ ಪರಿಸರ ಸಂಪತ್ತು ಕಾಪಾಡಿಕೊಂಡು  ಬರುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ ಹೇಳಿದರು.
ಇಲ್ಲಿನ ಅರಣ್ಯ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಅರಣ್ಯ ಇಲಾಖೆ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.  
ನಿರಂತರ ದೌರ್ಜನ್ಯ: ಪ್ರಕೃತಿಯ ಮೇಲೆ ನಿರಂತರ ಒಂದಿಲ್ಲೊಂದು ರೀತಿಯ ದೌರ್ಜನ್ಯ ನಡೆಯುತ್ತಿದೆ. ಅದರಲ್ಲಿಯೂ ಅರಣ್ಯ ನಾಶ ಹೆಚ್ಚುತ್ತಿದ್ದು, ಅರಣ್ಯ ಹಾಗೂ ಅದನ್ನು ಅವಲಂಬಿಸಿಕೊಂಡಿರುವ ಜೀವ ಸಂಕುಲಗಳನ್ನು ಸಂರಕ್ಷಿಸಲು ನಮ್ಮ ಸಿಬ್ಬಂದಿ ಅಹೋರಾತ್ರಿ ಶ್ರಮಿಸುತ್ತಿದ್ದಾರೆ ಎಂದರು.
ಕಾಡುಗಳ್ಳರನ್ನು ಹಿಡಿಯುವ ಸಂದಭಂದಲ್ಲಿ ನಮ್ಮ ಸಿಬ್ಬಂದಿಗಳು ಹಲವರು ಹುತಾತ್ಮರಾಗಿದ್ದಾರೆ. ಅಂತಹವರನ್ನು ನೆನಪಿಸಿಕೊಳ್ಳುವ ಜೊತೆಗೆ ಅವರಷ್ಟೇ ನಿಷ್ಠೆಯಿಂದ ಅರಣ್ಯ ರಕ್ಷಿಸುವ ಪಣವನ್ನು ನಾವೆಲ್ಲಾ ತೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಮಂಜುನಾಥ್, ವಲಯ ಅರಣ್ಯಾಧಿಕಾರಿ ಸಿ.ಎಂ. ಗಣಪತಿ, ಸಂತೋಷ್, ಅಧೀಕ್ಷಕ ತಿಮ್ಮಪ್ಪ ಹಾಗೂ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.