ಶಿವಮೊಗ್ಗ

ಸಾದು ಸಮಾಜಕ್ಕೆ ಬಣಕಾರ ಅಧ್ಯಕ್ಷ

Published On :

ಮಲೆಬೆನ್ನೂರು: ಸಾದು ವೀರಶೈವ ಸಮಾಜದ ಹರಿಹರ ತಾಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಹನಗವಾಡಿಯ ಬಣಕಾರ ವಿರುಪಾಕ್ಷಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ.
ಹರಿಹರ ತಾ. ಮಲೆಬೆನ್ನೂರಿನಲ್ಲಿ ನಡೆದ ಸರ್ವಧರ್ಮ ಶರಣ ಸಮ್ಮೇಳನದಲ್ಲಿ ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ಸಾನ್ನಿಧ್ಯದಲ್ಲಿ ಗುರುಗಳ ಸೂಚನೆಯಂತೆ ಹರಿಹರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಬಣಕಾರ ವಿರುಪಾಕ್ಷಪ್ಪ ಅಧಿಕಾರ ವಹಿಸಿಕೊಂಡರು.
ಲಿಂಗೈಕ್ಯ ಎಚ್.ಜಿ. ಗುರುಸಿದ್ದಪ್ಪ ಅಗಲಿಕೆಯಿಂದಾಗಿ ತೆರವಾಗಿದ್ದ ಸಮಾಜದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ಸಮಾಜದ ಜಿಲ್ಲಾಧ್ಯಕ್ಷ ಕೆ.ಆರ್. ಜಯದೇವಪ್ಪ ಸಮ್ಮುಖದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹರಿಹರ ತಾಲೂಕು ಅಧ್ಯಕ್ಷರಾಗಿ ಬಣಕಾರ ವಿರುಪಾಕ್ಷಪ್ಪ ಹೆಸರನ್ನು ಸೂಚಿಸಿ, ಅಧಿಕಾರ ವಹಿಸಿಕೊಟ್ಟರು. ಸಮಾಜದ ಮುಖಂಡರು, ಸಮಾಜ ಬಾಂಧವರು, ವಿವಿಧ ಪಕ್ಷಗಳ ಮುಖಂಡರು ಕಾರ್ಯಕ್ರಮದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.