'ಪಾಪಮುಕ್ತ ಜೀವನದಿಂದ ಆತ್ಮ ಸಂತೋಷ'
ಸಾಗರ: ಯಾರು ಧರ್ಮವನ್ನು ಅನುಸರಿಸುತ್ತಾರೋ ಅವರಿಗೆ ಎಂದಿಗೂ ತೊಂದರೆಯಾಗದು. ಧರ್ಮವನ್ನು ನಂಬುವ ಜೊತೆಗೆ ಪಾಪಮುಕ್ತ ಜೀವನವನ್ನು ನಡೆಸಿದಾಗ ಆತ್ಮ ಸಂತೋಷ ಸಿಗುತ್ತದೆ ಎಂದು ಜೈನಮಠದ ಆಕಲಂಕ ಭಟ್ಟಾರಕ ಶ್ರೀ ಹೇಳಿದರು.
ತಾಲೂಕಿನ ಬಿದರೂರು ಭಗವಾನ್ ಮಹಾವೀರ ಬಸದಿಯಲ್ಲಿ ಏರ್ಪಡಿಸಿದ್ದ ದಶಲಕ್ಷಣ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಧಾರ್ಮಿಕ ಆಡಂಬರವನ್ನು ದೂರ ಮಾಡಿ, ಸರಳ ಜೀವನ ಸಾಗಿಸಬೇಕು ಎಂದರು. ಭಾದ್ರಪದ ಮಾಸ ಜೈನರಿಗೆ ಅತ್ಯಂತ ಶ್ರೇಷ್ಠ ಮಾಸವಾಗಿದ್ದು, ಈ ಸಂದರ್ಭದಲ್ಲಿ ದಶಲಕ್ಷಣ ಪರ್ವವೆಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹತ್ತು ಪ್ರಮುಖ ಧರ್ಮಗಳನ್ನು ಆಚರಿಸುವ ಪದ್ಧತಿ ಅನಾದಿಕಾಲದಿಂದಲೂ ನಡೆದು ಬಂದಿದೆ ಎಂದರು.
ಧಾರ್ಮಿಕ ಮನೋಧರ್ಮ: ಅಧ್ಯಕ್ಷತೆ ವಹಿಸಿದ್ದ ಬಬಿತಾ ಪ್ರೇಮಕುಮಾರ ಮಾತನಾಡಿ, ಶ್ರಾವಕರಲ್ಲಿ ಉತ್ತಮವಾದ ಧಾರ್ಮಿಕ ಮನೋಧರ್ಮ ಬರಬೇಕಾದರೆ ಮಠಾಧೀಶರ ಸಾನ್ನಿಧ್ಯ ಅತೀ ಮುಖ್ಯ. ನಾವು ಅಂತಹ ಮಠಗಳನ್ನು ಗೌರವಿಸಬೇಕು. ಧರ್ಮಕಾರ್ಯಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿ.ಟಿ. ಸ್ವಾಮಿ, ಹಿರಿಯ ಪುರೋಹಿತ ಸಿದ್ಧಾರ್ಥ ಇಂದ್ರ, ವಲಯ ಜೈನ ಮಿಲನ್ ಅಧ್ಯಕ್ಷ ಸಿ.ಎನ್.ಜೈನ್ ಮೊದಲಾದವರು ಹಾಜರಿದ್ದರು. ಸಮಿತಿ ಕಾರ್ಯದರ್ಶಿ ಅಶೋಕ್ ಜೈನ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

