ತಾರತಮ್ಯ ನಿವಾರಣೆಗೆ ಗಣೇಶೋತ್ಸವ
ಸೊರಬ: ಗಣೇಶ ಉತ್ಸವ ಕೇವಲ ಧಾರ್ಮಿಕ ಹಿನ್ನಲೆಯಲ್ಲಿ ಆಚರಿಸುವುದಕ್ಕಿಂತ ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಆಚರಿಸುವುದರಿಂದ ನಮ್ಮಲ್ಲಿನ ತಾರತಮ್ಯತೆ ಕಡಿಮೆಯಾಗಿ ಏಕತೆಗೆ ದಾರಿಯಾಗುತ್ತದೆ ಎಂದು ತಾಲೂಕಿನ ಉದ್ರಿ ಗ್ರಾಮದ ವೀರಭದ್ರೇಶ್ವರ ಮಹಾ ಗಣಪತಿ ಸಮಿತಿ ಹೇಳಿದೆ.
ಗ್ರಾಮದಲ್ಲಿ ಇತ್ತೀಚೆಗೆ ಗಣೇಶೋತ್ಸವದ ವೇಳೆ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ವರ್ಷ ಗ್ರಾಮೀಣ ಆಟಗಳಾದ ದುಂಡಿ ಎತ್ತುವ ಸ್ಪರ್ಧೆ, ಸ್ಲೋ. ಸ್ಪೀಡ್ ಸೈಕಲ್ ಸ್ಪರ್ಧೆ, ಕೇರಂ, ಮ್ಯೂಸಿಕಲ್ ಚೇರ್, ರಂಗೋಲಿ, ವಾಲಿಬಾಲ್ ಮೊದಲಾದ ಕ್ರೀಡೆ, ಹಾಡು, ಹಸೆ ಮುಂತಾದವುಗಳನ್ನು ನಡೆಸಲಾಗುತ್ತಿದೆ, ಇದರೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆಯೂ ಇದೆ ಎಂದರು.
ಪ್ರತಿ ವರ್ಷ ಸಮಿತಿ ಸದಸ್ಯರು, ಗ್ರಾಮಸ್ಥರು ವೆಚ್ಚ ಭರಿಸುತ್ತಿದ್ದು, ಅಧಿಕಾರಿ, ರಾಜಕಾರಣಿಗಳನ್ನು ಅವಲಂಬಿಸುತ್ತಿಲ್ಲ, ಗ್ರಾಮದ ಸಹಕರ, ಪಾಲ್ಗೊಳ್ಳುವಿಕೆ ಉತ್ತಮವಾಗಿದ್ದು, ಗಣೇಶನ ಉತ್ಸವಕ್ಕೆ ಇಮ್ಮಡಿ ಉತ್ಸಾಹ ದೊರಕಿದಂತಾಗಿದೆ ಎಂದು ತಿಳಿಸಿದರು. ಸಮಿತಿಯ ಎಸ್. ಅಂಬರೀಶ್, ರವಿ, ಶಿವು, ಮಂಜು, ತಿಪ್ಪೇಶ್, ಪ್ರಶಾಂತಗೌಡ, ಕೆ. ಶಿವಮೂರ್ತಿ, ಮನೋಜ್, ಮಲ್ಲಿಕಾ, ವೀರೇಶ್, ಅಖಿಲ್, ಗಿರೀಶ್, ಚಾಣುಕ್ಯ, ಸುಮಂತ, ಪವನಕುಮಾರ್, ಅಜೀಜ್, ಸದಾನಂದ ಪಾಟೀಲ್, ಪ್ರವೀಣ, ಮಂಜುನಾಥ ಹುಳ್ಳೇರ ಉತ್ಸವದ ಜವಾಬ್ಧಾರಿ ಹೊತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

