ಸೆರೆ ಹಿಡಿದ ಬಿಡಾಡಿ ದನಗಳ ಪರದಾಟ
ಶಿಕಾರಿಪುರ: ಪಟ್ಟಣದಲ್ಲಿ ಬೀಡಾಡಿ ಹಸುಗಳನ್ನು ಸೆರೆಹಿಡಿದ ಪುರಸಭೆ ಬಗ್ಗೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಮೇವಿನ ಅಭಾವದಿಂದ ನರಳುತ್ತಿರುವ ಹಸುಗಳಿಗೆ ಇದೀಗ ಮರುಕವುಂಟಾಗಿ ಕಾರ್ಯಾಚರಣೆ ಬಗ್ಗೆ ಜನಸಾಮಾನ್ಯರಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದೆ.
ಪಟ್ಟಣದ ಜನವಸತಿ ಸ್ಥಳಗಳಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿ ಕಿರಿಕಿರಿ ಉಂಟು ಮಾಡುತ್ತಿದ್ದ ಬೀಡಾಡಿ ದನಗಳನ್ನು ಕರುಗಳ ಸಹಿತ ಪುರಸಭೆ ಸೆರೆಹಿಡಿದು ಪಟ್ಟಣದ ಹೊರವಲಯದ ತ್ಯಾಜ್ಯ ಸಂಸ್ಕರಣ ಘಟಕದ ಬಳಿ ಬಂಧಿಸಿ ಕೆಲ ದಿನವಾಗಿದ್ದು ಹಸು, ಕರುಗಳು ಮೇವಿಲ್ಲದೆ ಪರದಾಡುತ್ತಿದ್ದು ಕೂಡಲೇ ಪುರಸಭೆ ಗೋಶಾಲೆಗೆ ಹಸ್ತಾಂತರಿಸಬೇಕಾಗಿದೆ.
ಈ ಬಗ್ಗೆ ಸ್ಥಳೀಯ ಗೊಲ್ಲರ ಬಸವರಾಜ್ ಮಾತನಾಡಿ, ಮೂಕ ಪ್ರಾಣಿಗಳಿಗೆ ಪ್ರಾಣಹಾನಿಯಾದಲ್ಲಿ ಗೋಹತ್ಯಾ ಪಾಪ ಪುರಸಭೆಯ ಜತೆಗೆ ಜನಪ್ರತಿನಿಧಿಗಳಿಗೆ ಶಾಪವಾಗಿ ಪರಿಣಮಿಸಲಿದೆ ಎಂಬುದನ್ನು ಅರಿಯಬೇಕಾಗಿದೆ ಎಂದರು.
ಪುರಸಭೆಯ ಕರ್ತವ್ಯ ಪ್ರಶಂಸನೀಯವಾದರೂ ಕೂಡಲೆ ರಾಮಚಂದ್ರಾಪುರ ಮಠ, ಹೊಸಗುಂದ ಮಠದ ಗೋಶಾಲೆಗೆ ದನಗಳನ್ನು ಹಸ್ತಾಂತರಿಸುವ ಮೂಲಕ ಭವಿಷ್ಯದ ಅಪಾಯದಿಂದ ಪಾರಾಗಲು ತಿಳಿಸಿದ್ದಾರೆ.
ಸ್ಥಳೀಯ ವಿ.ಹಿಂ.ಪ ಉಪಾಧ್ಯಕ್ಷ ಎಸ್.ಎಂ. ಪ್ರಕಾಶ್ ಮಾತನಾಡಿ, ಪುರಸಭೆ ಹಸುಕರುಗಳ ಕಾರ್ಯಾಚರಣೆ ಕಾಲಕಾಲಕ್ಕೆ ಅಗತ್ಯವಾಗಿದ್ದು, ಹಲವು ಕಾಮಗಾರಿಗಳಿಗೆ ಕೋಟ್ಯಂತರ ಹಣ ವ್ಯಯಿಸುವ ಪುರಸಭೆ ಪಟ್ಟಣ ವ್ಯಾಪ್ತಿಯ ಸೂಕ್ತ ಸ್ಥಳದಲ್ಲಿ ಗೋಶಾಲೆ ಆರಂಭಿಸಿದಲ್ಲಿ ಸ್ಥಳೀಯ ದಾನಿಗಳು ಸೂಕ್ತ ಸಹಕಾರ ನೀಡುವಲ್ಲಿ ಅನುಮಾನವಿಲ್ಲ ಎಂದಿದ್ದಾರೆ.
ಕ್ಷೇತ್ರದ ಶಾಸಕ ಯಡಿಯೂರಪ್ಪನವರು ಹಲವು ವರ್ಷಗಳ ಹಿಂದೆ ಸೂಕ್ತ ವ್ಯವಸ್ಥೆಯ ಗೋಶಾಲೆ ನಿರ್ಮಾಣದ ಕನಸನ್ನು ಹೊಂದಿದ್ದು ನನಸಾಗಿಸಲು ಪುರಸಭೆ ದೃಢ ಸಂಕಲ್ಪದ ಮೂಲಕ ಅಂತಿಮ ನಿರ್ದಾರ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

