ಶಿವಮೊಗ್ಗ

ಬಿಎಸ್‌ವೈ ಭ್ರಷ್ಟಾಚಾರದಿಂದ ಜಿಲ್ಲೆಗೆ ಕಳಂಕ: ಮಧು

Published On :

ಸಾಗರ: ಯಡಿಯೂರಪ್ಪ ಸಿಎಂ ಆಗಿದ್ದಾಗ ಮಾಡಿರುವ ಭ್ರಷ್ಟಾಚಾರದಿಂದ ಜಿಲ್ಲೆಗೆ ಕಳಂಕ ಮೆತ್ತಿಕೊಂಡಿದ್ದು, ಈ ಬಾರಿ ಗೀತಾ ಶಿವರಾಜಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ಈ ಕಳಂಕ ಅಳಿಸಬೇಕಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಹೊಸೂರಿನಲ್ಲಿ ಮಂಗಳವಾರ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಅಭ್ಯರ್ಥಿ ಗೀತಾ ಮಾತನಾಡಿ, ಮಾಜಿ ಸಿಎಂ ಎಸ್. ಬಂಗಾರಪ್ಪ ಹಾಕಿಕೊಟ್ಟ ಮಾರ್ಗದಲ್ಲಿ ನಾನು ನಡೆಯುತ್ತೇನೆ. ನಾನು ಆಯ್ಕೆಯಾದ ನಂತರ ಶಿವಮೊಗ್ಗದಲ್ಲಿ ಇದ್ದು, ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ. ಕೇಂದ್ರ ಸರ್ಕಾರದಲ್ಲಿ ಅರಣ್ಯ ಹಕ್ಕು ಕಾಯ್ದೆ ಹಾಗೂ ಬಗರ್‌ಹುಕುಂ ಕಾಯ್ದೆ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಚಿತ್ರನಟ ಶಿವರಾಜಕುಮಾರ್ ಮಾತನಾಡಿ, ನಾನು ಜೋಗಿ ಸ್ಟೈಲ್‌ನಲ್ಲಿ ಜೋಳಿಗೆ ಬಿಚ್ಚಿ ಮತ ಕೇಳಲು ಬಂದಿದ್ದೇನೆ. ಗೀತಾ ಅವರಿಗೆ ಅನುಭವ ಇಲ್ಲದೆ ಇರಬಹುದು. ಯಾರೂ ಹುಟ್ಟುತ್ತಲೆ ಅನುಭವ ಹೊಂದಿರುವುದಿಲ್ಲ. ಜನರ ಜತೆ ಬೆರೆತಾಗ ಅನುಭವ ಸಹಜವಾಗಿ ಬರುತ್ತದೆ. ಅವರನ್ನು ಗೆಲ್ಲಿಸುವುದರಿಂದ ಮಹಿಳಾ ಪ್ರಾತಿನಿಧ್ಯ ಎತ್ತಿ ಹಿಡಿದಂತೆ ಆಗುತ್ತದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಶ್ರೀಕಾಂತ್, ಮಹಿಳಾ ಉಪಾಧ್ಯಕ್ಷೆ ಜಯಲಕ್ಷ್ಮೀ ನಾರಾಯಣಪ್ಪ, ಪ್ರಮುಖರಾದ ಬಸವರಾಜಗೌಡ ಬೈದೂರು, ಜಾಕೀರ್, ಶ್ರೀಪಾದ ಹೆಗಡೆ, ಕನ್ನಪ್ಪ ಬೆಳಲಮಕ್ಕಿ, ಅಣ್ಣಪ್ಪ ಎಚ್.ಕೆ., ಲೋಕೇಶ ಗಾಳಿಪುರ, ಯೇಸು ಪ್ರಕಾಶ್, ರೋಹಿಣಿ ನಾಗರಾಜ್, ಮಂಜಿನಕಾನು ನಾರಾಯಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.