ಶಿವಮೊಗ್ಗ

ಜೆಡಿಎಸ್ ಗೆಲ್ಲಿಸಿ: ಶಿವಶಂಕರ್

Published On :

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಏ.4
ಮೋದಿ ಪ್ರಧಾನಿ ಆದರೆ ದೇಶಕ್ಕೆ ಕಂಟಕ ಕಾದಿದೆ. ದೇಶದಲ್ಲಿ ಗಲಭೆಗಳಾಗಿ ಅರಾಜಕತೆ ಉಂಟಾಗುತ್ತದೆ ಆದ್ದರಿಂದ ಎಲ್ಲರನ್ನೂ ಸಮನಾಗಿ ಕಾಣುವ ಜೆಡಿಎಸ್ ಗೆಲ್ಲಿಸಬೇಕು ಎಂದು ಹರಿಹರ ಶಾಸಕ ಶಿವಶಂಕರ್ ಹೇಳಿದರು.
ಶಿರಾಳಕೊಪ್ಪ ಹತ್ತಿರದ ಹಿರೇಜಂಬೂರಿನಲ್ಲಿ ಮಾತನಾಡಿದ ಅವರು ಬಿ.ಎಸ್. ಯಡಿಯೂರಪ್ಪನವರು ಲಿಂಗಾಯತ ನಾಯಕರು ಎಂದು ಜಾತಿ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಆದರೆ ಜಾತಿ ಆಧಾರದ ಮೇಲೆ ಮತಯಾಚಿಸುವುದು ತಪ್ಪು ಎಂದ ಅವರು, ಬಿಜೆಪಿ ಸಾಕು ಜೆಡಿಎಸ್ ಬೇಕು ಎಂದರು.
ಶುಭ ಸಂಕೇತ: ಬಂಗಾರಪ್ಪ ಕಡಮೆ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿ ಜನರ ಮನದಲ್ಲಿ ಉಳಿದಿದ್ದಾರೆ. ಅವರ ಮಗಳು ಗೀತಾ ಶಿವರಾಜ್ ಕುಮಾರ್ ಅವರನ್ನು ಹೆಣ್ಣುಮಕ್ಕಳು ಆರತಿ ಎತ್ತಿ ಬರಮಾಡಿಕೊಳ್ಳುತ್ತಿರುವುದು ಶುಭ ಸಂಕೇತ. ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿದೆ ಈ ಗ್ರಾಮಕ್ಕೆ ವಿಜಯೋತ್ಸವ ಆಚರಿಸಲು ಬರುತ್ತೇವೆ ಎಂದರು.
ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಬಂಗಾರಪ್ಪ  ಹಾಕಿಕೊಟ್ಟ ಹಾದಿಯಲ್ಲಿ ಮುನ್ನೆಡೆಯಲು ಹಾಗೂ ಬಗರ್ ಹುಕುಂ ಹೋರಾಟದ ಬಗ್ಗೆ ಮತ್ತು ಜಿಲ್ಲೆಯ ಸಮಸ್ಯೆ ಬಗ್ಗೆ ಹೋರಾಟ ಕೈಗೊಳ್ಳುತ್ತೇನೆ. ಮಹಿಳೆಯರ ಜೊತೆ ಇರುತ್ತೇನೆ ಎಂದರು
ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಚುನಾವಣೆ ಆದಮೇಲೆ ಯಾರ ಕೈಗೂ ಸಿಗುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಂತಹ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ವಿನಂತಿಸಿದರು.
ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಶಾಸಕಿ ಶಾರದಾ ಪೂರ್ಯಾನಾಯ್ಕು ಮಂಚಿಕೊಪ್ಪದಲ್ಲಿ ಮಾತನಾಡಿ, ಇಂದು ಬಂಗಾರಪ್ಪ ನಮ್ಮೊಡನೆ ಇಲ್ಲದಿರಬಹುದು. ಗೀತಾ ಶಿವರಾಜ್ ಕುಮಾರ್ ನಮ್ಮೊಂದಿಗೆ  ಇದ್ದಾರೆ.ಬಂಗಾರಪ್ಪನವರ ಕೆಲಸ ಕಾರ್ಯ ಮುಂದುವರೆಸಲು ಗೀತಾ ಅವರನ್ನು ಗೆಲ್ಲಿಸಿ ಎಂದರು.
ಗ್ರಾಮಸ್ಥರಿಗೆ ನಿರಾಸೆ: ಶುಕ್ರವಾರ ತಾಲೂಕಿನ ಶಿರಾಳಕೊಪ್ಪ ಭಾಗದ ಹರಗಿ, ತೊಗರ್ಸಿ, ತಾಳಗುಂದ, ಬಿಳಕಿ, ಮಲ್ಲೇನಹಳ್ಳಿ, ಸುಣ್ಣದಕೊಪ್ಪ, ಚಿಕ್ಕಜಂಬೂರ, ಹಿರೇಜಂಬೂರು ಮಂಚಿಕೊಪ್ಪ, ಉಡಗಣಿ, ಜಕ್ಕನಹಳ್ಳಿಯಲ್ಲಿ ರಾತ್ರಿ 8 ಗಂಟೆವರೆಗೆ ಗ್ರಾಮದಲ್ಲಿ ಕಾರ್ಯಕ್ರಮ ರೋಡ್ ಶೋ ನಡೆಸಿದಾಗ ಸಾಕಷ್ಟು ಜನರು ಭಾಗವಹಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಬರುತ್ತಾರೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ತಾವು ಬಂದೆವು ನಮಗೆ ನಿರಾಸೆ ಆಗಿದೆ ಎಂದು ಸಾಕಷ್ಟು ಗ್ರಾಮಸ್ಥರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬಳಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಹಿರೇಜಂಬೂರ ಚಂದ್ರಣ್ಣ ಸ್ವಾಗತಿಸಿದರು. ಗಜೇಂದ್ರ, ಶಿವನಗೌಡ, ಮಕಬುಲ್ ಸಾಬ್, ಗಂಗ್ಯಾನಾಯ್ಕ್ ಹಾಗೂ ಹಲವಾರು ಪ್ರಮುಖರು ವೇದಿಕೆ ಮೇಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.