ಶಿವಮೊಗ್ಗ

ಜನರ ಬದುಕಿಗಾಗಿ ಕಾಂಗ್ರೆಸ್ ಹೋರಾಟ: ಕಿಮ್ಮನೆ

Published On :

ಹೊಸನಗರ: ಕೇವಲ ಜನರ ಭಾವನೆ ಕೆರಳಿಸಿ ಆಟವಾಡುವ ಬಿಜೆಪಿ ಒಂದು ಕಡೆಯಾದರೆ ಜನರ ಬದುಕಿಗಾಗಿ ಹೋರಾಟ ಮಾಡುವ ಪಕ್ಷ ಕಾಂಗ್ರೆಸ್ ಆಗಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ತಾಲೂಕಿನ ಮಾಸ್ತಿಕಟ್ಟೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, 60 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎನ್ನುವ ಬಿಜೆಪಿ ದೇಶಕ್ಕೆ ಮಾಡಿದ ತ್ಯಾಗ ಯಾವುದಾದರೂ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ನಾಲ್ಕು ಬಾರಿ ಗೆದ್ದ ಮಾತ್ರಕ್ಕೆ ತಾನೇ ಸುಪ್ರೀಂ ಎನ್ನುವ ಬಿಜೆಪಿ ತರ್ಕವನ್ನು ಟೀಕಿಸಿದ ಅವರು, ಮೋದಿ ಬಗ್ಗೆ ಕೇವಲ ಗುಲ್ಲೆಬ್ಬಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಗೆದ್ದ ಮಾತ್ರಕ್ಕೆ ಎಲ್ಲರೂ ಒಳ್ಳೆಯವರಲ್ಲ, ಸೋಲುಂಡವರೆಲ್ಲ ಕೆಟ್ಟವರಲ್ಲ ಎಂದರು.
ಕಾಂಗ್ರೆಸ್ ಸೇರ್ಪಡೆ: ಖೈರುಗುಂದ ಗ್ರಾಪಂ ಮಾಜಿ ಅಧ್ಯಕ್ಷ ಬಿಜೆಪಿಯ ಜಿಲ್ಲಾ ಪ್ರಮುಖ ವಿದ್ಯಾನಂದರಾವ್, ಹಾಲಿ ಅಧ್ಯಕ್ಷೆ ನೀಲಾವತಿ ವಿದ್ಯಾನಂದರಾವ್ ಮತ್ತಿತರರು ಶಿಕ್ಷಣ ಸಚಿವ ಕಿಮ್ಮನೆ ಮತ್ತು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಂಜುನಾಥ ಭಂಡಾರಿ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದರು.
ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್, ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣರಾವ್, ಪ್ರಮುಖರಾದ ರಾಮಚಂದ್ರರಾವ್, ಹಾಲಗದ್ದೆ ಉಮೇಶ್, ಅಂತೋನಿ ಸಿಕ್ವೇರಾ, ಯಡೂರು ರಾಜಾರಾಂ, ಮಹೇಶ್, ಅನಿಲ್, ಸುನಿಲ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.