ಹಾರೋಹಿತ್ಲು, ಭೀಮನಕೆರೆಯಲ್ಲಿ ಮತದಾನ ವಿಳಂಬ
ಹೊಸನಗರ: ತಾಲೂಕಿನ ನಕ್ಸಲ್ ಪೀಡಿತ ಗ್ರಾಮ ಕೊರನಕೋಟೆಯಲ್ಲಿ ಮತದಾನಕ್ಕೆ ಗ್ರಾಮಸ್ಥರ ಬಹಿಷ್ಕಾರ. ಭೀಮನಕೆರೆ ಮತ್ತು ಹಾರೋಹಿತ್ಲು ಗ್ರಾಮದಲ್ಲಿ ಮತಯಂತ್ರ ದೋಷದಿಂದಾಗಿ ಮತದಾನ ವಿಳಂಬ. ಬಿಟ್ಟರೆ ತಾಲೂಕಿನಾದ್ಯಂತ ಶಾಂತಿಯುತ ಮತದಾನ ನಡೆಯಿತು.
ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ನಿಧಾನಗತಿಯ ಮತದಾನ ನಡೆದು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಅವಧಿಯಲ್ಲಿ ಸಾಕಷ್ಟು ಬೂತ್ಗಳಲ್ಲಿ ಚುನಾವಣಾ ಸಿಬ್ಬಂದಿ ಕೆಲಸವಿಲ್ಲದೆ ಕುಳಿತಿದ್ದು ಕಂಡುಬಂತು.
ನಂತರ ಮತದಾನ ಬಿರುಸಿನ ಕೂಡಿತ್ತು. ಇದಕ್ಕೆ ಸುಡುಬಿಸಿಲು ಪ್ರಮುಖ ಕಾರಣವಾಗಿತ್ತು.
ಮತಗಟ್ಟೆ ಸಿಂಗಾರ: ಪ್ರತಿ ಹೋಬಳಿಯಲ್ಲಿ ಒಂದು ಮತಗಟ್ಟೆಯನ್ನು ಮಾದರಿ ಮತಕೇಂದ್ರವಾಗಿ ಗುರುತಿಸಲಾಗಿದ್ದು, ಆ ಮತಗಟ್ಟೆಗಳನ್ನು ತಳಿರು ತೋರಣದಿಂದ ಸಿಂಗರಿಸಿ, ಶಾಮಿಮಾನ, ಖುರ್ಚಿ ಹಾಕಿ ಮತ ಚಲಾಯಿಸಲು ಬರುತ್ತಿದ್ದ ಜನರನ್ನು ಉಪಚರಿಸುತ್ತಿದ್ದ ರೀತಿ ಗಮನಸೆಳೆಯಿತು.
ಮತದಾರರಿಗಾಗಿ ಮತಕೇಂದ್ರದಲ್ಲಿ ಸಹಾಯವಾಣಿ ಸೌಲಭ್ಯ ಒದಗಿಸಿದ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಕೆಲಸವಿಲ್ಲದಂತಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

