ಅಭಿರುಚಿ ಗುರುತಿಸುವಲ್ಲಿ ರಂಗಭೂಮಿ ವಿಫಲ
ಶಿವಮೊಗ್ಗ: ನಮ್ಮಲ್ಲಿ ಏಕಕಾಲದಲ್ಲಿ ಹಲವು ಕರ್ನಾಟಕಗಳಿದ್ದು, ಬೆಸೆಯುವ ಸಾಮರ್ಥ್ಯ ನಾಟಕಕ್ಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಮಲ್ಲಿಕಾ ಘಂಟಿ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಕಲಾವಿದರು- ಹವ್ಯಾಸಿ ರಂಗತಂಡಗಳ ಒಕ್ಕೂಟವು ಆಯೋಜಿಸಿದ್ದ ಶಿವಮೊಗ್ಗ ರಂಗ ಹಬ್ಬ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕರ್ನಾಟಕವು ಹಲವು ಭಾಷೆ, ವಿಭಿನ್ನತೆಗಳ ನಾಡಾಗಿದೆ. ನಾಟಕವು ಸಂದೇಶದ ಮೂಲಕ ಒಗ್ಗೂಡಿಸಬಹುದು ಎಂದರು.
ಜನರ ಅಭಿರುಚಿ ಪೂರೈಸಿ: ರಂಗಭೂಮಿ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವವರಿಗೆ ಆತಂಕವಾಗಿದೆ. ಜನರು ನಾಟಕಗಳಿಗಿಂತ ಟಿವಿಗಳತ್ತ ಸಾಗಿದ್ದಾರೆ. ಟಿವಿ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು, ರಂಗಭೂಮಿಯ ಬಗ್ಗೆ ಪ್ರಜ್ಞೆ ಇಟ್ಟುಕೊಂಡ ಜನರು, ಇದರಲ್ಲಿ ತೊಡಗಿಕೊಂಡವರು ಜನರಿಗೆ ಏನು ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿರುವುದೇ ಕಾರಣ ಎಂದರು.
ಹಿಂದೆ ನಾಟಕಗಳಿಗೆ ಸಾವಿರಾರು ಜನರು ಬರುತ್ತಿದ್ದರು. ಸಾವಿರಾರು ಜನ ನಾಟಕ ನೋಡ್ತಿದ್ರು. ಯಾರಿಗೂ ಕರೆಬೇಕಾದ ಅಗತ್ಯ ಇರಲಿಲ್ಲ. 70ರ ಸಂದರ್ಭದಲ್ಲಿ ರಾಜಕೀಯ ಪಲ್ಲಟಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಾಟಕಗಳು ಮಾಡಿದ್ದವು ಎಂದು ನೆನಪಿಸಿಕೊಂಡರು.
ನಾಟಕ ಎಂದರೆ ಪ್ರೇಕ್ಷ: ಪ್ರೇಕ್ಷಕರಿಗೆ ಏನು ಬೇಕು ಎಂಬುದನ್ನು ಏನು ಬೇಕು ಎಂಬುದನ್ನು ಗುರುತಿಸುವುದರಲ್ಲಿ ವಿಫಲರಾಗಿದ್ದೇವೆ. ಇವತ್ತು ಜನರು ತಮ್ಮ ಒತ್ತಡ ದೂರ ಮಾಡುವುದಕ್ಕಾಗಿಯೇ ನಾಟಕ ನೋಡಲು ಬರುತ್ತಾರೆ. ನಾಟಕ ಎಂದರೆ ಪ್ರೇಕ್ಷಕ, ನಿರ್ದೇಶಕ, ನಟರು. ಇವರಿಗೆ ರಂಗಭೂಮಿಯ ಶಕ್ತಿ ಅರಿವಾದರೆ ಜನರನ್ನು ಮತ್ತೆ ರಂಗಭೂಮಿಯತ್ತ ಕರೆತರುವುದು ಸಾಧ್ಯವಾಗುತ್ತೆ ಎಂದರು.
ನಾಟಕವೆಂದರೆ ಜನರ ಭಾವನೆಗಳನ್ನು ಬಡಿದೆಬ್ಬಿಸುವುದಲ್ಲ. ಸಣ್ಣ ಮಟ್ಟಿನ ತರಂಗಗಳನ್ನು ಉಂಟುಮಾಡಬೇಕು. ನಾಟಕ ಓದಿದಾಗ ದಕ್ಕುವ ಅನುಭವವೇ ಬೇರೆ. ನೋಡಿದಾಗ ಸಿಗುವ ಅನುಭವವೇ ಬೇರೆ. ಮಹಾತ್ಮ ಗಾಂಧೀಜಿ ಅವರು ಸತ್ಯಹರಿಶ್ಚಂದ್ರ ಕತೆ ಓದಿ ಬದಲಾಗುವುದು ಸಾಧ್ಯವಾದರೆ ಮತ್ತೊಬ್ಬ ಗಾಂಧಿ ಏಕೆ ಹುಟ್ಟಲಿಲ್ಲ ಎಂಬುದರಲ್ಲಿಯೂ ಸಹ ರಂಗಭೂಮಿಯ ವಿಫಲತೆ ಇದೆ ಎಂದರು.
ಶಿವಮೊಗ್ಗ ಹಬ್ಬ ಸಂಚಾಲಕ ವೈದ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಕಲಾವಿದರು ಒಕ್ಕೂಟದ ಅಧ್ಯಕ್ಷ ಪ್ರೊ. ಎಸ್.ಸಿ. ಗೌರಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕಾಂತೇಶ್ಕ್ದರಮಂಡಲಗಿ, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ, ಶಾಯರಿ ಕವಿ ಇಟಗಿ ಈರಣ್ಣ ಇದ್ದರು.
ಗಣೇಶ್ ಕೆಂಚನಾಲ ನಿರೂಪಿಸಿದರು. ಸಹ್ಯಾದ್ರಿ ಕಲಾತಂಡದ ಕಲಾವಿದರು ರಂಗಗೀತೆ ಹಾಗೂ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ನಂತರ ಹೊಂಗಿರಣ ತಂಡದ ಕಲಾವಿದರು ಚಂದ್ರಶೇಖರ ಹಿರೇಗೋಣಿಗೆರೆ ಅವರ ನಿರ್ದೇಶನದಲ್ಲಿ ಆಗಾ ಅಶ್ರ್ ಕಶ್ಮೀರಿ ಅವರ ಯಹೂದಿ ಹುಡುಗಿ ನಾಟಕ ಪ್ರದರ್ಶಿಸಿದರು. ಇಟಗಿ ಈರಣ್ಣ ಅವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

