ಸೊರಬ ತಾಲೂಕಲ್ಲಿ ವರ್ಷದಿಂದ ಅಭಿವೃದ್ಧಿ ಕಾರ್ಯ ಸ್ಥಗಿತ
ಸೊರಬ: ಸತತ ಒಂದು ವರ್ಷದಿಂದ ತಾಲೂಕಿನ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದ್ದು, ಒಂದೆಡೆ ನೀರಿಗೆ ಹಾಹಾಕಾರ, ಇನ್ನೊಂದೆಡೆ ರಸ್ತೆ ಕೆಲಸಗಳ ಆಮೆ ನಡಿಗೆ ಗತಿಯಿಂದ ಪಟ್ಟಣದ ಜನ ಧೂಳು ಕುಡಿಯುವ ಪರಿಸ್ಥಿತಿ ಏರ್ಪಟ್ಟಿದೆ.
ಆಶ್ವಾಸನೆಗಳು ಧೂಳಿನಲ್ಲಿ ಮುಳುಗಿದ್ದು, ಸಾಮಾನ್ಯರ ಜನಜೀವನ ಸ್ಥಿತಿಯನ್ನು ಯಾರೂ ಕೇಳುವವರಿಲ್ಲ.
ಇತ್ತ ಪಟ್ಟಣದ ರಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದು ಮೂರ್ನಾಲ್ಕು ವರ್ಷವೇ ಕಳೆದಿದೆ, ಇತ್ತ ದುರಸ್ತಿಯೂ ಇಲ್ಲ, ಅಗಲೀಕರಣವೂ ಇಲ್ಲ. ಹಾಗಾಗಿ ಪಟ್ಟಣದ ಮುಖ್ಯ ರಸ್ತೆ ಪ್ರಯಾಣದಲ್ಲಿ ಹರಸಾಹಸ ಪಡುವಂತಾಗಿದೆ. ಈಗ ಸಾಲದೆಂಬಂತೆ ಪಟ್ಟಣದ ದಂಡಾವತಿ ಸೇತುವೆ ಹತ್ತಿರ ಹಾಗೂ ಭೂತನ ಏರಿನಲ್ಲಿ ಮುಖ್ಯರಸ್ತೆಯನ್ನು ಅಗೆದು ಹಾಕಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ವಾಹನಗಳು ಕಾನಕೇರಿ ರಸ್ತೆ, ಚಿಕ್ಕಪೇಟೆ ರಸ್ತೆಯ ಬಳಸು ಹಾದಿಯಲ್ಲಿ ಚಲಿಸುತ್ತಿರುವುದರಿಂದ ಆ ರಸ್ತೆಯ ಅಕ್ಕಪಕ್ಕದ ಮನೆಗಳವರು ಸಹಾ ಶುದ್ಧ ಗಾಳಿಯಿಂದ ವಂಚಿತರಾಗಿದ್ದಾರೆ.
ಇಲಾಖೆ, ಆಡಳಿತದ ನಿಧಾನಗತಿಯಿಂದ ಬೇಸತ್ತಿರುವ ನಿವಾಸಿಗಳು ಈ ಕೂಡಲೇ ಅಗೆದ ರಸ್ತೆಗೆ ಟಾರ್ ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪಿಡಬ್ಲೂಡಿ ಇಲಾಖೆಯವರಲ್ಲಿ ಗ್ರಾಮಸ್ಥರು ವಿನಂತಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

