ಪ್ರೇಕ್ಷಕರ ರಂಜಿಸಿದ ರಾಜ್ಯಮಟ್ಟದ ಕುಸ್ತಿ
ಭದ್ರಾವತಿ: ಶ್ರೀಹಳದಮ್ಮದೇವಿ ಜಾತ್ರೆ ಅಂಗವಾಗಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯ ರಾಜ್ಯಮಟ್ಟದ ಕುಸ್ತಿ ಪಂದ್ಯಗಳು ಶನಿವಾರ ಸಂಜೆ ಪಟ್ಟಣದ ಕನಕ ಮಂಟಪ ಮೈದಾನದಲ್ಲಿ ಪ್ರಾರಂಭವಾದವು. ಭಾನುವಾರ ಸಂಜೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯ ನಡೆಯಲಿವೆ. 10 ಜೋಡಿ ರಾಜ್ಯಮಟ್ಟದ ಕುಸ್ತಿ ಪಟುಗಳು ಜಿಲ್ಲೆಯ ವಿವಿಧ ತಾಲೂಕುಗಳಿಂದ ಭಾಗವಹಿಸಿ ಪ್ರಶಸ್ತಿಗಾಗಿ ಸೆಣಸಾಡಿದರು. ಪ್ರೇಕ್ಷಕರು ಉತ್ತಮ ಪಟ್ಟುಗಳನ್ನು ಕುಸ್ತಿ ಪಟುಗಳು ಹಾಕಿದಾಗ ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದರು. ಭಾನುವಾರ ಸಂಜೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯ ನಡೆಯಲಿದ್ದು, ದೇಶದ ನಾನಾ ರಾಜ್ಯಗಳ ಖ್ಯಾತ ಕುಸ್ತಿ ಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುವರು ಎಂದು ಆಯೋಜಕರು ತಿಳಿಸಿದ್ದಾರೆ. ಇದರಲ್ಲಿ ನಾಡಕೇಸರಿ ಪ್ರಶಸ್ತಿ ಪಡೆಯುವ ಕುಸ್ತಿ ಪಟುವಿಗೆ 1 ಕೆ.ಜಿ. ತೂಕದ ಬೆಳ್ಳಿಗದೆ ಮತ್ತು 1 ಲಕ್ಷಗಳು ನಗದು ಬಹುಮಾನ ನೀಡಲಾಗುವುದು. ಈ ಪಂದ್ಯಾವಳಿಗೆ ಒಟ್ಟು 6 ಲಕ್ಷ ನಗದು ಬಹುಮಾನ ನೀಡಲಾಗುತ್ತಿದ್ದು, ಎಲ್ಲಾ ಬಹುಮಾನಗಳನ್ನು ಸಮಾಜಸೇವಕ ಹಾಗೂ ಜಾತ್ರಾ ಮಹೋತ್ಸವ ಸಮಿತಿ ಪ್ರಮುಖ ಪ್ರಾಯೋಜಕ ಸಿ.ಮಹೇಶ್ಕುಮಾರ್ ಅವರೇ ಪ್ರಾಯೋಜಿಸುತ್ತಿದ್ದಾರೆ.
'ಎಲ್ಲ ಭಾಷೆಗಳಲ್ಲಿ ಸಣ್ಣ ಕಥೆ'
ಶಿವಮೊಗ್ಗ:ಅತಿ ಸಣ್ಣ ಕಥೆಗಳೆಂದರೆ ಅತ್ಯಂತ ಕಡಿಮೆ ಪದಗಳಲ್ಲಿ ಅನುಭವವನ್ನು ನಿರೂಪಿಸುತ್ತಾ ಬದುಕನ್ನು ಹಿಡಿದಿಡುವ ಪ್ರಯತ್ನ ಎಂದು ಲೇಖಕ ಎಸ್. ದಿವಾಕರ್ ಹೇಳಿದರು. ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಅತಿ ಸಣ್ಣ ಕಥೆಗಳ ಬಗ್ಗೆ ಉಪನ್ಯಾಸ ನೀಡುತ್ತಾ, ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಅತಿ ಸಣ್ಣ ಕಥೆಗಳು ಬಂದಿವೆ. ಆದರೆ ಅವು ವಿಮರ್ಶಕರ ಗಮನ ಸೆಳೆದಿದ್ದು 5 ದಶಕದಿಂದ ಈಚೆಗಷ್ಟೇ. ಶಿಷ್ಟ ಸಾಹಿತ್ಯದ ಕಥೆಗಳಲ್ಲಿ ಆರಂಭ, ಮಧ್ಯೆ, ಅಂತ್ಯವಿರುತ್ತದೆ. ಆದರೆ ಅತಿ ಸಣ್ಣ ಕಥೆಗಳ ಹಂದರ ಈ ರೀತಿ ಇರುವುದಿಲ್ಲ. ನೇರವಾಗಿ ಘಟನೆ ನಿರೂಪಿಸುವ ಮೂಲಕ ಬದುಕನ್ನು ಹಿಡಿದಿಡುತ್ತವೆ. ಸಣ್ಣ ಕಥೆ ಓದುವ ಕ್ರಮದಲ್ಲಿಯೇ ನಮ್ಮ ಅನುಭವವೂ ಸೇರಿಕೊಳ್ಳುತ್ತದೆ. ಹಾಗಾಗಿಯೇ ವಿಶಿಷ್ಟವಾಗಿವೆ ಎಂದ ಎಸ್. ದಿವಾಕರ್, ಇತ್ತೀಚಿನ ದಿನಗಳಲ್ಲಿ ಏನನ್ನೇ ಹೇಳಿದರು ಅವರ ರಿಲವೆನ್ಸಿ ಏನು ಎಂಬ ಪ್ರಶ್ನೆ ಕೇಳಲಾಗುತ್ತದೆ. ಯಾವ ಸಾಹಿತ್ಯಕ್ಕೂ ರಿಲವೆನ್ಸಿ ಇರುವುದಿಲ್ಲ. ಅದನ್ನು ನಾವು ಕಂಡುಕೊಳ್ಳಬೇಕಷ್ಟೇ ಎಂದರು. ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಸಿ.ಯು. ಸೋಮಶೇಖರ್ ಉಪಸ್ಥಿತರಿದ್ದರು. ಆಶಾಲತ ನಿರೂಪಿಸಿದರು. ಬಳಿಕ ಸಂವಾದ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

