ಶಿವಮೊಗ್ಗ

ಒನ್ ವೇ ಬದಲು ಪರ್ಯಾಯ ಕ್ರಮ ತೆಗೆದುಕೊಳ್ಳಲಿ

Published On :

ಶಿವಮೊಗ್ಗದ ಜೈಲ್ ರಸ್ತೆ ಮತ್ತು ಗಾಂಧಿನಗರ ಮುಖ್ಯರಸ್ತೆಯನ್ನು ಏಕಮುಖ ಸಂಚಾರ ಮಾಡಿರುವ ಕ್ರಮ ಪೂರ್ಣ ಪ್ರಮಾಣದಲ್ಲಿ ಸರಿಯಲ್ಲ. ಏಕಮುಖ ಸಂಚಾರದಿಂದ ಹೊಸಮನೆ, ವೆಂಕಟೇಶ ನಗರ, ಗಾಂಧಿ ನಗರ ಸೇರಿದಂತೆ ಅನೇಕ ಬಡಾವಣೆಯ ನಾಗರಿಕರು ಪರಿತಪಿಸುವಂತಾಗಿದೆ, ಸುಗಮವಾಗಿ ಮನೆ ಸೇರದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆ ಪ್ರದೇಶದವರ ಓಡಾಡಕ್ಕೆ ಈ ಭಾಗದವರು ಸ್ವಾತಂತ್ರ್ಯ ಕಳೆದುಕೊಂಡಂತಾಗಿದೆ. ಏಕಮುಖ ಸಂಚಾರದ ಬದಲು ಮೊದಲು ರಸ್ತೆಯನ್ನು ಅಭಿವೃದ್ಧಿಪಡಿಸಿ ಸುಗಮ ಸಂಚಾರ ಮಾಡಲಿ. ನಂತರ ಏಕಮುಖ ಪಾರ್ಕಿಂಗ್ ವ್ಯವಸ್ಥೆ ಮಾಡಲಿ ಇಲ್ಲವೇ ಜೈಲ್ ರಸ್ತೆಯಲ್ಲಿ ಪಾರ್ಕಿಂಗ್ ಸಂಪೂರ್ಣವಾಗಿ ತೆಗೆದು ಹಾಕಲಿ. ದ್ವಿಚಕ್ರ, ತ್ರಿಚಕ್ರ ವಾಹನ ಹೊರತಾಗಿ ಬೇರೆ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಬಾರದು. ಇದರಿಂದ ಸಹಜವಾಗಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತದೆ. ಇದರ ಹೊರತಾಗಿ ಏಕಮುಕ ಸಂಚಾರ ಎಂದು ನಿಬಂರ್ಂಧ ಹಾಕಿದರೆ ಜನ ಸಾಮಾನ್ಯರಿಗೆ ಹೆಚ್ಚು ಸಮಸ್ಯೆಯಾಗುತ್ತದೆ. ಆಟೋ ಪ್ರಯಾಣಿಕರಿಗೂ ಸಹ ಹೆಚ್ಚಿನ ಹಣ ತೆರಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಆಲೋಚಿಸಿ ಕ್ರಮಕೈಗೊಳ್ಳಬೇಕು.
- ಫ್ರಾನ್ಸಿಸ್ ದೇವದಾನಂ, ಶಿವಮೊಗ್ಗ



ಬಲ್ ನಿಲ್ದಾಣ ಅಭಿವೃದ್ಧಿ ಎಂದು?
ಸಾಗರ ಶಿವಮೊಗ್ಗ ಜಿಲ್ಲೆಯ ಮುಂಚೂಣಿಯಲ್ಲಿರುವ ತಾಲೂಕು ಕೇಂದ್ರ. ಆದರೆ, ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಸಮಸ್ಯೆ ಮಿತಿಮೀರಿದೆ. ಅಗತ್ಯಕ್ಕಿಂತ ಹೆಚ್ಚಾಗಿನ ಬಸ್ ಪರ್ಮಿಟ್ ಇರುವುದರಿಂದ ಬಸ್ ನಿಲ್ದಾಣದೊಳಗೆ ಬಸ್ ನಿಲ್ಲಿಸಲೂ ಬಸ್ ಚಾಲಕರು, ನಿರ್ವಾಹಕರು ಬರದಾಡುವಂತಾಗಿದೆ. ನೂರಾರು ಬಸ್‌ಗಳು ಇಲ್ಲಿಗೆ ಬಂದು ಹೋಗುವ ಕಾರಣ ಸರಿಯಾದ ಸಮಯಕ್ಕೆ ಬಸ್ ನಿಲ್ದಾಣದಲ್ಲಿ ನಿಲ್ಲಿಸುವುದು ಸವಾಲಾಗಿದೆ. ಬಸ್ ನಿಲ್ದಾಣದೊಳಗೆ ತರುವುದಕ್ಕೆ ಸಾಗರದ ಮುಖ್ಯ ರಸ್ತೆಯನ್ನೇ ಬಳಸಿಕೊಳ್ಳಬೇಕಾಗಿದೆ. ಹೀಗಿ ಪ್ರತಿ ದಿನ ಇಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಸಂಬಂಧಪಟ್ಟವರು ಶೀಘ್ರವೇ ಸಮಸ್ಯೆ ಇತ್ಯರ್ಥಪಡಿಸುವ ಅಗತ್ಯವಿದೆ.
- ರಮೇಶ್, ವಿನೋಬನಗರ, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.