ಮತ್ತು ಬರುವ ಔಷಧಿ ನೀಡಿ ಚಿನ್ನದ ಉಂಗುರ, ಮೊಬೈಲ್ ಕಳವು
ಶಿವಮೊಗ್ಗ: ಮತ್ತು ಬರುವ ಔಷಧಿ ನೀಡಿ ಶಿವಮೊಗ್ಗ ಜ್ಯುವೆಲರಿ ವರ್ಕ್ಸ್ ಮಾಲೀಕರನ್ನು ವಂಚಿಸಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಮಾಲೀಕ ಮಂಜುನಾಥ್ ವಂಚನೆಗೊಳಗಾದವರು. ಇವರನ್ನು ಭದ್ರಾವತಿ ಪಾರ್ಕ್ಗೆ ಕರೆಸಿಕೊಂಡ ಭಾರತಿ ಮತ್ತು ರಜನಿ ಎಂಬವರು ಜ್ಯೂಸ್ನಲ್ಲಿ ಮತ್ತು ಬರುವ ಔಷಧ ಹಾಕಿ ಕೊಟ್ಟು ಮಂಜುನಾಥ್ ಅವರ ಪ್ರಜ್ಞೆ ತಪ್ಪಿಸಿದ್ದಾರೆ. ಪ್ರಜ್ಞೆ ಮರುಕಳಿಸಿದಾಗ 12 ಗ್ರಾಂ ತೂಕದ ಉಂಗುರ, ಮೊಬೈಲ್, 800 ಅಪಹರಿಸಿರುವುದು ಗೊತ್ತಾಗಿದೆ. ಈ ಸಂಬಂಧ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಂಟೀನ್ ಕಳವು
ಶಿವಮೊಗ್ಗ: ಇಲ್ಲಿನ ಕಲ್ಲಹಳ್ಳಿ ವಿನೋಬ ನಗರದ ಕಾಶಿಪುರ ರಸ್ತೆಯಲ್ಲಿರುವ ಗುರುಸಿದ್ಧಪ್ಪ ಎಂಬವರ ಕ್ಯಾಂಟೀನ್ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು 7500 ಮೌಲ್ಯದ ಮೂರು ಸಿಲಿಂಡರ್ ಅಪಹರಿಸಿ ಪರಾರಿಯಾಗಿದ್ದಾರೆ.
ಜೂಜಾಟ: ರಾಗಿಗುಡ್ಡದ ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಓಸಿ ಜೂಜಾಟದಲ್ಲಿ ತೊಡಗಿದ್ದ ಸದ್ದಾಂ, ರೂಕು ಎಂಬವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 4,84,510 ಹಾಗೂ 4 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

