ಉಪವಾಸ ಸತ್ಯಾಗ್ರಹ: ಬೇಳೂರು ಬೆದರಿಕೆ
ಸಾಗರ: ಮಾರಿಜಾತ್ರೆಯ ಒಳಗಾಗಿ ಪಟ್ಟಣದ ಐತಿಹಾಸಿಕ ಮಹಾಗಣಪತಿ ದೇವಸ್ಥಾನದ ಮುಖಮಂಟಪದ ಗೋಪುರವನ್ನು ಪುನಾ ನಿರ್ಮಿಸದಿದ್ದರೆ ದೇವಸ್ಥಾನದ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಗೋಪುರ ಕುಸಿದು ಹತ್ತು ತಿಂಗಳು ಕಳೆಯುತ್ತಾ ಬಂತು. ಆದರೆ ಈ ವರೆಗೆ ಅದನ್ನು ದುರಸ್ತಿಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ. ಕ್ಷೇತ್ರದ ಶಾಸಕರಾಗಿರುವ ಕಾಗೋಡು ತಿಮ್ಮಪ್ಪನವರಿಗೆ ವೈಯಕ್ತಿಕವಾಗಿ ದೇವರ ಬಗ್ಗೆ ನಂಬಿಕೆ ಇಲ್ಲದಿರಬಹುದು. ಆದರೆ ಅವರಿಗೆ ಓಟು ಕೊಟ್ಟ ಮತದಾರರಿಗೆ ದೇವರಲ್ಲಿ ನಂಬಿಕೆ ಇದೆ. ತಕ್ಷಣ ಗೋಪುರ ನಿರ್ಮಿಸದಿದ್ದರೆ ಜಾತ್ರೆ ಹೊತ್ತಿನಲ್ಲಿಯೇ ಉಗ್ರ ಪ್ರತಿಭಟನೆ ನಡೆಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಟೀಕೆ: ಈಗಿನ ರಾಜ್ಯ ಸರ್ಕಾರ ಎರಡನೇ ಬಜೆಟ್ ಮಂಡಿಸುವ ತಯಾರಿಯಲ್ಲಿದ್ದರೂ ಹಿಂದೆ ಮಂಜೂರಾದ ಹಣಕ್ಕೆ ಟೆಂಡರ್ ಅನುಮೋದನೆ ಪಡೆಯಲು ಸಾಧ್ಯವಾಗಿಲ್ಲ. ಇದು ಕಾಗೋಡರ ನಿಷ್ಕ್ರಿಯತೆಯನ್ನು, ವೈಫಲ್ಯವನ್ನು ತೋರಿಸುತ್ತದೆ. ಕ್ಷೇತ್ರದಲ್ಲಿ ಹಿಂದೆ ಮಂಜೂರಾದ ಕಾಮಗಾರಿಗಳು ನಡೆಯುತ್ತಿದೆಯೇ ಹೊರತು ಯಾವುದೆ ಹೊಸ ಕಾಮಗಾರಿ ನಡೆಯುತ್ತಿಲ್ಲ. ಕಾಗೋಡರಿಂದ ಕ್ಷೇತ್ರದ ಅಭಿವೃದ್ಧಿಗೆ ಬಿಡಿಗಾಸು ತರಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಗ್ರಾಮಗಳಿಗೆ ಹೋಗಿ ಉದ್ಯೋಗ ಖಾತ್ರಿ ಮಾಡಿ ಎಂದು ಒತ್ತಾಯಿಸುತ್ತಿರುವುದನ್ನು ನೋಡಿದರೆ, ಜನರನ್ನು ಕೂಲಿಯಾಳುಗಳಾಗಿ ಮಾಡುವ ಉದ್ದೇಶವನ್ನು ಹೊಂದಿದಂತಿದೆ. ಅದರ ಬದಲು ಹೊಸ ಉದ್ಯೋಗ ಸೃಷ್ಟಿಗೆ ಪ್ರಯತ್ನ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ಅಡಕೆ ನಿಷೇಧ ಖಂಡಿಸಿ ಫೆ.6ರಂದು ಶಿವಮೊಗ್ಗದಲ್ಲಿ ಅಡಕೆ ಬೆಳೆಗಾರರ ಸಂಘ ಹಮ್ಮಿಕೊಂಡಿರುವ ಧರಣಿಯಲ್ಲಿ ತಾವು ಪಾಲ್ಗೊಳ್ಳುವುದಾಗಿ ತಿಳಿಸಿದರು. ಅದರಂತೆ ಚಂದ್ರಶೇಖರ, ಎಂ.ಜಿ. ದೀನದಯಾಳ್, ಕಲಸೆ ಚಂದ್ರಪ್ಪ, ಗಣಪತಿ, ಕೃಷ್ಣಮೂರ್ತಿ, ಎಂ.ಕೆ. ತಿಮ್ಮಪ್ಪ, ಬಿ.ಆರ್. ವೆಂಕಟೆಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

