ಶಿವಮೊಗ್ಗ

'ಲೋಕ' ಕಣಕ್ಕೆ ಬಿಎಸ್ವೈ: ಲೆಕ್ಕಾಚಾರ ಶುರು

Published On :

ಶಿವಮೊಗ್ಗ: ಬಿ.ಎಸ್. ಯಡಿಯೂರಪ್ಪ ಅವರು ಲೋಕಸಭೆ ಚುನಾವಣೆ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಮಲೆನಾಡಿನ ಚುನಾವಣಾ ಕಣ ರಂಗೇರುವುದು ನಿಶ್ಚಿತ. ಪ್ರಬಲ ಎದುರಾಳಿಯಾಗಿರುವ ಕಾಂಗ್ರೆಸ್ ಈಗ ಯಾವ ಅಭ್ಯರ್ಥಿಯನ್ನು ಇವರ ವಿರುದ್ಧ ಕಣಕ್ಕಿಳಿಸಲಿದ್ದಾರೆ ಎಂಬುದು ಕುತೂಹಲಕರ.
ಯಡಿಯೂರಪ್ಪ ಲೋಕಸಭೆ ಚುನಾವಣೆ ಹೊಸತೇನಲ್ಲ. 1991ರಲ್ಲಿ ಅವರು ಒಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಗೆಲವು ಪಡೆದಿರಲಿಲ್ಲ. ಸಾರೇಕೊಪ್ಪ ಬಂಗಾರಪ್ಪ ಅವರ ಅಲೆ ಅಡ್ಡಿಯಾಗಿತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಜಿ. ಶಿವಪ್ಪ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಅಂದು ಕೆ.ಜಿ. ಶಿವಪ್ಪ ಅವರು 2,81,182 ಮತ ಪಡೆದಿದ್ದರೆ, ಯಡಿಯೂರಪ್ಪ ಅವರು 2,40,479 ಮತಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದರು. ಜನತಾದಳ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಅಂದಿನ ಕಣದಲ್ಲಿ ಬೇರೆ ಯಾವ ಅಭ್ಯರ್ಥಿಯೂ 1 ಲಕ್ಷಕ್ಕಿಂತ ಹೆಚ್ಚು ಮತ ಪಡೆದಿರಲಿಲ್ಲ ಎಂಬುದೇ ಅಂದಿನ ತುರುಸಿನ ಸ್ಪರ್ಧೆಗೆ ಸಾಕ್ಷಿಯಾಗಿದೆ.
ಭಾರಿ ವ್ಯತ್ಯಾಸ: ಈಗ ಯಡಿಯೂರಪ್ಪ ಅವರು ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 1991ರ ಪರಿಸ್ಥಿತಿಗೂ 2014ರ ಪರಿಸ್ಥಿತಿಗೂ ಭಾರಿ ವ್ಯತ್ಯಾಸವಿದೆ. ಈ ನಡುವೆ ತುಂಗಾ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಯಡಿಯೂರಪ್ಪ ಅವರೀಗ ಮಾಜಿ ಮುಖ್ಯಮಂತ್ರಿ. ತಮ್ಮ ಸ್ವಂತ ಬಲದಿಂದಲೇ 2009ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿದ್ದರು. ಈಗ ಅವರೇ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಸದ್ಯವೇ ಬಿಜೆಪಿಯು ಪ್ರಕಟಿಸಲಿರುವ ಮೊದಲ ಪಟ್ಟಿಯಲ್ಲಿಯೇ ಇವರ ಹೆಸರು ಪ್ರಕಟವಾಗುವ ಸಂಭವವಿದೆ.
ಅನಿವಾರ್ಯವಿತ್ತು: ಬಿಜೆಪಿ ಅಭ್ಯರ್ಥಿಯಾಗಿ ಯಡಿಯೂರಪ್ಪ ಅವರೇ ಕಣಕ್ಕಿಳಿಯುವ ಅನಿವಾರ್ಯತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಇತ್ತು. ಬಿ.ವೈ. ರಾಘವೇಂದ್ರ ಅವರು ಸ್ಪರ್ಧಿಸಿದರೆ ಗೆಲವು ಕಷ್ಟಸಾಧ್ಯ ಎಂಬ ಪಕ್ಷದ ಆಂತರಿಕ ಸಮೀಕ್ಷೆ ಬಿಜೆಪಿ ಎದುರಿಗಿತ್ತು. ಇನ್ನು ಈ ಲೋಕಸಭಾ ಕ್ಷೇತ್ರದಿಂದ ಒಮ್ಮೆ ಗೆಲವು ಪಡೆದು, ಹಲವು ಬಾರಿ ಸ್ಪರ್ಧಿಸಿರುವ ಆಯನೂರು ಮಂಜುನಾಥ್ ಹಾಲಿ ರಾಜ್ಯಸಭಾ ಸದಸ್ಯ. ಅವರ ಅವಧಿ ಇನ್ನೂ ನಾಲ್ಕು ವರ್ಷವಿದೆ. ಅವರಿಗೆ ಕಣಕ್ಕಿಳಿಸಿ ಇರುವ ಒಂದು ಸ್ಥಾನ ಕಳೆದುಕೊಳ್ಳುವುದು ಬಿಜೆಪಿಗೆ ಇಷ್ಟವಿಲ್ಲ. ಹಿಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಯಾಗಿದ್ದ ಡಿ.ಎಚ್. ಶಂಕರಮೂರ್ತಿ ಅವರು ಹಾಲಿ ವಿಧಾನಪರಿಷತ್ ಸಭಾಪತಿ. ಭಾನುಪ್ರಕಾಶ್ ಅವರಿಗೆ ಲೋಕಸಭೆ ಚುನಾವಣೆ ಗೆಲ್ಲುವಷ್ಟು ಬಲವಿಲ್ಲ.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.
ಹಾಗಾಗಿಯೇ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಕಾರ್ಯಕರ್ತರೆದುರು ಮಾತನಾಡುವಾಗ “@¬ÈÛ¾Úß%}æ’¾Úß«Úß­ ಒತ್ತಿ ಹೇಳಿದ್ದಾರೆ. ಹೈಕಮಾಂಡ್ ಒತ್ತಡಕ್ಕೆ ಮಣಿದು ಕಣಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸುತ್ತಿವೆ.

ಹೀಗೂಂಟು ರಾಜಕೀಯ ಲೆಕ್ಕಾಚಾರ
ಯಡಿಯೂರಪ್ಪ ಅವರು ಲಿಂಗಾಯಿತ ಸಮುದಾಯದ ನಾಯಕ. ಜಿಲ್ಲೆಯಲ್ಲಿ ಲಿಂಗಾಯಿತ ಮತದಾರರು ಎರಡನೇ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟರನ್ನು ಹೊರತುಪಡಿಸಿದರೆ ಒಂದು ಅಂದಾಜಿನ ಪ್ರಕಾರ ಈ ಮತದಾರರ ಸಂಖ್ಯೆಯೇ 2 ಲಕ್ಷ. ಈ ದೊಡ್ಡ ವೋಟ್ ಬ್ಯಾಂಕ್ ತನ್ನದಾಗಿಸಿಕೊಳ್ಳುವ ಮೊದಲ ಹೆಜ್ಜೆಯನ್ನು ಯಡಿಯೂರಪ್ಪ ಅವರ ಮೂಲಕ ಬಿಜೆಪಿ ಇಟ್ಟಂತಾಗಿದೆ.
ಎರಡನೇ ದೊಡ್ಡ ವೋಟ್ ಬ್ಯಾಂಕ್ ಈಡಿಗರ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಣ್ಣಿಟ್ಟಿವೆ. ಸಾರೇಕೊಪ್ಪ ಬಂಗಾರಪ್ಪ ಕುಟುಂಬದವರೇ ಒಬ್ಬರನ್ನು ಕಣಕ್ಕಿಳಿಸುವ ಇಂಗಿತವನ್ನು ಜೆಡಿಎಸ್ ಹೊಂದಿದೆ. ಮತ್ತೆ ಬಂಗಾರಪ್ಪ ಕುಟುಂಬ ಹಾಗೂ ಯಡಿಯೂರಪ್ಪ ಕುಟುಂಬದ ನಡುವಿನ ಹಣಾಹಣಿಗೆ ಮಲೆನಾಡ ಚುನಾವಣೆ ಕಣ ಸಿದ್ಧವಾಗಿದೆ.
-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.