ಶಿವಮೊಗ್ಗ

ಕೋಟೆಗದ್ದೆಯಲ್ಲಿ ರಬ್ಬರ್ ಕೇಂದ್ರ

Published On :

ಶಿವಮೊಗ್ಗ:  ರಬ್ಬರ್ ಖರೀದಿ ಕೇಂದ್ರವನ್ನು ತೀರ್ಥಹಳ್ಳಿ ತಾಲೂಕು ವೆನಿಲ್ಲಾ ಬೆಳೆಗಾರರ ಸಂಘವು ಸ್ಥಾಪಿಸಿದ್ದು, ಕೋಟೇಗದ್ದೆಯಲ್ಲಿರುವ ಸಂಘದ ಆವರಣದಲ್ಲಿ ಫೆ.10ರಂದು ಆರಂಭವಾಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶೇಷಾದ್ರಿ ಕನ್ನಂಗಿ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಟ್ಟಾಯಂನ ರಬ್ಬರ್ ಮಂಡಳಿ ಸದಸ್ಯ  ಎನ್. ಪದ್ಮನಾಭ್, ಮಂಡಳಿ ಉಪಆಯುಕ್ತ ನಾರಾಯಣ ಸ್ವಾಮಿ,  ಮಾಜಿ ಶಾಸಕ ಆರಗ ಜ್ಞಾನೇಂದ್ರ, ಶ್ರೀಧರ ಜಿ. ಭಿಡೆ, ಜಿ.ಎಸ್. ನಾರಾಯಣ ರಾವ್ ಗುಡ್ಡೆಕೊಪ್ಪ ಅವರು ಭಾಗವಹಿಸುವರು.
ರಬ್ಬರ್ ಕೃಷಿ ಹಾಗೂ ಕಾಳುಮೆಣಸಿನ ಕೃಷಿಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಲಭ್ಯವಾಗಲಿದೆ. ಈ ಕಾರ್ಯಕ್ರಮದಲ್ಲಿ ಕಾಳುಮೆಣಸಿನಲ್ಲಿ ಅತೀ ಹೆಚ್ಚು ಇಳುವರಿ ಪಡೆದು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಮೂಡುಗೆರೆ ತಾಲೂಕಿನ ಕೃಷಿಕ ಕೇಶವ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ತೋಟಗಾರಿಕಾ ಇಲಾಖೆ, ಸಾಂಬಾರು ಮಂಡಳಿ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಮಾಹಿತಿ ನೀಡುವವರಿದ್ದಾರೆ.  ಕಾರ್ಯಕ್ರಮವು ಬೆಳಿಗ್ಗೆ 9.30ರಿಂದ ಸಂಜೆ 5ರ ವರೆಗೆ ನಡೆಯಲಿದೆ.
ತೀರ್ಥಹಳ್ಳಿ ತಾಲೂಕು ವೆನಿಲ್ಲಾ ಬೆಳೆಗಾರರ ಸಂಘವು 2005ರಲ್ಲಿ ಅಸ್ತಿತ್ವಕ್ಕೆ ಬಂದಿತು.  ವೆನಿಲ್ಲಾ ಬೆಳೆಯನ್ನು ಸಂಘಟಿತವಾಗಿ ಸಂಸ್ಕರಿಸುವ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದ ಈ ಸಂಘವು ಈಗ ಎಲ್ಲಾ ರೀತಿಯ ಸಾಂಬಾರು ಬೆಳೆಗಳನ್ನು, ವಿಶೇಷವಾಗಿ ಅಡಿಕೆಯನ್ನು ಸಂಸ್ಕರಿಸುತ್ತಿದೆ. ಇದಲ್ಲದೇ ಹಲಸಿನ ಮೌಲ್ಯವರ್ಧನೆ, ಅರಿಶಿಣದ ಉತ್ಪನ್ನಗಳು, ಸಾವಯುವ ಕುಂಕುಮ ತಯಾರಿ, ಈ ಎಲ್ಲ ಕೆಲಸಗಳಲ್ಲಿ ಸಂಘ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.