ಶಿವಮೊಗ್ಗ

ಹಳ್ಳವಾಗಿರುವ ರಸ್ತೆ ಸರಿಪಡಿಸಿ

Published On :

ಆಯನೂರಿನಿಂದ ಹೊಸೂರಿನವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿದ್ದು, ಕೆಲವೆಡೆ ಹಳ್ಳವೇ ಏರ್ಪಟ್ಟಂತಿದೆ. ಒಂದು ಬದಿ ಕರೆಯಾದರೆ, ಮತ್ತೊಂದು ಬದಿ ಗದ್ದೆ ಸಾಲು ಇದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಈ ರಸ್ತೆಯಲ್ಲಿ ಹಣಗೆರೆ ಕಟ್ಟೆಗೆ ಪ್ರತಿ ದಿನ ಸಾವಿರಾರು ಮಂದಿ ಓಡಾಡುವುದರಿಂದ ವಾಹನ ದಟ್ಟಣೆ ಅತಿಯಾಗಿರುತ್ತದೆ. ಕಿರಿದಾದ ರಸ್ತೆ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಸಾಕಷ್ಟು ಪರದಾಡುವಂತಾಗಿದೆ. ರಾತ್ರಿ ವೇಳೆಯಂತೂ ವಾಹನ ಅಪಘಾತವಾದ ಉದಾಹರಣೆ ಸಾಕಷ್ಟಿದೆ ಎಂದು ಸ್ಥಳೀಯರು ಹೇಳುತ್ತಾರೆ.
ದೂರದೂರುಗಳಿಂದ ಇಲ್ಲಿಗೆ ಸಮೀಪದ ಮಲೇಶಂಕರ, ಹಣಗೆರೆಕಟ್ಟೆ ದೇವಸ್ಥಾನಕ್ಕೆ ಬಂದು ಹೋಗುವವರಿದ್ದಾರೆ. ಹೀಗಾಗಿ ಸದಾ ಜನಜಂಗುಳಿ ಈ ರಸ್ತೆಯಲ್ಲಿರುವ ಕಾರಣ ತುರ್ತಾಗಿ ಶಾಸಕರು ಗಮನಹರಿಸಬೇಕಾಗಿದೆ.
ಹಲವಾರು ಬಾರಿ ಮನವಿ ಮಾಡಿದರೂ ಯಾರೂ ಗಮನ ನೀಡಿಲ್ಲ. ಈ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ಓಡಾಡುವುದೆಂದರೆ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ ಎಂಬುದು ವಾಸುಕಿಯವರ ಆಂತಕದ ಮಾತು.
ರಸ್ತೆ ರಿಪೇರಿ ಕಂಡಿಲ್ಲ, ಕೆರೆಗೆ ತಡೆ ಗೋಡೆ ಇಲ್ಲ. ಒಟ್ಟಾರೆ ಅಪಾಯಕ್ಕೆ ಆಹ್ವಾನ ನೀಡಿದಂತಿದೆ
ನಿವಾಸಿಗಳು
ಆಯನೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.