ಶಿವಮೊಗ್ಗ

ಅನುಭವವನ್ನೇ ಹಾಡಾಗಿಸಿದ ಬೇಂದ್ರೆ

Published On :

ಕ.ಪ್ರ.ವಾರ್ತೆ ಟಿ ತೀರ್ಥಹಳ್ಳಿ ಟಿ ಫೆ.10
ಬೇರೆಬೇರೆ ಅರ್ಥದಲ್ಲಿ ಧ್ವನಿಸುವಂತೆ ಪದಗಳನ್ನು ದುಡಿಸಿಕೊಂಡ ಗಾರುಡಿಗ ಬೇಂದ್ರೆಯವರು ಪಟ್ಟ ಪಾಡನ್ನೆಲ್ಲ ಹಾಡಾಗಿಸಿದ ಕವಿಯಾಗಿದ್ದರು ಎಂದು ಉಪನ್ಯಾಸಕ ಡಾ. ಬಿದರಗೋಡು ನಾಗೇಶ್ ಹೇಳಿದರು.
ಕುವೆಂಪು ಪ್ರತಿಷ್ಠಾನ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಟಮಿತ್ರರು ಹಾಗೂ ಶಿವಮೊಗ್ಗದ ವಿಜಯ ಕಲಾನಿಕೇತನ ಸಂಸ್ಥೆಗಳು ಸಂಯುಕ್ತವಾಗಿ  ಭಾನುವಾರ  ಹಮ್ಮಿಕೊಂಡಿದ್ದ ವರಕವಿ ಬೇಂದ್ರೆಯವರ ಜನ್ಮ ದಿನೋತ್ಸವದ ಅಂಗವಾಗಿ ಭಾವಾನುನರ್ತನ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನ ಅನುಭವ, ಪ್ರಕೃತಿಯ ವಿಸ್ಮಯ ಹಾಗೂ ಸಮಾಜದ ಅಮೂರ್ತ ಕಲ್ಪನಗಳೇ ಬೇಂದ್ರೆಯವರ  ಕಾವ್ಯ ರಚನೆಯ ವಸ್ತುವಾಗಿದ್ದು ವಿಶೇಷ.  ಅವರ  ಕಾವ್ಯ ಸಂಪತ್ತು, ಮಾತು ಮಾತು ಮಥಿಸಿಬಂದ ನಾದಲೀಲೆಯಾಗಿದ್ದು  ಜನಸಾಮಾನ್ಯರನ್ನು ಬಹುಬೇಗ ತಬ್ಬಿಕೊಳ್ಳುವಷ್ಟು ಶಕ್ತಿಯುತವಾಗಿದ್ದವು ಎಂದು ಹೇಳಿದರು.   
ರಂಗಕರ್ಮಿ ಯು. ಸೀತಾರಾಮಾಚಾರ್ಯ, ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್,     ನಟಮಿತ್ರರು ಸಂಸ್ಥೆಯ ಅಧ್ಯಕ್ಷ ಸಂದೇಶ ಜವಳಿ  ಸ್ವಾಗತಿಸಿದರು. ಟಿ.ಕೆ. ರಮೇಶ್ ವಂದಿಸಿದರು.   
ಸಭಾ ಕಾರ್ಯಕ್ರಮದ ನಂತರ  ವಿಜಯ ಕಲಾನಿಕೇತನ  ತಂಡದ ಡಾ. ಪವಿತ್ರ, ಡಾ.ಕೆ.ಎಸ್. ಶುಭ್ರತಾ    ಇವರಿಂದ ಔದುಂಬರ ಗಾಥಾ ಬೇಂದ್ರೆ ಭಾವಾನುನರ್ತನ  ಕಾರ್ಯಕ್ರಮವನ್ನು ನೆರವೇರಿಸಿದರು.
ನಮನ, ದರ್ಶನ, ವಿಕಾಸ, ವಿನ್ಯಾಸ, ತತ್ವ, ಸಿದ್ಧಾಂತ ಹೀಗೆ ಎಲ್ಲವೂ ಮೇಳೈಸಿದ ಬೇಂದ್ರೆಯವರ ಕಾವ್ಯಗಳಿಗೆ ಅರ್ಥಬದ್ಧ, ಲಯಬದ್ಧ,  ನೃತ್ಯವನ್ನು  ಪ್ರಸ್ತುತಪಡಿಸಿ  ಸಭಿಕರ ಮೆಚ್ಚುಗೆ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.