ಎಸ್ಎಸ್ಎಲ್ಸಿ: ಟಾಪ್ 10 ಸ್ಥಾನಕ್ಕೆ ಸರ್ಕಸ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಫೆ.10
ಕಳೆದ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 29ನೇ ಸ್ಥಾನಕ್ಕಿಳಿದು ತಲೆತಗ್ಗಿಸಿದ್ದ ಶಿವಮೊಗ್ಗ ಜಿಲ್ಲೆ ಈ ಬಾರಿ ಟಾಪ್ 10 ಸ್ಥಾನಗಳಲ್ಲಿ ಒಂದನ್ನು ಪಡೆಯಬೇಕೆಂಬ ಗುರಿಯೊಂದಿಗೆ ಸರ್ಕಸ್ ಆರಂಭವಾಗಿದೆ.
3 ತಿಂಗಳಿಂದಲೇ ವಿವಿಧ ರೀತಿಯ ಕಾರ್ಯಾಚರಣೆ ಆರಂಭವಾಗಿದೆ. ಇದೀಗ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ಶಿಕ್ಷಕರು ಕೊನೆ ಹಂತದಲ್ಲಿ ಮಾಡಬೇಕಾದ ಕುಸುರಿ ಕೆಲಸದ ಕುರಿತಾಗಿ ಕಾರ್ಯಾಗಾರವನ್ನು ಕುವೆಂಪು ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗ ನಗರ ಶಾಸಕರು ಮಾತಿನೇಟಿನ ಮೂಲಕ ಶಿಕ್ಷಕರನ್ನು ಎಚ್ಚರಿಸಿದರೆ, ಜಿಲ್ಲಾ ಪಂಚಾಯಿತಿ ಸಿಇಓ ಅವರು ಶಿಕ್ಷಕರಿಗೆ ಮೈಂಡ್ ಮ್ಯಾಪಿಂಗ್ ಟೆಕ್ನಿಕ್ ಪರಿಚಯಿಸಿದರು. ಅದೇ ರೀತಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ದೇವಪ್ರಕಾಶ್, ಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೆಲವು ಟಿಪ್ಸ್ಗಳನ್ನು ನೀಡಿದರು.
ಅವಲೋಕಿಸಿ: ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಶಾಖೆ ಹಮ್ಮಿಕೊಂಡ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಪ್ರತಿ ವಿದ್ಯಾರ್ಥಿಗೆ ಎಸ್ಎಸ್ಎಲ್ಸಿ ಪ್ರಮುಖ ಘಟ್ಟ. ಪರೀಕ್ಷೆಯನ್ನು ಆತ್ಮರ್ಸ್ಥೈಯದಿಂದ ಯಾವ ರೀತಿ ಎದುರಿಸಬೇಕೆಂದು ಹೇಳಿಕೊಡುವ ಜವಾಬ್ದಾರಿ ಶಿಕ್ಷಕರದ್ದು. ಕಳೆದ ಬಾರಿ 29ನೇ ಸ್ಥಾನಕ್ಕೆ ಏಕೆ ತಲುಪಿತು ಎಂಬುದರ ಬಗ್ಗೆ ಶಿಕ್ಷಕರು ಅವಲೋಕಿಸಬೇಕು ಎಂದರು.
ಅರ್ಹತೆ ಆಧಾರದ ಮೇಲೆ ಬುದ್ಧಿವಂತರು ಎನಿಸಿಕೊಂಡವರಿಗೆ ಸರ್ಕಾರ ಶಿಕ್ಷಕರ ಕೆಲಸಕೊಟ್ಟಿದೆ. ಹೀಗಾಗಿ, ಪರಿಣಿತರೇ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದಾರೆ. ಅಂದ ಮೇಲೆ ಮಕ್ಕಳೇಕೆ ಅನುತ್ತೀರ್ಣರಾಗುತ್ತಾರೆ. ಕಾಯಿಲೆಗೆ ಔಷಧಿ ಹುಡುಕಲೇಬೇಕು. ಶಿಕ್ಷಕರೂ ಸಹ ಫಲಿತಾಂಶ ಕೊರತೆಯ ಕುರಿತಂತೆ ಪರಿಹಾರ ಕಂಡುಕೊಳ್ಳಲೇಬೇಕು. ಸಮಸ್ಯೆ ಇದ್ದರೆ ನಮ್ಮ ಬಳಿ ಬನ್ನಿ ಪರಿಹಾರ ಕೊಡುತ್ತೇವೆ, ವಿನಹ ಬೇರೆ ಕಾರಣ ಹೇಳಬೇಡಿ ಎಂದು ಗಟ್ಟಿದನಿಯಲ್ಲೇ ಎಚ್ಚರಿಸಿದರು.
ಮೈಂಡ್ ಮ್ಯಾಪಿಂಗ್: ಸಂಸದ ಬಿ.ವೈ. ರಾಘವೇಂದ್ರ ಅವರು ಶಿಕ್ಷಕರಲ್ಲಿ ಆತ್ಮವಿಶ್ವಾಸ ತುಂಬ ಎರಡು ಮಾತನಾಡಿದರು. ನಂತರದ್ದು ಸಿಇಓ ಅವರ ಸರದಿ. ಮಕ್ಕಳ ಮನಸ್ಸಿನಲ್ಲಿ ಓದಿದ್ದು ಮನಸ್ಸಿನಲ್ಲಿ ಉಳಿಯುವಂತೆ ಮಾಡುವ ಮೈಂಡ್ ಮ್ಯಾಪಿಂಗ್ ಟೆಕ್ನಾಲಜಿ ಶಿಕ್ಷಕರಿಗೆ ತಿಳಿಸಿದರು. ಪರೀಕ್ಷೆಗೆ ಇನ್ನುಳಿದ ಅವಧಿಯಲ್ಲಿ ಈ ಕುರಿತು ತಿಳಿಸಿಕೊಡುವಂತೆಯೂ ಸಲಹೆ ನೀಡಿದರು.
ಮೀನು, ಬಾವಿ, ಮರ, ಟಾರ್ಚ್, ಮಾತ್ರೆ ಸೇರಿದಂತೆ ವಿವಿಧ ಚಿತ್ರಗಳನ್ನು ಬಳಸಿಕೊಂಡು ಮಕ್ಕಳಲ್ಲಿ ಸುಲಭವಾಗಿ ಗಣಿತ, ವಿಜ್ಞಾನ ವಿಷಯಗಳು ಮನಸ್ಸಿನಲ್ಲಿ ಉಳಿಯುವಂತೆ ಮಾಡಲು ಸುಲಭೋಪಾಯಗಳನ್ನು ಪರಿಚಯಿಸಿದರು. ಈ ಪ್ರಯೋಗ ಮಾಡಿದ ಡಿವಿಎಸ್ ಶಾಲೆಯ ಇಬ್ಬರು ಮಕ್ಕಳು ಸಣ್ಣದಾಗಿ ಮೈಂಡ್ ಮ್ಯಾಪಿಂಗ್ ಟೆಕ್ನಾಲಜಿಯನ್ನು ಪರಿಚಯಿಸಿದರು. ಮಕ್ಕಳ ಕಂಡುಕೊಂಡ ಮಾರ್ಗಕ್ಕೆ ಸಭಾಂಗಣದಲ್ಲಿದ್ದವರೇ ಚಪ್ಪಾಳೆ ತಟ್ಟಿದರು.
ಸಲಹೆ: ಇನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ದೇವಪ್ರಕಾಶ್ ಶಿಕ್ಷಕರಿಗೆ ಕೆಲವು ಟಿಪ್ಸ್ ನೀಡಿದರು. ಶೈಕ್ಷಣಿಕವಾಗಿ ತೀರಾ ಹಿಂದುಳಿದ ಮಕ್ಕಳ ಬಗ್ಗೆ ಕೊಂಚ ಹೆಚ್ಚಾಗಿ ಆಸಕ್ತಿ ತೆಗೆದುಕೊಳ್ಳಬೇಕು. ಸಾಧ್ಯವಾದರೆ ಇಂತಹ ವಿದ್ಯಾರ್ಥಿಗಳ ಮನೆಗೂ ಭೇಟಿಕೊಟ್ಟು ಅಲ್ಲಿನ ವಾತಾವರಣ ಅರಿತು ಪೋಷಕರಿಗೂ ತಿಳಿವಳಿಕೆ ನೀಡುವುದು, ಪರೀಕ್ಷೆವರೆಗೆ ಟಿವಿ ಮೊಬೈಲ್ ಬಳಕೆ ಶಿಕ್ಷಕರೇ ಕಡಿಮೆ ಮಾಡುವುದು, ವಿವಿಧ ಸಲಹೆ ನೀಡಿದರು.
ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿದ ಡಿಡಿಪಿಐ ಬಸವರಾಜಪ್ಪ, ಆರಂಭದಲ್ಲಿ ಶಿಕ್ಷಕರ ನಡುವಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದು, ನಂತರ ಪ್ರತಿ ಶಿಕ್ಷಕರು ವಿದ್ಯಾರ್ಥಿಗಳ ಓದಿಸುವ ಹೊಣೆ ಹೊರಿಸಿದ್ದು, ನೈತಿಕತೆಯ ಪ್ರಮಾಣ ಮಾಡಿಸಿದ್ದು, ವಿಷಯವಾರು ಹಿಂದೆಬಿದ್ದ ಮಕ್ಕಳ ಸರ್ವೆ ಮಾಡಿಸಿ ಒತ್ತು ಕೊಡಲು ಪ್ರಯತ್ನ ಮಾಡಿಸಿದ್ದು ಇಲಾಖೆಯ ವಿಶೇಷ ಚಟುವಟಿಕೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

