ರಸ್ತೆ ಅಗಲೀಕರಣಕ್ಕೆ ವಿರೋಧ
ಕ.ಪ್ರ.ವಾರ್ತೆ, ಹೊಸನಗರ, ಫೆ.13
ಇತಿಹಾಸ ಪ್ರಸಿದ್ಧ ನಗರ ಕೋಟೆಯ ಮುಂಭಾಗ ರಸ್ತೆ ಕಾಮಗಾರಿ ನೆಪದಲ್ಲಿ ಎದುರು ಭಾಗದಲ್ಲಿ ಜೆಸಿಬಿ ಬಳಸಿ ಅಗೆಯುವುದನ್ನು ಖಂಡಿಸಿ ಕಾಮಗಾರಿ ತಡೆದ ಘಟನೆ ಗುರುವಾರ ನಡೆದಿದೆ.
ಐತಿಹಾಸಿಕ ಸ್ಮಾರಕದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವ ಅವಕಾಶವಿಲ್ಲದಿದ್ದರು ಕೂಡ ರಸ್ತೆ ಅಗಲೀಕರಣದ ನೆಪದಲ್ಲಿ ಸ್ಮಾರಕಕ್ಕೆ ಧಕ್ಕೆ ತರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಕಾಮಗಾರಿ ಮುಂದುವರಿಸುವಂತಿಲ್ಲ ಎಂದು ಪಟ್ಟುಹಿಡಿದರು.
ಅಲ್ಲದೆ ಜಿಲ್ಲಾ ಪ್ರಾಚ್ಯವಸ್ತು ಸಂಗ್ರಹಾಲಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕಾಮಗಾರಿ ಬಗ್ಗೆ ಗಮನ ಸೆಳೆದರೂ ಕೂಡ ಅಧಿಕಾರಿಗಳು ಯಾವುದೆ ಕ್ರಮ ಕೈಗೊಳ್ಳಿದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ತಾವೇ ಖುದ್ದಾಗಿ ಕಾಮಗಾರಿ ನಿಲ್ಲಿಸಿದರು. ರಸ್ತೆ ಕಾಮಗಾರಿ ನಿರ್ವಹಿಸುತ್ತಿದ್ದ ಕಾರ್ಮಿಕರು ಬೇರಿ ದಾರಿ ಕಾಣದೆ ಕಾಮಗಾರಿ ನಿಲ್ಲಿಸಿ ಹೊರ ನಡೆದರು.
ಕೋಟೆಯ ಮುಂಭಾಗದ ರಸ್ತೆ ಪಕ್ಕದ ಕಲ್ಲುಗಳನ್ನು ಕಿತ್ತು ಸ್ಮಾರಕವನ್ನು ವಿರೂಪಗೊಳಿಸಿದವರ ಬಗ್ಗೆ ಕ್ರಮ ಕೈಗೊಳ್ಳಬೇಕು. ಮತ್ತು ಸಾರ್ವಜನಿಕರಿಗೆ ವಿಧಿಸುವ ಹಾಗೆ ದಂಡವನ್ನು ಕೂಡ ಹೇರಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪ್ರಮುಖರಾದ ವಿನಾಯಕ ಚಕ್ಕಾರ್, ನೇಮಿರಾಜ್, ನಾಗೇಶ್ ಹಿರೀಮನೆ, ಅಂಬರೀಷ್ ಮತ್ತಿತರರು ಪಾಲ್ಗೊಂಡಿದ್ದರು.
ತಿಂಗಳ ಉಪನ್ಯಾಸ ಮಾಲಿಕೆ
ಶಿವಮೊಗ್ಗ: ನಗರದ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೆಮ್ಮದಿ-ಬದುಕು ತಿಂಗಳ ಉಪನ್ಯಾಸ ಮಾಲಿಕೆ ಅಂಗವಾಗಿ ಫೆ.16ರಂದು ಸಂಜೆ 6.30ಕ್ಕೆ ಸ್ಪರ್ಧಾತ್ಮಕ ಇಂದಿನ ದಿನಗಳಲ್ಲಿ ಪೋಷಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಸಂಸ್ಕಾರಯುತ ಮಕ್ಕಳನ್ನು ರೂಪಿಸುವ ಕುರಿತು ಅರಬಿಂದೋ ಪಿ.ಯು.ಕಾಲೇಜು ಉಪನ್ಯಾಸಕ ಎಂ.ಎಸ್. ವಿನಾಯಕ ಉಪನ್ಯಾಸ ನೀಡಲಿದ್ದಾರೆ. ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ನ.ರಾ. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಭಾಗವಹಿಸುವಂತೆ ಕಾರ್ಯದರ್ಶಿ ದತ್ತಾತ್ರಿ ಕೋರಿದ್ದಾರೆ.
'ಯಡಿಯೂರಪ್ಪ ಸೋಲಿಸಲು ಸಂಚು'
ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದ ಅಭ್ಯರ್ಥಿಯಾಗುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಯೇ ಸೋಲಿಸಲಿದೆ. ಒಂದು ವೇಳೆ ಹಾಗಾಗದಿದ್ದರೆ ನಾನು ತಲೆ ಬೋಳಿಸಿಕೊಂಡು ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುತ್ತೇನೆ ಎಂದು ಕೆಜೆಪಿ ಉಚ್ಚಾಟಿತ ನಾಯಕ ಪದ್ಮನಾಭ ಪ್ರಸನ್ನ ಸವಾಲು ಹಾಕಿದ್ದಾರೆ.
ಗುರುವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಜೆಪಿಗೆ ಯಡಿಯೂರಪ್ಪ ಅವರನ್ನು ಸೇರಿಸಿಕೊಳ್ಳದಂತೆ ಆಗ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರು 10 ಕೋಟಿ ಆಮಿಷ ಒಡ್ಡಿದ್ದರು ಎಂದೂ ಅವರು ಆರೋಪಿಸಿದರು.
ಯಡಿಯೂರಪ್ಪನವರ ಬಗ್ಗೆ ನನಗೆ ವಿಶೇಷ ಪ್ರೀತಿ- ಕನಿಕರವಿದೆ. ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಿಲ್ಲಿಸುವ ಮೂಲಕ ಆರ್ಎಸ್ಎಸ್ ಹಾಗೂ ಬಿಜೆಪಿಯು ಹರಕೆಯ ಕುರಿಯಾಗಿ ಮಾಡುತ್ತಿದ್ದು, ಅವರನ್ನು ಗೆಲ್ಲಲು ಬಿಜೆಪಿ ಬಿಡುವುದಿಲ್ಲ ಎಂದು ದೂರಿದರು.
ಯಡಿಯೂರಪ್ಪನವರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಡಿ ಎಂದು ಆಗ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ತಮಗೆ 10 ಕೋಟಿ ಕೊಡಲು ಬಂದಿದ್ದರು. ಅಲ್ಲಿ ಒಂದು ಸಾವಿರ ರುಪಾಯಿಯ ನೋಟಿನ ಕಟ್ಟುಗಳಿದ್ದವು. ಆದರೆ, ನಾನು ದುಡ್ಡು ಮುಟ್ಟಲಿಲ್ಲ. ಈಶ್ವರಪ್ಪನವರೂ ಸಹ ಕೆಜೆಪಿಗೆ ಯಡಿಯೂರಪ್ಪನವರನ್ನು ಸೇರಿಸಿಕೊಳ್ಳದಂತೆ ತಾಕೀತು ಮಾಡಿದ್ದರು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

