ನಗರಸಭೆ ಸದಸ್ಯರ ಅವಧಿ ವಿಸ್ತರಣೆಗೆ ಕಾನೂನು ತಿದ್ದುಪಡಿ
ಶಿವಮೊಗ್ಗ: ಮಹಾನಗರ ಪಾಲಿಕೆಯಾಗಿ ಉನ್ನತೀಕರಿಸಿರುವ ಶಿವಮೊಗ್ಗ, ತುಮಕೂರು ಹಾಗೂ ಬಿಜಾಪುರ ನಗರಸಭೆ ಸದಸ್ಯರ ಅವಧಿ ಕಾನೂನಿನ ಪ್ರಕಾರ 6 ತಿಂಗಳಲ್ಲಿ ಮುಗಿಯಬೇಕಿತ್ತು. ಬದಲಾಗಿ ಇವರು ಪೂರ್ಣಾವಧಿ ಪಾಲಿಕೆ ಸದಸ್ಯರಾಗಿ ಮುಂದುವರಿಯುವಂತೆ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ನಗರಾಭಿವೃದ್ಧಿ ಖಾತೆ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ, ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿ, ಸದ್ಯವೇ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಈ ತಿದ್ದುಪಡಿ ಮಂಡಿಸಲಾಗುವುದು ಎಂದರು.
ನೂತನ ಪಾಲಿಕೆಗಳ ಸದಸ್ಯರು ಬೆಂಗಳೂರಿಗೆ ಆಗಮಿಸಿ ಈ ಬಗ್ಗೆ ಮನವಿ ಸಲ್ಲಿಸಿದ್ದರು. ನಗರಸಭೆ ಚುನಾವಣೆ ನಡೆದು ಕೆಲವೇ ತಿಂಗಳಲ್ಲಿ ಪಾಲಿಕೆಯಾಗಿ ಉನ್ನತೀಕಣಗೊಂಡಿದ್ದು, ಪೂರ್ಣಾವಧಿ ಅಧಿಕಾರದಲ್ಲಿರಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಇದು ಸೂಕ್ತವಾಗಿದ್ದರಿಂದ ನಗರಪಾಲಿಕೆ ಕಾಯ್ದೆಯ ಸೆಕ್ಷನ್ 503 ತಿದ್ದುಪಡಿ ಮಾಡಲು ಮುಂದಾಗಿದ್ದೇವೆ ಎಂದರು.
ಬಡವರಿಗೆ ನಿವೇಶನ: ಖಾಸಗಿ ಬಡಾವಣೆಗಳಲ್ಲಿ ರೂಪುಗೊಳ್ಳುವ ನಿವೇಶನಗಳಲ್ಲಿ ಶೇ.30ರಷ್ಟು ನಿವೇಶನಗಳನ್ನು ಬಡವರಿಗೆ ಕೊಡಲು ಸದ್ಯವೇ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು.
ನಗರ ಪ್ರದೇಶಗಳಲ್ಲಿ ಬಡವರು ನಿವೇಶನ ಪಡೆದುಕೊಳ್ಳುವುದು ಕಷ್ಟವಾಗಿದೆ. ಆದ್ದರಿಂದ ನೂತನವಾಗಿ ರಚನೆಯಾಗುವ ಯಾವುದೇ ಖಾಸಗಿ ಬಡಾವಣೆಗಳಲ್ಲಿ ಅವರಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಬಡಾವಣೆ ರೂಪಿಸುವ ಸಂದರ್ಭದಲ್ಲಿ 40-60 ಮಾದರಿಯನ್ನು ರೂಪಿಸಿದ್ದೇವೆ. ಅದರಂತೆ ಇಂತಹ ಬಡಾವಣೆಯ ಶೇ.40ರಷ್ಟು ನಿವೇಶನಗಳು ಭೂಮಾಲೀಕರಿಗೆ ಸಿಗುತ್ತವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

