ಮಾರಿಕಾಂಬ ಜಾತ್ರೆಯ ಪೂರ್ವಭಾವಿ ಸಭೆ
ಶಿವಮೊಗ್ಗ: ನಗರದ ಕೋಟೆ ಮಾರಿಕಾಂಬ ಜಾತ್ರೆಯ ಪೂರ್ವಭಾವಿ ಸಭೆ ಮಂಗಳವಾರ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಪಾಲಿಕೆಯ ಮಹಾಪೌರರು ಸಮಿತಿಯ ಗೌರವಧ್ಯಕ್ಷ ಖುರ್ಷಿದಾಬಾನು ಹಾಗೂ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಸಮಿತಿ ಪ್ರಧಾನಕಾರ್ಯದರ್ಶಿ ಎನ್.ಮಂಜುನಾಥ್, ಮಾರಿಕಾಂಬ ಜಾತ್ರೆ ನಮ್ಮೂರ ಜಾತ್ರೆಯಾಗಿದ್ದು, ಪಾಲಿಕೆ ಸದಸ್ಯರುಗಳು ಸ್ವಚ್ಛತೆ, ಕುಡಿಯುವ ನೀರು ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಕೋರಿದರು.
ಪಾಲಿಕೆ ಸದಸ್ಯ ಎನ್.ಜೆ. ರಾಜಶೇಖರ್, ಎಸ್. ರಾಮು, ಕಾಶಿವಿಶ್ವನಾಥ್, ಐಡಿಯಲ್ ಗೋಪಿ, ಸತೀಶ್, ರೇಣುಕಾ ನಾಗರಾಜ್, ಸುರೇಖಾ ಮುರುಳೀಧರ್, ಸೇರಿದಂತೆ ಹಲವರು ಅನಿಸಿಕೆಯನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ಆಯುಕ್ತ ಕರಭೀಮಣ್ಣನವರ್ ಸದಸ್ಯರ ಒತ್ತಾಯದಂತೆ ಜಾತ್ರೆಗೆ ಹೆಚ್ಚಿನ ಅನುದಾನ ನೀಡುವುದಾಗಿ ಘೋಷಿಸಿದರು.
ಸ್ವಚ್ಛತೆ ಕುಡಿಯುವ ನೀರು, ಎಲ್ಲವನ್ನೂ ಅದ್ಯತೆಗೆ ಪರಿಗಣಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಖುರ್ಷಿದಾಬಾನು, ಉಪ ಮೇಯರ್ ರೇಖಾ ಚಂದ್ರಶೇಖರ್, ಪಾಲಿಕೆಯ ಸದಸ್ಯರು, ಸಮಿತಿಯ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಪ್ರಭಾಕರ್ ಗೌಡ ವಂದಿಸಿದರು. ಸಭೆಯಲ್ಲಿ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

