ಶಿವಮೊಗ್ಗ

ಶ್ರೀ ಶಾರದಾ ದೇವಿ ವಿಗ್ರಹ ಪುನರ್ ಪ್ರತಿಷ್ಠಾಪನೆ

Published On :

ತರೀಕೆರೆ: ಎಂಟುನೂರು ವರ್ಷಗಳಷ್ಟು ಪ್ರಾಚೀನತೆ ಪಡೆದಿರುವ ಅಪರೂಪದ ಶಿಲ್ಪ ಕಲಾ ವೈಭವಕ್ಕೆ ಪ್ರಸಿದ್ಧಿಯಾಗಿರುವ ಸಮೀಪದ ಅಮೃತಾಪುರದಲ್ಲಿ  ಶ್ರೀ ಶಾರದಾ ದೇವಾಲಯದಲ್ಲಿ ದೇವಿ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಲಾಯಿತು.
ಅಮೃತಾಪುರದಲ್ಲಿ ನಡೆದ ಅಮೃತೋತ್ಸವ, ಶ್ರೀ ಅಮೃತೇಶ್ವರಸ್ವಾಮಿ ದೇವಾಲಯದ ಅಷ್ಠ ಶತಮಾನೋತ್ಸವ ಶ್ರೀ ಶಾರದ ದೇವಿಯವರ ವಿಗ್ರಹದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಒಂದು ವಾರ ನಿರಂತರವಾಗಿ ಏರ್ಪಡಿಸಲಾಗಿತ್ತು.
ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಜಿ.ಎಚ್.ಶ್ರೀನಿವಾಸ್, ದಾಸೋಹ ಸಮಿತಿ ಅಧ್ಯಕ್ಷ ಎ.ಎಸ್. ಈಶ್ವರಪ್ಪ ಮತ್ತು ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜಾ ಕಾರ್ಯಕ್ರಮ ಹಾಗೂ ಸಮಾರಂಭದಲ್ಲಿ ಭಾಗವಹಿಸಿದ್ದರು.
ಶ್ರೀ ಅಮೃತೇಶ್ವರ ದೇವಸ್ಥಾನದ ಅಪರೂಪದ ಶಿಲ್ಪ ಕಲೆ, ಸಾಲಿಗ್ರಾಮ ರೂಪದ ಶಿವಲಿಂಗ, ಶ್ರೀ ಶಾರದಾಂಬೆ ವಿಗ್ರಹ ಅಮೃತಾಪುರಕ್ಕೆ ಬರುವ ಸಹಸ್ರಾರು ಯಾತ್ರಾರ್ಥಿಗಳ ಆಕರ್ಷಣೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.