ರಂಗೋಲಿ ಕಲೆ ನಿರ್ಲಕ್ಷ್ಯ: ವಿಷಾದ
ಜೋಗ್ಫಾಲ್ಸ್: ಜೀವನದ ಪ್ರತಿಯೊಂದು ಅಂಶವು ಸಂಸ್ಕೃತಿಯಿಂದ ಕೂಡಿದ್ದು, ಆದರಲ್ಲಿ ರಂಗೋಲಿಕಲೆಯೂ ಒಂದಾಗಿದೆ. ಇಂದು ಈ ಕಲೆಯು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಷಾದನೀಯ ಎಂದು ಆಶಾಬಾಯಿ ಎನ್. ತಿಳಿಸಿದರು.
ಕೆಪಿಸಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ರಂಗೋಲಿ ಬಿಡಿಸುವ ಸ್ಪರ್ಧೆಯ ತೀರ್ಪುಗಾರರಾಗಿ ಅವರು ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ರಂಗೋಲಿ ಮೂಲಕ ಆಧ್ಯಾತ್ಮಿಕವಾಗಿ ಮನಸ್ಸನ್ನು ಕೇಂದ್ರೀಕೃತಗೊಳಿಸಲು ದೃವೀಪರಿಸರ ಸೃಷ್ಟಿಸಲಾಗುತ್ತಿತ್ತು. ರಂಗೋಲಿ ಬಿಡಿಸುವುದು ಇರುವೆಯಿಂದ ಮುಕ್ತಿ ಪಡಿಯುವ ವೈಜ್ಞಾನಿಕ ಕಾರಣವಾಗಿದೆ ಎಂದರು.
ನೇತ್ರಾವತಿ, ರಾಮಾಯಣದ ಕಾಲದಿಂದಲೂ ರಂಗೋಲಿ ಕಲೆ ಪ್ರಚಲಿತದಲ್ಲಿದೆ. ಅದರೆ ಇಂದು ರಂಗೋಲಿಯೂ ಸ್ಟಿಕ್ಕರ್ನಲ್ಲಿ ಮೂಡಿಬರುವುದರಿಂದ ಪ್ರಾಚೀನಕಲೆಯ ಅವನತಿಗೆ ಕಾರಣವಾಗಿದೆ ಎಂದರು.
ಸಹನಾ, ಕೆಪಿಸಿ ಪದವಿ ಪೂರ್ವ ಕಾಲೇಜಿನಲ್ಲಿ ಇಂತಹ ಸ್ಪರ್ಧೆ ಏರ್ಪಡಿಸುವ ಮೂಲಕ ಪ್ರಾಚೀನ ಕಲೆಯನ್ನು ಉಳಿಸುವ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸುತ್ತಿದೆ. ಇಂತಹ ಸ್ಪರ್ಧೆ ಏರ್ಪಡಿಸುವುದರಿಂದ ಮುಂದಿನ ಪೀಳಿಗೆಗೆ ಹಿಂದಿನ ಸಂಸ್ಕೃತಿ, ಇತಿಹಾಸದ ಬಗೆಗೆ ಮಾಹಿತಿ ಒದಗಿಸಿದಂತಾಗುತ್ತಿದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ರಕ್ಷಿತಾ ಎಮ್, ದ್ವಿತೀಯ ಸ್ಥಾನವನ್ನು ದಿವ್ಯಜೋತಿ, ತೃತೀಯ ಸ್ಥಾನವನ್ನು ಗಾಯತ್ರಿ ಪಡೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

