ಚೆಕ್ ಬೌನ್ಸ್ ಆರೋಪಿ ಖುಲಾಸೆ
ಸಾಗರ: ಚೆಕ್ ಬೌನ್ಸ್ ಪ್ರಕರಣದ ಆರೋಪಿಯನ್ನು ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿ ಇಲ್ಲಿನ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಜಗದೀಶ್ ಎಂಬವರಿಂದ ಮಂಜುನಾಥ್ ಎಂಬವರು ದಿನಾಂಕ 15-04-2007ರಂದು 25000 ಸಾಲವಾಗಿ ಪಡೆದಿದ್ದರು. ಈ ಸಾಲದ ತೀರುವಳಿಗಾಗಿ ಚೆಕ್ ನೀಡಿದ್ದು, ಅದು ಅವರ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ಬೌನ್ಸ್ ಆಗಿತ್ತು ಎಂದು ಜಗದೀಶ್ ಆರೋಪಿ ಮಂಜುನಾಥ್ ವಿರುದ್ಧ ನೆಗೋಷಿಯೇಬಲ್ ಇನ್ಟ್ರ್ಷುಮೆಂಟ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ನ್ಯಾಯಾಧೀಶರು ಆರೋಪಿಯ ವಿರುದ್ಧ ಸಿ.ಸಿ. 330, 2010 ದಾಖಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಆರೋಪಿ ಮಂಜುನಾಥಗೆ 6 ತಿಂಗಳ ಸಾದಾ ಜೈಲು ಸಜೆ, 5000 ದಂಡ ಮತ್ತು ದಂಡ ಪಾವತಿಸಲು ವಿಫಲವಾದರೆ ಮತ್ತೊಂದು ತಿಂಗಳು ಸಾದಾ ಜೈಲು ಶಿಕ್ಷೆ ಮತ್ತು ಫಿರ್ಯಾದುದಾರರಿಗೆ ಆರೋಪಿಯು 25000 ಪರಿಹಾರ ನೀಡಬೇಕೆಂದು ಆದೇಶ ನೀಡಿತ್ತು. ಆರೋಪಿಯು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ಪ್ರಕರಣದ ಕಾನೂನಾತ್ಮಕ ಅಂಶಗಳ ಬಗ್ಗೆ ಪ್ರಶ್ನಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿ ತನ್ನ ಸಾಲದ ತೀರುವಳಿಗೆ ಚೆಕ್ ನೀಡಿಲ್ಲವೆನ್ನುವುದು ಮತ್ತು ನೆಗೋಷಿಯೇಬಲ್ ಇನ್ಟ್ರ್ಷುಮೆಂಟ್ ಕಾಯ್ದೆ ಸೆಕ್ಷೆನ್ 138ರ ಅಡಿಯಲ್ಲಿ ಆರೋಪಿ ತಪ್ಪೆಸಗಿಲ್ಲ ಎನ್ನುವುದು ಆರೋಪಿಯ ವಾದವಾಗಿತ್ತು. ಮೇಲ್ಮನವಿಯ ವಕೀಲರ ವಾದ ಆಲಿಸಿದ ಮಾನ್ಯ ಶೀಘ್ರ ವಿಲೇವಾರಿ ಮತ್ತು ಸೆಷೆನ್ಸ್ ಜಡ್ಜ್ ಸಾಗರ ಇದರ ನ್ಯಾಯಾಧೀಶರಾದ ಐ.ಎಸ್. ಜಂತ್ಲಿ ಮೇಲ್ಮನವಿಯನ್ನು ಪುರಸ್ಕರಿಸಿ, ಆರೋಪಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಪಡಿಸಿ ಆದೇಶ ನೀಡಿದ್ದಾರೆ. ಆರೋಪಿಯ ಪರವಾಗಿ ನ್ಯಾಯವಾದಿ ವಿ.ಶಂಕರ್ ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

