ಶಿವಮೊಗ್ಗ

ಹೊಸ ವರ್ಷ: ವೈದ್ಯರಿಂದ ನಾಟಕ ಪ್ರದರ್ಶನ

Published On :

ಶಿವಮೊಗ್ಗ: ಭಾರತೀಯ ವೈದ್ಯಕೀಯ ಸಂಘವು ನಗರದ ಐ.ಎಂ.ಎ. ಹಾಲ್‌ನಲ್ಲಿ ಡಿಸೆಂಬರ್ 31ರಂದು ರಾತ್ರಿ ನೂತನ ಹೊಸ ವರ್ಷಾರಣೆಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಿತ್ತು.
ನಗರದ ವೈದ್ಯರಿಂದ ರೇಣುಕಪ್ಪ ನಿರ್ದೇಶನದ 'ಕಿವುಡು ಸರ್ ಕಿವುಡು' ಹಾಸ್ಯ ಪ್ರಧಾನ ನಾಟಕ ಪ್ರದರ್ಶನಗೊಂಡಿತು. ಜಾನಪದ ಕಲಾವಿದ ಜಿ. ವಿಜಯ್ ಕುಮಾರ್ ತಂಡದ ವತಿಯಿಂದ ಜಾನಪದ ಗೀತೆ, ಭಾವಗೀತೆ, ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ಪ್ರಸ್ತುತಗೊಂಡಿತು. ಶ್ರೀರಂಜನಿ ದತ್ತಾತ್ರಿ ಬಹುಮಾನ ನೀಡಿದರು. ಕಾರ್ಯಕ್ರಮದಲ್ಲಿ ಐ.ಎಂ.ಎ ಹಾಲ್‌ನ ಹಾಗೂ ನಗರದ ವೈದ್ಯರು ಪಾಲ್ಗೊಂಡಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಎ ಅಧ್ಯಕ್ಷೆ ವಾಣಿ ಕೋರಿಯವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಜನಶಿಕ್ಷಣ ಸಂಸ್ಥೆಯ ಅರುಣಾದೇವಿ ಅವರು ಪಾಲ್ಗೊಂಡಿದ್ದರು.
ಡಾ.ಎಲ್.ಎನ್. ನಾಯಕ್, ಕೋಟ್ರೇಶ್, ಗೀತಾ ಇಸ್ಲೂರ್, ಡಾ. ಪಿ. ನಾರಾಯಣ್, ಡಾ. ಶ್ರೀನಾಥ್, ಡಾ. ಪ್ರಶಾಂತ್ ಇಸ್ಲೂರ್ ಹಾಗೂ ವೈದ್ಯಕೀಯ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸೊರಬದಲ್ಲೂ ಆಚರಣೆ: 2014ರ ಹೊಸ ವರ್ಷದ ಆಚರಣೆ ಪಟ್ಟಣದ ವಿವಿಧೆಡೆ ಆಚರಿಸಲಾಯಿತು. ಡಾಬಾ, ಬಾರ್‌ಗಳಲ್ಲಿ ಮೋಜು ಮಸ್ತಿ ಮಾಡುವವರ ಸಂಖ್ಯೆ ಗಣನೀಯವಾಗಿತ್ತು. ಗ್ರಾಮಾಂತರ ಪ್ರದೇಶದಲ್ಲಿ ಕೆಲವೆಡೆ ಜಾಂಝ್ ಬಡಿದು, ಪಟಾಕಿ ಸಿಡಿಸಿ, ಸರಳವಾಗಿ ಹೊಸ ವರ್ಷ ಆಚರಿಸಿದರು. ಮಕ್ಕಳು ಬುಧವಾರ ಶಾಲಾ ಆವರಣವನ್ನು ಸಗಣಿಯಿಂದ ಬಳಿದು ರಂಗೋಲಿ ಎಳೆದು ಹೊಸ ವರ್ಷವನ್ನು ಬರಮಾಡಿಕೊಂಡರು. ಮೆಸೇಜ್, ಇ-ಮೇಲ್ ಮೂಲಕ ಶುಭಾಷಯ ಅರ್ಪಿಸಿ, ವಿನಿಮಯ ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಕೆಲ ಯುವಕರು ಪಟ್ಟಣದ ಹೊರವಲಯದಲ್ಲಿ ಕುಡಿದು, ಕುಪ್ಪಳಿಸಿ, ಕೇಕೆ ಹಾಕಿ ರಸ್ತೆಗೆ ಬಾಟಲಿ ಎಸೆದು ಒಡೆದಿದ್ದು ಕಂಡುಬಂತು.
ಶಾಸಕ ಮಧು ಬಂಗಾರಪ್ಪ, ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ, ಎಚ್.ಹಾಲಪ್ಪ, ಸೊರಬ ಕ್ಷೇತ್ರದ ಹೊಸ ವರ್ಷದ ಶುಭಾಷಯ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.