ಶಿವಮೊಗ್ಗ

'ಗೋಪಾಲಗೌಡ ವೃತ್ತ' ನಾಮಕರಣ ಮಾಡಿ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಜ.6
ನಗರದ ಎಂಆರ್‌ಎಸ್ ವೃತ್ತಕ್ಕೆ ಶಾಂತವೇರಿ ಗೋಪಾಲಗೌಡ ವೃತ್ತವೆಂದು ಅಧಿಕೃತವಾಗಿ ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ನಗರಸಭೆಯನ್ನು ಆಗ್ರಹಿಸಿದೆ.
ಸೋಮವಾರ ನಗರಸಭೆ ಮುಂಭಾಗ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಗೋಪಾಲಗೌಡರ ಪ್ರಾಮಾಣಿಕ ಹೋರಾಟಗಳನ್ನು ಜನತೆ ಎಂದಿಗೂ ಮರೆಯುವುದಿಲ್ಲ. ಗೇಣಿ ಪದ್ಧತಿ ಹಾಗೂ ಭೂ ಮಾಲಿಕರ ದಬ್ಬಾಳಿಕೆ ವಿರುದ್ಧ ಹೋರಾಡುತ್ತಾ ಕಾಗೋಡು ಚಳುವಳಿಯ ನೇತೃತ್ವ ವಹಿಸಿ, ಊಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತರಲು ಕಾರಣಕರ್ತರು ಹಾಗೂ ಏಕೀಕರಣ ಹೋರಾಟದಲ್ಲೂ ಸಕ್ರಿಯವಾಗಿ ಹೋರಾಡಿದವರು. ಮೂರು ಬಾರಿ ಶಿವಮೊಗ್ಗ ಶಾಸಕರಾಗಿ ಆಯ್ಕೆಯಾದವರು. ತಮ್ಮ ಕೊನೆ ೆಗಳಿಗೆವರೆಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದವರು. ಅಂತಹವರ ಹೆಸರು ಚಿರಸ್ಥಾಯಿಯಾಗಿ ಉಳಿಸಬೇಕಾಗಿದೆ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಈಡೇರದ ಬೇಡಿಕೆ: ಎಂಆರ್‌ಎಸ್ ವೃತ್ತಕ್ಕೆ ಶಾಂತವೇರಿ ಗೋಪಾಲಗೌಡ ವೃತ್ತವೆಂದು ನಾಮಕರಣ ಮಾಡಬೇಕು. ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸ್ಥಾಪಿಸಬೇಕು, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ನೀಡಬೇಕು, ಶಾಲಾ ಪಠ್ಯದಲ್ಲಿ ಗೋಪಾಲಗೌಡರ ವಿಚಾರಧಾರೆ ಅಳವಡಿಸಬೇಕು ಎಂದು ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಬೇಡಿಕೆ ಈಡೇರಿಲ್ಲ. ಹೀಗಾಗಿ ಪ್ರತಿಭಟನೆ ಹಾದಿ ಹಿಡಿದಿದ್ದಾಗಿ ಮುಖಂಡರು ತಿಳಿಸಿದರು.
ಗೋ.ರಮೇಶಗೌಡ, ಮಂಜುನಾಥ, ನರಸಿಂಹ, ರಾಜುನಾಯ್ಕ, ಸಂತೋಷ್, ಮಧು, ರಘು, ರವಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.