ಶಿವಮೊಗ್ಗ

'ಕೊಲ್ಲಿ ಬಚ್ಚಲು'ಗೆ ರು. 10 ಕೋಟಿ

Published On :

ಸಾಗರ: ಕೊಲ್ಲಿಬಚ್ಚಲಿನ ಜಲ ಸಂಗ್ರಹಗಾರವನ್ನು ಸದ್ಬಳಕೆ ಮಾಡಿಕೊಳ್ಳುವ ಒಂದು ಪರಿಪೂರ್ಣ ಯೋಜನೆ ಅನುಷ್ಠಾನಕ್ಕೆ 10 ಕೋಟಿ ಹಣ ಕೊಡಿಸುತ್ತೇನೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
 ಅವರು ಆನಂದಪುರಂ ಹೋಬಳಿ ಆಚಾಪುರ ಗ್ರಾಮಪಂಚಾಯಿತಿ ವ್ಯಾಪ್ತಿ ಗಿಳಾಲಗುಂಡಿಯ ಹೊಸಕೊಪ್ಪದಲ್ಲಿ  ಜಲಸಂಪನ್ಮೂಲ(ಸಣ್ಣ ನೀರಾವರಿ) ಇಲಾಖೆಯಿಂದ ಕೊಲ್ಲಿಬಚ್ಚಲು ನೀರಾವರಿ ಯೋಜನಾ ಡ್ಯಾಂ ಸಮೀಪ 1 ಕೋಟಿ 22 ಲಕ್ಷ ಅನುದಾನದಲ್ಲಿ ಕಾಲುವೆ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪ್ರಾಶಸ್ತ್ಯದ ಸ್ಥಳ: ಈಗಾಗಲೆ ಸಾಗರ ತಾಲ್ಲೂಕು ಶರಾವತಿ ಜಲ ಯೋಜನೆ ಹಾಗೂ ಅಂಬಲಿಗೊಳ ಯೋಜನೆಯಿಂದ ಸಾಕಷ್ಟು ಮುಳುಗಡೆಯಾಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ಜಮೀನು ಮುಳುಗಡೆಯಾಗದೆ ರೈತರ ಜಮೀನುಗಳಿಗೆ ಹೆಚ್ಚು ನೀರು ಕೊಡುವಂತಹ ಅತ್ಯಂತ ಪ್ರಾಶಸ್ತ್ಯದ ಸ್ಥಳ ಕೊಲ್ಲಿಬಚ್ಚಲು ಎಂದರು.
 ನೀರಾವರಿ ಯೋಜನೆ ಉದ್ದೇಶಿತ ಡ್ಯಾಂ ನಿರ್ಮಾಣ ವಾಗಿ ಎರಡು ಕಾಲುವೆಗಳ ಕಾಮಗಾರಿ 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಕಳೆದ 10 ವರ್ಷದಿಂದ ಕ್ಷೇತ್ರದಲ್ಲಿ ಅಧಿಕಾರ ಹೊಂದಿದ್ದ ಶಾಸಕರು  ಇಂತಹ ಯೋಜನೆ ಪೂರ್ಣಗೊಳಿಸಿ ರೈತರಿಗೆ ನೀರು ನೀಡುವ ಕಾಳಜಿ ವಹಿಸದಿರುವುದು ಖೇದದ ಸಂಗತಿಯಾಗಿದೆ ಎಂದು ದೂರಿದರು.
500 ಟಿಎಂಸಿ ನೀರು: ಕೊಲ್ಲಿಬಚ್ಚಲು ಯೋಜನೆಯಿಂದ ಪ್ರಸ್ತುತ 500 ಎಕರೆ ಜಮೀನಿಗೆ ನೀರುಣಿಸುವಷ್ಟು ಅಂದರೆ 500 ಎಂ.ಟಿ.ಸಿ ನೀರು ಸಂಗ್ರಹವಾಗುತ್ತಿದೆ
.ಈಗಾಗಲೆ ಕಣ್ಣೂರುವರೆಗೂ ನಿರ್ಮಾಣವಾಗಿರುವ ಕಾಲುವೆಯನ್ನು ಪರಿಶೀಲಿಸಿ ಮಳೆನೀರು ಕಾಲುವೆಗೆ ಬೀಳದಂತೆ ಹೊರಕಾಲುವೆ ನಿರ್ಮಿಸಲು ಸೂಚಿಸಲಾಗಿದೆ. ಪ್ರಮುಖ ಕಾಲುವೆ ಯಿಂದ ಸೀಳು ಕಾಲುವೆ ನಿರ್ಮಿಸಿ ರೈತರ ಜಮೀನಿಗೆ ಹೆಚ್ಚು ನೀರನ್ನು ಬಳಸಿ ಕೊಳ್ಳುವ ಮೂಲಕ ಮೊದಲ ಬೆಳೆ ಉತ್ತಮವಾಗಿ ತೆಗೆಯುವ ಜೊತೆಗೆ ಎರಡನೆ ಬೆಳೆಯನ್ನು ಪಡೆಯು ವಂತಾಗಬೇಕು ಎಂದರು.
 ಜಿ.ಪಂ.ಸದಸ್ಯ ರತ್ನಾಕರ್ ಹೊನಗೋಡು ಮಾತನಾಡಿ, ಈ ಹಿಂದಿನ ಶಾಸಕರ ದಿವ್ಯ ನಿರ್ಲಕ್ಷ್ಯದ ಪರಿಣಾಮ ಕಳೆದ 9 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹತ್ವದ ನೀರಾವರಿ ಯೋಜನೆಗೆ ರೈತಪರ ಕಾಳಜಿಯ ಕಾಗೋಡುತಿಮ್ಮಪ್ಪನವರು ಕಾಮಗಾರಿಯ ಪರಿಪೂರ್ಣಗೊಳಿಸುವ ಚಿಂತನೆ ಮಾಡಿರುವ ಈ ಭಾಗದ ಜನರ ಸೌಭಾಗ್ಯ ಎಂದರು.
ಬಗರ್‌ಹುಕುಂ ಸಮಿತಿ ಸದಸ್ಯ ಲಿಂಗರಾಜ್ , ಗ್ರಾಮ ಪಂಚಾಯಿತಿ ಅಧ್ಯಕ್ಷ ಯೊಂಕೇಶ್, ಉಪಾಧ್ಯಕ್ಷ ಬಸವರಾಜ್ ,ತಾ.ಪಂ.ಮಾಜಿ ಅಧ್ಯಕ್ಷೆ ಯಶೋದಮ್ಮ, ಬಿ.ಟಾಕಪ್ಪ, ರೈತ ಕೌತಿನಾಗಪ್ಪ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.