ಶಿವಮೊಗ್ಗ

ಧಾರ್ಮಿಕ ಭಾವನೆಗೆ ಧಕ್ಕ ತರಬೇಡಿ

Published On :

ಶಿರಾಳಕೊಪ್ಪ:  ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಹಬ್ಬವನ್ನು ಆಚರಿಸಿ, ಹಬ್ಬದ ಸಂದರ್ಭ ಬೇಡವಾದವರು ಕಿತಾಪತಿ ಮಾಡದಂತೆ ಎಚ್ಚರ ವಹಿಸಿ. ಶಾಂತಿಯುತ ಹಬ್ಬಗಳ ಆಚರಣೆ ಮಾದರಿ ಆಗಿರಲಿ ಎಂದು ವೃತ್ತ ನಿರೀಕ್ಷಕ ಮಾದಪ್ಪ ಕರೆ ನೀಡಿದರು. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬ ಆಚರಣೆ ಸಂದರ್ಭ ಕಹಿ ಭಾವನೆಗಳನ್ನು ಬಿಟ್ಟು, ಹಬ್ಬ ಆಚರಣೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ ಎಂದರು. ಹಬ್ಬ ಹರಿದಿನಗಳಲ್ಲಿ ಏನಾದರೂ ಅಚಾತುರ್ಯ ಆಗದಂತೆ ಎಚ್ಚರಿಕೆ ವಹಿಸಬೇಕು. ಹಬ್ಬ ಆಚರಣೆ ಎಲ್ಲರಿಗೂ ಮಾದರಿ ಆಗಬೇಕು. ಪಟ್ಟಣದ ಪ್ರಮುಖರಿಗೆ ಎಲ್ಲರೂ ಬೆಲೆ ಕೊಡಬೇಕಾಗುತ್ತದೆ. ಇಲ್ಲವಾದರೆ ಅಚಾತುರ್ಯಗಳು ಸಂಭವವಿರುತ್ತದೆ ಎಂದರು. ಶಿರಾಳಕೊಪ್ಪ ಭಾಗದಲ್ಲಿ ಠಾಣೆಯ ವ್ಯಾಪ್ತಿಗೆ 96 ಗ್ರಾಮಗಳು ಬರುತ್ತವೆ. ಇರುವಂತಹ ಸಿಬ್ಬಂದಿ ಬೇರೆ ಬೇರೆ ಕೆಲಸ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಶಾಂತಿ ಪಾಲನೆ ಮೂಲಕ ಶಿರಾಳಕೊಪ್ಪ ಪಟ್ಟಣಕ್ಕೆ ಅಂಟಿಕೊಂಡಿರುವ ಸೂಕ್ಷ್ಮಪ್ರದೇಶ ಎಂಬ ಕಳಂಕವನ್ನು ದೂರಮಾಡಿ ಎಂದರು. ಸಭೆಯಲ್ಲಿ ಪಟ್ಟಣದ ಮುಸ್ಲಿಂ ಸಮಾಜದ ಪ್ರಮುಖರು, ಪಟ್ಟಣದ ಪ್ರಮುಖರು ಹಾಜರಿದ್ದರು. ಎಸ್.ಐ.ಗುರುಪ್ರಸಾದ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.