ಶಿವಮೊಗ್ಗ

ಮಾಲಾರ್ಪಣೆ ಮಾಡುವುದೇ ಹೆಮ್ಮೆ'

Published On :

ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆಯಲ್ಲಿ ಕಾರ್ಯಪಾಲಕ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡು ಸರ್ ಎಂ.ವಿಶ್ವೇಶ್ವರಾಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ನಿಜವಾಗಿಯೂ ಹೆಮ್ಮೆಯೆನಿಸಿತೆಂದು ನೂತನವಾಗಿ ವಿಐಎಸ್ಎಲ್ ಕಾರ್ಯಪಾಲಕರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡ ಎಂ.ರವಿ ತಿಳಿಸಿದರು. ವಿಐಎಸ್ಎಲ್ ಕಾರ್ಖಾನೆಯಲ್ಲಿನ ಯಂತ್ರೋಪಕರಣಗಳು ಮತ್ತು ಸ್ಥಾವರಗಳು ಹಳೆಯದಾಗಿದ್ದರೂ ಶಿಥಿಲವಾಗಿಲ್ಲ. ವಿಐಎಸ್ಎಲ್ ಸಮೂಹ ಸರ್ ಎಂ. ವಿಶ್ವೇಶ್ವರಾಯನವರ ಕನಸನ್ನು ನನಸಾಗಿಸಲು ಸಂಘಟಿತರಾಗಿ ಪ್ರಯತ್ನಿಸಬೇಕು. ಈ ದಿಶೆಯಲ್ಲಿ ವಿಐಎಸ್ಎಲ್ ಸಮೂಹವನ್ನು ಕಾರ್ಯಪಾಲಕ ನಿರ್ದೇಶಕನಾಗಿ ಮುನ್ನಡೆಸಲು ನನಗೆ ಉತ್ಸಾಹವೆನಿಸುತ್ತದೆಂದು ನುಡಿದ ಎಂ. ರವಿಯವರು ವಿಐಎಸ್ಎಲ್ ಕಾರ್ಖಾನೆಯನ್ನು ಮತ್ತು ವಿಐಎಸ್ಎಲ್ ಸಮೂಹವನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಭರವಸೆ ಮೂಡಿಸುವ ಅರ್ಥವನ್ನು ಬಿಂಬಿಸುವ ಮಾತುಗಳನ್ನಾಡಿದರು.ಸಮಾರಂಭದಲ್ಲಿ ವಿಐಎಸ್ಎಲ್ ಕಾರ್ಖಾನೆಯ ಆಡಳಿತ ಹಾಗೂ ಸಿಬ್ಬಂದಿ ಮಹಾಪ್ರಬಂಧಕ ಎ. ರಂಗರಾಜನ್, ಯೋಜನೆ, ಗಣಿಗಳು ಹಾಗೂ ಮಾರುಕಟ್ಟೆ ಮಹಾಪ್ರಬಂಧಕ ಧ್ರುವ ಬ್ಯಾನರ್ಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.