ಬದುಕು ಕಿತ್ತುಕೊಂಡ ನಕಲಿ ವೈದ್ಯ
ಕನ್ನಡಪ್ರಭ ವಾರ್ತೆ ಟಿ ಶಿವಮೊಗ್ಗ ಟಿ ಜ. 13
ಅಮ್ಮನನ್ನು ಕೂಲಿ ಕೆಲಸಕ್ಕೆ ಬಿಡಿಸಿ, ನಾನೇ ಉದ್ಯೋಗಕ್ಕೆ ಹೋಗಿ ಕುಟುಂಬವನ್ನು ನಿರ್ವಹಿಸಬೇಕೆಂದು ಕನಸು ಕಂಡ ಯುವಕನೊಬ್ಬ ಇತರರ ಆಶ್ರಯದಲ್ಲಿಯೇ ಜೀವನ ಸಾಗಿಸುವಂತಾಗಿದೆ. ತನಗಿದ್ದ ಸಣ್ಣ ಕಾಯಿಲೆಗೆ ನಕಲಿ ವೈದ್ಯನೊಬ್ಬನಿಂದ ಚಿಕಿತ್ಸೆ ಪಡೆದ ಪರಿಣಾಮ ಜೀವನವೇ ಕತ್ತಲಾಗಿದೆ.
ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಸಮೀಪದ ಮಳಲಿಕೊಪ್ಪ ಗ್ರಾಮದ ಹನುಮಂತನೇ ಇಂಥ ನತದೃಷ್ಟ ವ್ಯಕ್ತಿ. ಈತನ ಕುಟುಂಬ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದ್ದರೂ ಎಸ್ಎಸ್ಎಲ್ಸಿ ಪೂರೈಸಿದ. ನಂತರ ಸ್ವಲ್ಪ ದಿನ ಹೊಟೇಲ್ನಲ್ಲಿ ಕ್ಲೀನರ್ ಆಗಿ ಕಾರ್ಯ ನಿರ್ವಹಿಸಿ ಐಟಿಐಯನ್ನು ಮೊದಲ ದರ್ಜೆಯಲ್ಲಿಯೇ ಮುಗಿಸಿದೆ. ಆದರೆ, ಈಗ ಈತ ಹಾಸಿಗೆ ಹಿಡಿದಿದ್ದಾನೆ. ನಾಲ್ಕು ಹೆಜ್ಜೆ ನಡೆಯುವುದೂ ಕಷ್ಟವಾಗಿದ್ದು, ಎಲ್ಲವಕ್ಕೂ ತಾಯಿಯನ್ನು ಆಶ್ರಯಿಸಬೇಕಾಗಿದೆ.
ಚಿಕಿತ್ಸೆ ಕೊಡಿಸಲು ಶಿರಾಳಕೊಪ್ಪದ ಬಸವರಾಜ್ ಎಂಬ “Èæç¥ÚÀ’Áæà¶¹ÁÚ ಬಳಿ ಈತ ತನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದ. ದುರದೃಷ್ಟವಶಾತ್ ಆ ಸಂದರ್ಭದಲ್ಲಿಯೇ ತನಗಿರುವ ತಲೆನೋವಿನ ಬಗ್ಗೆಯೂ ಪ್ರಸ್ತಾಪಿಸಿದ್ದ. ಹಿಂದು ಮುಂದು ನೋಡದ ಬಸವರಾಜ್ ಹನುಮಂತನಿಗೆ ಒಟ್ಟೊಟ್ಟಿಗೆ ಎರಡು ಇಂಜೆಕ್ಷನ್ಗಳನ್ನು ನೀಡಿದ.
ಮನೆಗೆ ಮರಳುತ್ತಿದ್ದಂತೆಯೇ ಆತ ಕುಸಿದು ಬಿದ್ದಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಕೆಲವರು ನಕಲಿ ವೈದ್ಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟರ ಮಧ್ಯೆಯೇ ಈ ನಕಲಿ ವೈದ್ಯ ಮಹಾಶಯ ಈ ಕುಟುಂಬದ ಮೇಲೆ ಸ್ಥಳೀಯ ಮುಖಂಡರಿಂದ ಒತ್ತಡ ಹೇರಿಸಿದ್ದು, ಹನುಮಂತ ಪಾರ್ಶ್ವವಾಯು ಪೀಡಿತನಾಗಿದ್ದು, ತಾನೇನೂ ಮಾಡಲಾಗದು ಎಂದು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾನೆ.
ಕಂಗಾಲಾದ ಈ ಮುಗ್ಧ ಕುಟುಂಬ ಮುಂದೇನು ಮಾಡಬೇಕೆಂದು ತೋಚದೆ ದೇವರು, ದೆವ್ವ ಎಂದು ಮೂಢನಂಬಿಕೆಯ ಹಿಂದೆ ಬಿದ್ದಿದ್ದಾರೆ. ಆದರೂ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಶಿವಮೊಗ್ಗದ ಖ್ಯಾತ ನರರೋಗ ತಜ್ಞರ ಬಳಿ ಚಿಕಿತ್ಸೆ ಕೊಡಿಸಲು ಮುಂದಾದರು.
ಈಗೇನಾಗಿದೆ?: ಆರಂಭದಲ್ಲಿ ರಾತ್ರಿ ಕೂಡ ಮಗ್ಗಲು ಬದಲಿಸಲು ಹನುಮಂತನಿಗೆ ಒಬ್ಬರು ಸಹಾಯಕ್ಕೆ ಇರಬೇಕಾಗಿತ್ತು. ಈಗ ನಿಧಾನವಾಗಿ ಹೆಜ್ಜೆ ಹಾಕುತ್ತಾನೆ. ಆದರೆ, ದೇಹದ ಒಂದು ಭಾಗ ಕೈಕಾಲು ಆದಿಯಾಗಿ ನಿಷ್ಕ್ರಿಯವಾಗಿದೆ. ಆತನಿಂದ ಯಾವುದೇ ವಸ್ತುವನ್ನೂ ಎತ್ತಲು ಸಾಧ್ಯವಿಲ್ಲ. ಮಾತು ಪೂರ್ತಿ ಸರಾಗವಾಗಿಲ್ಲ. ಒಟ್ಟಾರೆ ಜತೆಗೊಬ್ಬರಿದ್ದರಷ್ಟೇ ಅವನ ಚಟುವಟಿಕೆ ಎಂಬಂತಾಗಿದೆ.
ಹನುಮಂತ ನಿಧಾನವಾಗಿ ಸುಧಾರಿಸಿಕೊಳ್ಳಲಿದ್ದಾನೆ ಎಂಬ ಭರವಸೆಯನ್ನು ವೈದ್ಯರು ನೀಡಿದ್ದರಿಂದ ಯಾವುದೋ ಭರವಸೆಯಲ್ಲಿ ಈ ಕುಟುಂಬ ಕಾಲ ತಳ್ಳುತ್ತಿದೆ.
ಈ ಮಧ್ಯೆಯೇ ಈತನ ಪರವಾಗಿ ದನಿ ಎತ್ತಲು ಬಹುತೇಕರು ಮುಂದೆ ಬರುತ್ತಿಲ್ಲ. ಈ ಬಸವರಾಜು ಚಿನ್ನದ ಅಡಮಾನ ಸಾಲ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾನೆ. ಹಳ್ಳಿಯ ಮುಗ್ಧ ಜನರು ಇವನ ಬಳಿ ಚಿನ್ನ ಅಡ ಇಟ್ಟು ಅಷ್ಟೋ ಇಷ್ಟು ಸಾಲ ಪಡೆದುಕೊಳ್ಳುತ್ತಾರೆ.
ಏತನ್ಮಧ್ಯೆ, ಶಿರಾಳಕೊಪ್ಪದ ವೈದ್ಯರೊಬ್ಬರು ಬಸವರಾಜ್ನ ವೈದ್ಯಕೀಯ ಸೇವೆ ಕುರಿತು ಆರೋಗ್ಯ ಇಲಾಖೆಯಲ್ಲಿ ಮಾಹಿತಿ ಕಲೆ ಹಾಕಿದಾಗ, ಆತನೊಬ್ಬ ನಕಲಿ ವೈದ್ಯ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈತನ ಸೇವೆ ಹೀಗೆ ಮುಂದುವರಿದರೆ ಇನ್ನೆಷ್ಟೋ ಜೀವಗಳಿಗೆ ತೊಂದರೆಯಾಗುವುದೋ ಗೊತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

