ಇಂದಿನಿಂದ ಛಾಯಾಚಿತ್ರ ಪ್ರದರ್ಶನ
ಶಿವಮೊಗ್ಗ: ಡಾ. ಗುಲ್ವಾಡಿಯವರ ಜನ್ಮ ಶತಾಬ್ಧಿ ಮಹೋತ್ಸವ ಸಮಿತಿಯು ಜ.15ಮತ್ತು 16ರಂದು ನಗರದಲ್ಲಿ ಅಖಿಲ ಭಾರತೀಯ ಮಟ್ಟದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ.
ಇತ್ತೀಚೆಗೆ ನಡೆಸಿದ ಅಖಿಲ ಭಾರತ ಛಾಯಾಗ್ರಹಣ ಸ್ಪರ್ಧೆಗೆ ಬಂದ ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಇಲ್ಲಿನ ಗಾಯತ್ರಿ ಮಾಂಗಲ್ಯಮಂದಿರದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಪ್ರತಿಭಾಪುರಸ್ಕಾರ, ಪುರಾತನ ಕ್ಯಾಮರಾ ಮತ್ತು ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿದೆ.
15ರಂದು ಬೆಳಗ್ಗೆ 10.30ಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಆಳ್ವಾಸ್ ಅಧ್ಯಕ್ಷ ಮೋಹನ್ ಆಳ್ವ, ಫಿಲಂ ಫೆಡರೇಷನ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಮೂಲ ಭಕ್ತವತ್ಸಲ ಉಪಸ್ಥಿತರಿರುವರು. ಜನವರಿ 16ರ ಸಂಜೆ ವರೆಗೂ ಪ್ರದರ್ಶನವಿರುತ್ತದೆ.
ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷೆ ಛಾಯಾದೇವಿ ಡಿ. ಗುಲ್ವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಅದ್ಭುತ, ಮನಮೋಹಕ ದೃಶ್ಯಗಳ ಛಾಯಾಚಿತ್ರ ಪ್ರದರ್ಶನ ಹಾಗೂ ಪುರಾತನ ಕ್ಯಾಮರಾ ಮತ್ತು ಪರಿಕರಗಳನ್ನು ವೀಕ್ಷಿಸಲು ನಗರದ ಜನತೆಗೊಂದು ಸುಸಂದರ್ಭ. ಈ ಕಾರ್ಯಕ್ರಮದಲ್ಲಿ ನಾಗರಿಕರು, ಛಾಯಾಚಿತ್ರ ಪ್ರೇಮಿಗಳು ಪಾಲ್ಗೊಳ್ಳುವಂತೆ ಜನ್ಮ ಶತಾಬ್ದಿ ಮಹೋತ್ಸವ ಸಮಿತಿ ಕೋರಿದೆ.
ಫೋಟೋ ಉಡುಗೊರೆ
ಉಡುಗೊರೆಯಾಗಿ ಕುಟುಂಬ ಸದಸ್ಯರ ಗುಂಪು ಛಾಯಾಚಿತ್ರ, ವಿದ್ಯಾರ್ಥಿಗಳಿಗಾಗಿ ಪಾಸ್ಪೋರ್ಟ್ ಅಳತೆಯ ಛಾಯಾಚಿತ್ರವನ್ನು ಕಾರ್ಯಕ್ರಮದಲ್ಲಿ ತೆಗೆದುಕೊಡುವ ವಿಶೇಷ ಕಾರ್ಯಕ್ರಮವನ್ನು ಗುಲ್ವಾಡಿಯವರ ಜನ್ಮಶತಾಬ್ಧಿ ಮಹೋತ್ಸವ ಸಮಿತಿ ಆಯೋಜಿಸಿದೆ. ಅಷ್ಟೇ ಅಲ್ಲದೇ ಮೆ. ವಾಸನ್ ಐ ಕೇರ್ ಸಂಸ್ಥೆಯಿಂದ ಕಣ್ಣಿನ ತಪಾಸಣೆ ಶಿಬಿರ ನಡೆಯುತ್ತದೆ ಮತ್ತು ಹಳೆಯ ಕ್ಯಾಮರಾಗಳ ತಪಾಸಣೆ ಹಾಗೂ ಸಲಹೆ ನೀಡಲಾಗುತ್ತದೆ. 16ರಂದು ಸಂಜೆ ವರೆಗೂ ಉಚಿತ ಉಡುಗೊರೆ ಇರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

