ನಾಳೆಯಿಂದ ಶಿವಮೊಗ್ಗದಲ್ಲಿ ಕೃಷಿ ಉತ್ಸವ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.15
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜ.17, 18ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೃಷಿ ಉತ್ಸವ ಹಮ್ಮಿಕೊಂಡಿದೆ.
ಅತ್ಯಾಧುನಿಕ ಕೃಷಿ ತಂತ್ರಜ್ಞಾನಗಳ ಸಮಗ್ರ ಪರಿಚಯ ನೀಡಬಲ್ಲ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಪ್ರಾತ್ಯಕ್ಷಿಕೆಗಳು, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಬ್ಯಾಂಕಿನ ಸೌಲಭ್ಯಗಳ ಮಾಹಿತಿ ಒದಗಿಸುವ ವಸ್ತು ಪ್ರದರ್ಶನ ಮಳಿಗೆಗಳು, ಕೃಷಿ ಉಪಕರಣಗಳು, ಬಿತ್ತನೆ ಬೀಜ, ಗೊಬ್ಬರ, ಸಸ್ಯ ಸಂರಕ್ಷಣಾ ಸಾಮಗ್ರಿಗಳು ಮತ್ತು ನಿತ್ಯೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಗಳು ಮೇಳದ ಮುಖ್ಯಾಂಶಗಳು.
ಇದರೊಟ್ಟಿಗೆ, ಸುಧಾರಿತ ಕೃಷಿ ಪದ್ಧತಿಗಳು, ಲಾಭದಾಯಕ ಹೈನುಗಾರಿಕೆ, ಸಾವಯವ ಕೃಷಿ ಮತ್ತಿತರ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಕೃಷಿ ವಿಚಾರ ಸಂಕಿರಣಗಳು, ವಿಶೇಷ ತಳಿಗಳ ಮೇಲೆ ಬೆಳಕು ಚೆಲ್ಲುವ ಜಾನುವಾರು, ಶ್ವಾನ ಮತ್ತು ಕುಕ್ಕುಟ ಪ್ರದರ್ಶನ, ಮಹಿಳಾ ಸಬಲೀಕರಣದ ಮಾಹಿತಿ ಕಾರ್ಯಾಗಾರ, ಜನಮನ ರಂಜಿಸುವ ಮನೋರಂಜನಾ ಕಾರ್ಯಕ್ರಮವೂ ಇಲ್ಲಿರುತ್ತದೆ.
17ರಂದು ಬೆಳಗ್ಗೆ 10 ಗಂಟೆಗೆ ಕೃಷಿ ಉತ್ಸವವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸುವರು. ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ವಸ್ತುಪ್ರದರ್ಶನ ಮಳಿಗೆಯನ್ನು ನಿಕಟಪೂರ್ವ ಡಿಸಿಎಂ ಈಶ್ವರಪ್ಪ ಉದ್ಘಾಟಿಸುವರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕಿ ಶಾರದಾ ಪೂರ್ಯಾನಾಯ್ಕ, ನಗರಸಭೆ ಅಧ್ಯಕ್ಷೆ ಖುರ್ಷಿದಾ ಬಾನು ಉಪಸ್ಥಿತರಿರುವರು. 18ರಂದು ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದ್ದು, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿ.ಪಂ. ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಸುಧೀರ್ಕುಮಾರ್ ಬಂಟ್ವಾಳ್, ಪೊಲೀಸ್ ಉಪ ಅಧೀಕ್ಷಕ ಪಿ.ಓ. ಶಿವಕುಮಾರ್, ನಗರಸಭೆ ಉಪಾಧ್ಯಕ್ಷ ರೇಖಾ ಚಂದ್ರಶೇಖರ್ ಉಪಸ್ಥಿತರಿರುವರು.
ಗೋಷ್ಠಿಗಳು: 17ರಂದು ಮಧ್ಯಾಹ್ನ 12.30 ಗಂಟೆಗೆ “ÈÚßÕ×Û ಸ್ವಾವಲಂಬನೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ®Û}ÚÃ’ ಕುರಿತು ವಿಚಾರಗೋಷ್ಠಿ ನಡೆಯಲಿದೆ. ನಗರಸಭಾ ಸದಸ್ಯ ರಮೇಶ್ ಅಧ್ಯಕ್ಷತೆ ವಹಿಸಲಿದ್ದು, ಮಮತಾ ರಾವ್ ವಿಷಯ ತಜ್ಞರಾಗಿ ಪಾಲ್ಗೊಳ್ಳುವರು.
- ಮಧ್ಯಾಹ್ನ 3.15 ಗಂಟೆಗೆ “ÅÛºÚ¥Û¾ÚßOÚ ಕೃಷಿಯ ಜೀವನಾಡಿ Ôæç«ÚßVÛÂOæ’ ವಿಷಯವಾಗಿ ನಡೆಯುವ ಗೋಷ್ಠಿಯಲ್ಲಿ ಶಿಮುಲ್ ಅಧ್ಯಕ್ಷ ಕೆ.ಎಲ್. ಜಗದೀಶ್ವರ ಅಧ್ಯಕ್ಷತೆ ವಹಿಸುವರು. ಡಾ. ಕೆ.ಸಿ. ವೀರಣ್ಣ, ಡಾ. ಆರ್.ಆರ್. ರವೀಂದ್ರ ವಿಷಯ ಮಂಡಿಸುವರು.
- 18ರಂದು ಬೆಳಗ್ಗೆ 10 ಗಂಟೆಗೆ “AÔÛÁÚ ಭದ್ರತೆಗೊಂದು ಮಾರ್ಗ ಬತ್ತದ ಬೇಸಾಯದಲ್ಲಿ ಶ್ರೀ ®Ú¥Úª~’, ನಂತರ ಆರ್ಥಿಕ ಪ್ರಗತಿ ಮಾರ್ಗದರ್ಶಿ ತೋಟಗಾರಿಕಾ ·æ×æVÚ×Úß’ ವಿಚಾರವಾಗಿ ಗೋಷ್ಠಿ ನಡೆಯುವುದು. ಸಂಜೆ 4 ಗಂಟೆಗೆ ಲಾಭದಾಯಕ ಕೃಷಿಯಲ್ಲಿ ತಂತ್ರಜ್ಞಾನ ಮತ್ತು ಮಾರುಕಟ್ಟೆಯ ಪಾತ್ರ ವಿಚಾರವಾಗಿ ಗೋಷ್ಠಿ ನಡೆಯಲಿದೆ. -17ರಂದು ಸಂಜೆ ಕುಮಾರ್ ಪರ್ಫಾಮಿಂಗ್ ಆರ್ಟ್ಸ್ ಅವರಿಂದ ಭರತನಾಟ್ಯ, 18 ರಂದು ವಿವಿಧ ಸ್ವಸಹಾಯ ಸಂಘಗಳ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ, ಪಂಡಿತ್ ಹುಮಾಯೂನ್ ಹರ್ಲಾಪುರ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯುವುದು. ಯಕ್ಷಾನುಗ್ರಹ ಸಂಸ್ಕೃತಿ ಸಂವರ್ಧನಾ ಸಭಾದಿಂದ ಯಕ್ಷಗಾನ ಪ್ರದರ್ಶನವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

