'ಬಗರ್ಹುಕುಂ' ಸಮಸ್ಯೆ ಬಗೆಹರಿಸಿ
ಸೊರಬ: ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಯನ್ನು ತಕ್ಷಣ ಬಗೆಹರಿಸಿಕೊಡಬೇಕು ಎಂದು ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯವರು ಮಂಗಳವಾರ ಇಲ್ಲಿನ ಬಸ್ಸು ನಿಲ್ದಾಣ ಆವರಣದಲ್ಲಿ ತಾಲೂಕು ಬಗರ್ ಹುಕುಂ ಸಾಗುವಳಿದಾರರ ಸಭೆ ನಡೆಸಿ, ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
1980ರ ಅರಣ್ಯ ಸಂರಕ್ಷಣೆ ಕಾಯ್ದೆಯಂತೆ 1978ರ ಪೂರ್ವದಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡಿರುವವರಿಗೆ 3 ಎಕರೆ ಮಂಜೂರು ಮಾಡಿಕೊಡಬೇಕು ಎಂಬ ಆದೇಶವಿದೆ. ತಾಲೂಕಿನಲ್ಲಿ ಸಾವಿರಾರು ರೈತರು 1978ಕ್ಕೂ ಮೊದಲು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿದ್ದರೂ, ಇದುವರೆಗೆ ಯಾರಿಗೂ ಜಮೀನು ಮಂಜೂರು ಮಾಡಿಲ್ಲ ಎಂದು ದೂರಲಾಯಿತು.
ಕಚೇರಿ ಬಿಟ್ಟು ಕದಲಲಿಲ್ಲ: ಅರಣ್ಯ ಇಲಾಖೆಯವರು ಕೆಲವರನ್ನು ಈ ಪಟ್ಟಿಯಲ್ಲಿ ಸೇರಿಸಿದ್ದರು. ಆದರೆ ಆ ಪಟ್ಟಿ ಕಳೆದ 10-15 ವರ್ಷಗಳಿಂದಲೂ ಕಚೇರಿ ಬಿಟ್ಟು ಕದಲಲಿಲ್ಲ. ಈಗ ಇವುಗಳನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಿ ಮಂಜೂರು ಮಾಡಿಸಬೇಕು. ಬಿಟ್ಟು ಹೋದವರ ಹೆಸರನ್ನು ಸೇರಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 31, ಡಿಸೆಂಬರ್ 2009 ರೊಳಗೆ ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೂಲಕ ತಿಳಿಸಿದರೂ, ಎಚ್ಚೆತ್ತುಕೊಳ್ಳದೇ 1.65 ಲಕ್ಷ ಅರ್ಜಿಗಳನ್ನು ಯಾವುದೇ ವಿಚಾರಣೆ ಮಾಡದೇ ವಜಾಗೊಳಿಸುವ ಮೂಲಕ ಬಗರ್ಹುಕುಂ ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯ ತೀ.ನಾ. ಶ್ರೀನಿವಾಸ್, ನಗರದ ಮಹಾದೇವಪ್ಪ, ಆರ್. ಭರತ್ ರಾಜ್, ರಂಗಸ್ವಾಮಿ, ಅರುಣ್, ಅಜಿತ್ ಹಾಗೂ ಬಗರ್ ಹುಕುಂ ಸಾಗುವಳಿದಾರರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

