ಶಿವಮೊಗ್ಗ

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ, ಸೊರಬ, ಜ.29
ಅಂಗನವಾಡಿ ಕೇಂದ್ರಗಳ ಖಾಸಗೀಕರಣದಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೀದಿಪಾಲಾಗುವ ಸಂಭವ ಇದೆ ಎಂದು ಅಂಗವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಾಂಕೇತಿಕವಾಗಿ ಒಂದು ದಿನದ ಮುಷ್ಕರವನ್ನು ಹಮ್ಮಿಕೊಂಡಿದ್ದರು.
ಬುಧವಾರ ಇಲ್ಲಿನ ಮುಖ್ಯರಸ್ತೆಯ ರಂಗನಾಥಸ್ವಾಮಿ ದೇವಾಲಯದಿಂದ ಮೆರವಣಿಗೆ ಮೂಲಕ ಹೊರಟ  ಅವರು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ ಪಿ.ಜಿ. ನಟರಾಜ್ ಇವರಿಗೆ ಮನವಿ ಸಲ್ಲಿಸಿದರು.
ಖಾಸಗೀಕರಣ ಕೈಬಿಡಿ: ಅಂಗವಾಡಿ ಕೇಂದ್ರಗಳ ಖಾಸಗೀಕರಣ ನೀತಿಯನ್ನು ಕೈಬಿಡಬೇಕು. ಕಾರ್ಯಕರ್ತೆಯರ ಕೆಲಸದ ಅವಧಿಯನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು. ಗೌರವ ವೇತನ ಕೈಬಿಟ್ಟು, ಕನಿಷ್ಠವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಬಾಕಿ ಗೌರವ ಧನವನ್ನು ಈ ಕೂಡಲೇ ನೀಡಬೇಕು. ಗ್ಯಾಸ್ ಸಿಲಿಂಡರನ್ನು ನೇರವಾಗಿ ಸರಬರಾಜು ಮಾಡಬೇಕು. ಸೇವಾ ಹಿರಿತನಕ್ಕೆ ಮಹತ್ವ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪರಿವರ್ತಿಸಬೇಕು. ನಿವೃತ್ತಿ ಪರಿಹಾರ ಧನ ಹೆಚ್ಚಿಸಿ, ಮಾಸಿಕ ಪಿಂಚಣಿ ಕೊಡಬೇಕು ಎಂದು ಆಗ್ರಹಿಸಿದರು.  
ಪ್ರತಿಭಟನಾ ಮೆರವಣಿಗೆ ಹಾಗೂ ಮನವಿ ನೀಡುವ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾ ಸಂಘದ ಅಧ್ಯಕ್ಷೆ ಕೆ.ಬಿ. ಸಾವಿತ್ರಮ್ಮ, ತಾಲೂಕು ಸಂಘದ ಅಧ್ಯಕ್ಷೆ ಸುಂದರಮ್ಮ, ಕಾರ್ಯದರ್ಶಿ ದೇವಮ್ಮ, ಪದಾಧಿಕಾರಿ, ಸದಸ್ಯರಾದ ಸಾವಿತ್ರಮ್ಮ, ಗಾಯತ್ರಿ, ಶಾಂತಾ, ಪ್ರಭಾವತಿ, ಚಂದ್ರಮ್ಮ, ಜಯಲಕ್ಷ್ಮಿ ರತ್ನಮ್ಮ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.