26 ರಂದು ತಾಲೂಕು ಸಾಹಿತ್ಯ ಸಮ್ಮೇಳನ
ಕ.ಪ್ರ.ವಾರ್ತೆ, ಶಿಕಾರಿಪುರ, ಜ.31
ಫೆ.26ರಂದು ಶಿಕಾರಿಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲು ಶುಕ್ರವಾರ ಸಂಜೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಸಂಸದ ರಾಘವೇಂದ್ರರ ನೇತೃತ್ವದಲ್ಲಿ ನಡೆದ ತಾಲೂಕಿನ ವಿವಿಧ ರಾಜಕೀಯ ಪಕ್ಷದ ಮುಖಂಡರು, ಸಾಹಿತ್ಯಾಭಿಮಾನಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ತಾಲೂಕು ಕಸಾಪ ಅಧ್ಯಕ್ಷ ಸುದರ್ಶನ ಶಿವರಂಜಿನಿ ಮಾತನಾಡಿ, ಇದುವರೆಗೂ 4 ತಾಲೂಕು ಕಸಾಪ ಸಮ್ಮೇಳನ ಯಶಸ್ವಿಯಾಗಿ ಆಚರಣೆಯಾಗಿದೆ. ಇದುವರೆಗಿನ ಎಲ್ಲಾ ಕಾರ್ಯಕ್ರಮದ ಯಶಸ್ಸಿಗೆ ತಾಲೂಕಿನ ಸಮಸ್ತ ಕನ್ನಡಾಭಿಮಾನಿಗಳು, ಉದ್ಯಮಿಗಳು, ಅಧಿಕಾರಿಗಳು ಪೂರಕವಾಗಿ ಸಹಕರಿಸಿದ್ದಾರೆ ಎಂದರು.
ಈ ಬಾರಿಯ ಸಮ್ಮೇಳನದ ಅಧ್ಯಕ್ಷತೆಗೆ ತಾಲೂಕಿನಲ್ಲಿ ಸಾಹಿತ್ಯಕವಾಗಿ ಹೆಚ್ಚು ಕೃಷಿ ಮಾಡಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವವರ ಆಯ್ಕೆಗೆ ಮಹತ್ವ ನೀಡಬೇಕಾಗಿದೆ. ಈ ದಿಸೆಯಲ್ಲಿ ಕಳೆದ ಬಾರಿ ಹಿತ್ತಲ ಗ್ರಾಮದ ಡಾ.ಮಹೇಶ್ವರಯ್ಯ ಅವರನ್ನು ಜಿಲ್ಲಾ ಸಮಿತಿ ಶಿಫಾರ್ಸು ಮಾಡಿ ನಂತರದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಹಿನ್ನೆಲೆಯಲ್ಲಿ ಈಸೂರಿನ ಉಷಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ಡಾ.ಮಹೇಶ್ವರಯ್ಯ ಅವರ ಆಯ್ಕೆ ಹೆಚ್ಚು ಸಮಂಜಸವಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸದ ರಾಘವೇಂದ್ರ ಮಾತನಾಡಿ, ಈಗಾಗಲೇ ನಿರ್ಧರಿಸಿರುವ ರೀತಿಯಲ್ಲಿ ಮಹೇಶ್ವರಯ್ಯ ಅವರ ಆಯ್ಕೆಗೆ ಸಹಮತ ವ್ಯಕ್ತಪಡಿಸಿ, ಜಿಲ್ಲಾ ಸಮಿತಿಗೆ ಶಿಫಾರ್ಸಿಗೆ ಕಳುಹಿಸಲು ಸೂಚಿಸಿದರು.
ತಾಲೂಕು ಸಮ್ಮೇಳನಕ್ಕೆ ಹಾಲಿ ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸರ್ಕಾರದಿಂದ 1 ಲಕ್ಷ ಅನುದಾನ ಬಿಡುಗಡೆಗೆ ಕ್ರಮ ಕೈಗೊಂಡಿದ್ದು ಹೆಚ್ಚಿನ ಹಣವನ್ನು ಸ್ಥಳೀಯ ದಾನಿಗಳು, ಉದ್ಯಮಿಗಳು, ಅಧಿಕಾರಿಗಳ ಸಹಕಾರದಿಂದ ಅತ್ಯುತ್ತಮ ಸಮ್ಮೇಳನ ಆಯೋಜಿಸಲು ಪೂರಕವಾಗಿ ಸಹಕರಿಸುವುದಾಗಿ ಭರವಸೆ ನೀಡಿದರು.
ಕಾಡಾ ಮಾಜಿ ಅಧ್ಯಕ್ಷ ಕೆ.ಶೇಖರಪ್ಪ, ತಹಸೀಲ್ದಾರ್ ಧರ್ಮೋಜಿರಾವ್ ಮಾತನಾಡಿ, ಉಪನ್ಯಾಸಕ ಸಕಲೇಶ್ ಹುಲ್ಮಾರ್ಜಿ.ಪಂ ಉಪಕಾರ್ಯದರ್ಶಿ ಗೋಪಾಲ್, ತಾ.ಪಂ ಇಒ ಡಾ.ಚಂದ್ರಶೇಖರ್, ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ, ಪುರಸಭಾ ಸದಸ್ಯ ಪಾಲಾಕ್ಷಪ್ಪ, ಸಾಧಿಕ್, ಎಪಿಎಂಸಿ ಸದಸ್ಯ ಅರುಣ್, ಹಿರಿಯ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

