ಶಿವಮೊಗ್ಗ

ಪಹಣಿಯಲ್ಲಿ ಜಮೀನು ಅರಣ್ಯವಾಯ್ತು!

Published On :

ಹೊಸನಗರ: ಪಟ್ಟಣ ಸಮೀಪದ ಗಂಗನಕೊಪ್ಪ ಗ್ರಾಮದ ಜಮೀನಿನ ಪಹಣಿಯಲ್ಲಿ ಅರಣ್ಯ ಎಂದು ದಾಖಲಾಗಿದ್ದು ಮನೆ ಜಾಗ ಮಂಜೂರು ಮಾಡಲು ಕಷ್ಟಸಾಧ್ಯವಾಗಿದ್ದು, ಪಹಣಿಯಲ್ಲಿ ಅರಣ್ಯ ಎಂದು ದಾಖಲಾಗಿರುವುದನ್ನು  ಸರಿಪಡಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ವಿಪುಲ್ ಬನ್ಸಾನ್ ಅವರಿಗೆ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ತಾಲೂಕು ಕಚೇರಿ ಭೇಟಿ ಸಂದರ್ಭದಲ್ಲಿ ಭೇಟಿ ಮಾಡಿದ ಗಂಗನಕೊಪ್ಪ ಗ್ರಾಮಸ್ತರ ನಿಯೋಗ ಗಂಗನಕೊಪ್ಪ ಗ್ರಾಮದ ಸ.ನಂ 13, ಮಾವಿನಕೊಪ್ಪ ಗ್ರಾಮದ ಸನಂ 15 ಮತ್ತು 19ರ ಜಮೀನು ಜಾಗದಲ್ಲಿ ಅರಣ್ಯ ಎಂದು ದಾಖಲಾಗಿದೆ. ಈ ಪ್ರದೇಶದಲ್ಲಿ ಯಾವುದೆ ಮರಗಿಡಗಳು ಇರುವುದಿಲ್ಲ. ಪೂರ್ತಿಯಾಗಿ ವಾಸದ ಮನೆಗಳಿದ್ದು, ಹೊಸನಗರ ಪಟ್ಟಣ ವ್ಯಾಪ್ತಿಗೆ ಸೇರಿಕೊಂಡಿದೆ. ಅರಣ್ಯ ಎಂದು ದಾಖಲಾಗಿರುವುದರಿಂದ ಮನೆ ಮಂಜೂರು ಮಾಡಿಕೊಳ್ಳುವಲ್ಲಿ ತೊಡಕುಂಟಾಗಿದ್ದು ಬಡರೈತ, ಕೂಲಿಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ. ಈ ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಮುಂದಿನ ಕ್ರಮದ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೃಂದಾವನ ಪ್ರವೀಣ್, ರಾಘವೇಂದ್ರ, ನರಸಿಂಹ, ಶ್ರೀಧರ್ ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.