ಶಿವಮೊಗ್ಗ

ಗಿಡ ನೆಟ್ಟು ಮಕ್ಕಳಂತೆ ಪೋಷಿಸಿ: ನ್ಯಾ.ಸಮೀವುಲ್ಲಾ

Published On :

ಹೊಸನಗರ: ಗಿಡಮರಗಳ ನಾಶದಿಂದಾಗಿ ಮರಳುಗಾಡಾಗುವ ಭೀತಿ ಒಂದೆಡೆಯಾದರೆ, ನಿಗದಿತ ಪ್ರಮಾಣದಲ್ಲಿ ಮಳೆಯಾಗದೇ ಅಂತರ್ಜಲ ಬತ್ತಿ ಹೋಗಿ ಕುಡಿಯಲು ನೀರೂ ಸಹ ಸಿಗದಂತಹ ದುಸ್ಥಿತಿ ಇಂದಿನ ದುರಂತ. ಹಾಗಾಗಿ ಉತ್ತಮ ಪರಿಸರಕ್ಕಾಗಿ, ಭವಿಷ್ಯದ ಪೀಳಿಗೆಗಾಗಿ ಗಿಡ, ನೆಟ್ಟು ತಮ್ಮ ಮಕ್ಕಳಂತೆ ಬೆಳೆಸಿ ಉಳಿಸಿ ಪೋಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರೀಕನದ್ದಾಗಿದೆ ಎಂದು ಹೊಸನಗರ ಜೆಎಂಎಫ್‌ಸಿ ನ್ಯಾಯಾಧೀಶ ಸಮೀವುಲ್ಲಾ ಹೇಳಿದರು.
ಪೊಲೀಸ್ ಇಲಾಖೆ, ಕಾನೂನು ಸಾಕ್ಷರತಾ ಸಮಿತಿ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಸಂಯುಕ್ತವಾಗಿ ಆಯೋಜಿಸಿದ್ದ ವನ ಮಹೋತ್ಸವ ಸಪ್ತಾಹ ಅಂಗವಾಗಿ ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
ಇನ್ನೋರ್ವ ನ್ಯಾಯಾಧಿಛಶ ಯೋಗೀಶ್ ಮಾತನಾಡಿ, ಆದಷ್ಟು ಫಲ ನೀಡುವ ಗಿಡಗಳನ್ನು ನೆಡುವುದರಿಂದ ಪ್ರಾಣಿ ಪಕ್ಷಿಗಳಿಗೆ ಆಸರೆ ಕಲ್ಪಿಸಿದ ಪುಣ್ಯ ನಮಗೆ ಲಭಿಸುತ್ತದೆ. ಮಕ್ಕಳಲ್ಲಿ ಗಿಡಮರಗಳಿಂದಾಗುವ ಪ್ರಯೋಜನ, ಪರಿಸರ ಮೇಲಾಗುವ ಪ್ರಭಾವ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಐ ಮಂಜುನಾಥ್, ಎಎಸ್‌ಐ ಸಣ್ಣಯ್ಯ, ಕೋರ್ಟ್ ಶಿರಸ್ತೆದಾರ್ ಬಾಲಚಂದ್ರ ಭಟ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.