ಶಿವಮೊಗ್ಗ

ಲಯನ್ಸ್ ಕ್ಲಬ್ ಷುಗರ್ ಟೌನ್‌ಗೆ ಹಲವು ಪ್ರಶಸ್ತಿ

Published On :

ಭದ್ರಾವತಿ: ಲಯನ್ಸ್ ಕ್ಲಬ್ ಷುಗರ್ ಟೌನ್ ಉತ್ತಮ ಸೇವಾ ಚಟುವಟಿಕೆಗಾಗಿ ಅನೇಕ ಪ್ರಶಸ್ತಿ ಪಡೆದುಕೊಂಡಿದೆ ಎಂದು ಜಿಲ್ಲಾ ಗವರ್ನರ್ ದಿವಾಕರಶೆಟ್ಟಿ ತಿಳಿಸಿದರು.
ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸುವ ಮುನ್ನ ಮಾತನಾಡಿದ ಅವರು ಲಯನ್ಸ್ ಕ್ಲಬ್ ಷುಗರ್ ಟೌನ್ ಉತ್ತಮ ಸೇವಾ ಕಾರ್ಯಗಳಾದ ನೇತ್ರ ಚಿಕಿತ್ಸಾ ನಿರ್ವಹಣೆಗೆ ದ್ವಿತೀಯ ಸ್ಥಾನ, ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ, ಶ್ರವಣದೋಷ ಚಿಕಿತ್ಸಾ ನಿರ್ವಹಣೆಯಲ್ಲಿ ತೃತೀಯ ಸ್ಥಾನ ಗಳಿಸಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ. ಪಿ.ಸೆಲ್ವರಾಜ್ ಕ್ಲಬ್ ಸೇವಾಕಾರ್ಯ ಹಮ್ಮಿಕೊಳ್ಳಲು  ಸದಸ್ಯರು ಮತ್ತು ಸಾರ್ವಜನಿಕರ ಸಹಕಾರವೇ ಕಾರಣವೆಂದರು. ಲಯನ್ಸ್ ಕಣ್ಣಾಸ್ಪತ್ರೆಯಲ್ಲಿ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ವಾರದಲ್ಲಿ ಮೂರು ದಿನ ಹೊರರೋಗಿಗಳ ಚಿಕಿತ್ಸಾ ಘಟಕ ಕಾರ್ಯನಿರ್ವಹಿಸುವುದು ಎಂದರು.
ಅಧ್ಯಕ್ಷ ಸಿ.ಅಶೋಕ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನೂತನ ಕಾರ್ಯದರ್ಶಿಯಾಗಿ ಡಾ. ಸಿ.ಆರ್.ಗುರುರಾಜ್, ಖಜಾಂಚಿಯಾಗಿ ನಾರಾಯಣಮೂರ್ತಿ, ಲಯನೆಸ್ ಕ್ಲಬ್ ಅಧ್ಯಕ್ಷರಾಗಿ ಸಂಧ್ಯಾ ಸೆಲ್ವರಾಜ್, ಕಾರ್ಯದರ್ಶಿಯಾಗಿ ಡಾ. ಶೋಭ ಗುರುರಾಜ್ ಹಾಗೂ ಕಾರ್ಯದರ್ಶಿಯಾಗಿ ರಾಧಾ ಎಚ್.ಎನ್.ಪೈ ಪ್ರಮಾಣವಚನ ಸ್ವೀಕರಿಸಿದರು. ಪೂರ್ವಾಧ್ಯಕ್ಷ ಡಾ. ಟಿ.ನರೇಂದ್ರ ಭಟ್ ಸ್ವಾಗತಿಸಿದರು. ಡಾ.ವೃಂದಾ ನಿರೂಪಿಸಿದರು. ನಾರಾಯಣಮೂರ್ತಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.