ರಾಜ್ಯ ಸರ್ಕಾರಕ್ಕೆ ಜಡ: ಈಶ್ವರಪ್ಪ
ಶಿವಮೊಗ್ಗ: ಸರ್ಕಾರಕ್ಕೆ ಒಂದು ರೀತಿಯ ಜಡತ್ವ ಆವರಿಸಿದೆ. ಕೆಲಸ ಮಾಡಿದರಾಯಿತು, ಬಿಟ್ಟರಾಯಿತು ಎಂಬ ಭಾವನೆ ಇದೆ. ಗೋವಾ ಹಾಗೂ ಬೆಳಗಾವಿಯ ಘಟನೆಗಳು ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಸಿದ್ದರಾಮಯ್ಯ ಸರ್ಕಾರಕ್ಕೆ ಚಾಟಿ ಬೀಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಹಾಗೂ ಗೋವಾದಲ್ಲಿ ಕನ್ನಡಿಗರ ರಕ್ಷಣೆಗೆ ಧಾವಿಸುವಂತೆ ಹಾಗೂ ಶಾಂತಿ ನೆಮ್ಮದಿಯಿಂದಿರಲು ಅಗತ್ಯ ಕ್ರಮಕೈಗೊಳ್ಳುವಂತೆ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದರು.
ಬೆಳಗಾವಿಯಲ್ಲಿ ಕೆಲವು ಗೂಂಡಾಗಳು ಕನ್ನಡ ವಿರೋಧಿ ಕೃತ್ಯ ಮಾಡುತ್ತಿದ್ದಾರೆ. ಅಲ್ಲಿಯ ಕನ್ನಡದ ನಾಮಫಲಕ ತೆಗೆದು ತೆಗೆದು, ಮರಾಠಿ ನಾಮಫಲಕ ಹಾಕಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಶಾಂತಿಯಿಂದ ಹಾಗೂ ವಿಶ್ವಾಸದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಶಾಂತಿಭಂಗಕ್ಕೆ ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಮಹಾರಾಷ್ಟ್ರ- ಕರ್ನಾಟಕ ರಾಜ್ಯದವರಿಗೆ ಅಣ್ಣ ತಮ್ಮಂದಿರಂತೆ ಬಾಳಲು ಎರಡೂ ಕಡೆಯೂ ಅಪೇಕ್ಷೆ ಇದ್ದರೂ ಕೆಲವು ಸಂದರ್ಭದಲ್ಲಿ ನಡೆದಿರುವ ದುಷ್ಕೃತ್ಯಗಳು ಅಹಿಂಸೆಗೆ ತಿರುಗುತ್ತಿದೆ. ಸರ್ಕಾರ ಇದನ್ನು ನಿಯಂತ್ರಿಸಲು ಅಗತ್ಯಕ್ರಮ ಕೈಗೊಳ್ಳಬೇಕೆಂದ ಅವರು, ಗೋವಾ ಹಾಗೂ ಬೆಳಗಾವಿ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದು ಇಷ್ಟೆಲ್ಲಕ್ಕೂ ಕಾರಣ ಎಂದು ಟೀಕಿಸಿದರು.
ವಿಧಾನ ಪರಿಷತ್ನಲ್ಲಿ ಗೋವಾ ಪ್ರಕರಣ ಪ್ರಸ್ತಾಪ ಮಾಡಿದ್ದು, ಸರ್ಕಾರ ಸಚಿವ ದೇಶಪಾಂಡೆಯವರನ್ನು ಗೋವಾಕ್ಕೆ ಕಳುಹಿಸಿ ಉತ್ತರ ಕೊಡಿಸಿದ್ದಾರೆ. ಬೆಳಗಾವಿ ಬಗ್ಗೆಯೂ ನಾವು ಗಮನ ಹರಿಸಿದ್ದೇವೆ. ಬೆಳಗಾವಿಯಲ್ಲಿರುವ ಕನ್ನಡಿಗರು ಮತ್ತು ಮರಾಠಿಗರು ಶಾಂತಿ, ನೆಮ್ಮದಿಯಿಂದ ಇರಲು ಅಗತ್ಯಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಸಿಬಿಐ ತನಿಖೆಯಾಗಲಿ: ಅರ್ಕಾವತಿ ಬಡಾವಣೆ ವಿಚಾರದಲ್ಲಿ ನಮ್ಮ ಸರ್ಕಾರವಿದ್ದಾಗ ತಪ್ಪು ಮಾಡಿದ್ದರೆ ನಮಗೆ ಶಿಕ್ಷೆಯಾಗಲಿ, ಸಿಬಿಐಗೆ ವಹಿಸಲಿ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸವಾಲೆಸೆದಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅರ್ಕಾವತಿ ಬಡಾವಣೆ ಬಗ್ಗೆ ಮುಖ್ಯಮಂತ್ರಿಯವರು ಸಿಬಿಐ ತನಿಖೆ ಮಾಡಿಸುತ್ತೇವೆ ಎಂದು ವೀರಾವೇಶದಲ್ಲಿ ಹೇಳಿದರು. ಇದ್ದಕ್ಕಿದ್ದಂತೆ ಈಗ ಸಿಬಿಐಗೆ ಹಾಕಲ್ಲ, ನ್ಯಾಯಾಂಗ, ಸದನ ಸಮಿತಿ, ಸಿಓಡಿ ಮಾಡಲು ತಯಾರು ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರು ಹಣದ ಅವ್ಯವಹಾರದಲ್ಲಿ ಭಾಗವಹಿಸಿದ್ದಾರೆ ಎಂಬ ಭಾವನೆ ಬರುತ್ತಿದೆ. ಅವರಿಗೆ ಅಧಿಕಾರ ಇರುವ ಸಂದರ್ಭದಲ್ಲಿ ಸಿಬಿಐ ತನಿಖೆಗೆ ಮಾಡಿಸಲಿ, ನ್ಯಾಯ ಸಿಗುವ ದಿಕ್ಕಿನಲ್ಲಿ ಪ್ರಯತ್ನಿಸಲಿ ಎಂದು ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

