ಕ್ಷೇತ್ರ ವಿಂಗಡಣೆಯಿಂದ ಹೊಸನಗರ ಭಾಗಕ್ಕೆಮರ್ಮಾಘಾತ
ಹೊಸನಗರ: ತಾಲೂಕಿನ ಅಭಿವೃದ್ಧಿ ಕುಂಠಿತವಾಗಲು ವಿಧಾನಸಭಾ ಕ್ಷೇತ್ರ ಮರುವಿಂಗಡಣೆಯಲ್ಲಿ ಹೊಸನಗರ ಕ್ಷೇತ್ರವನ್ನು ತೆಗೆದು ತಾಲೂಕನ್ನು ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳಿಗೆ ವಿಲೀನ ಮಾಡಿರುವುದು ಪ್ರಮುಖ ಕಾರಣ ಎಂದು ತೃತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಪಿ.ಶಾಂತಾರಾಮ ಪ್ರಭು ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು.
ತಾಲೂಕಿನ ಭಾಗಗಳು ಎರಡು ಕ್ಷೇತ್ರಗಳಲ್ಲಿ ಹಂಚಿ ಹೋಗಿರುವುದು ತಾಲೂಕಿನ ಸಮಗ್ರತೆಗೆ ಧಕ್ಕೆ ತಂದಿದೆ. ವಿಧಾನಸಭೆಯಲ್ಲಿ ಹೊಸನಗರದ ಹೆಸರು ಪ್ರಸ್ತಾಪವಾಗುವ ಸಂದರ್ಭವೇ ಕಡಿಮೆಯಾಗಲಿದೆ. ತಾಲೂಕಿನ ಹೆಸರಿನಲ್ಲೇ ಕ್ಷೇತ್ರವಿದ್ದರೆ ಸಹಜವಾಗಿಯೇ ರಾಜ್ಯಮಟ್ಟದಲ್ಲಿ ಹೊಸನಗರ ಪರಿಚಿತವಾಗುವುದು ಎಂದು ನುಡಿದರು. ನಾಡಿನ ಪ್ರಾಕೃತಿಕ ಸೌಂದರ್ಯಕ್ಕೆ ಇಲ್ಲಿನ ಕೆರೆಗಳು ಒಂದು ಮೆರುಗು ನೀಡಿದ್ದವು. ಇಲ್ಲಿ ಅನೇಕ ಊರುಗಳಿಗೆ ಆ ಊರಿನ ಕೆರೆಗಳ ಹೆಸರಿರುವುದನ್ನು ಗಮನಿಸಬಹುದು. ಈಗ ಪ್ರಾಕೃತಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಕೆರೆಗಳು ಮರೆಯಾಗುತ್ತಿರುವುದು ಆತಂಕಕಾರಿ. ಕೆರೆಗಳ ಉಳಿವಿಗೆ ಎಲ್ಲರೂ ಪಣತೊಡಬೇಕು ಎಂದು ಕರೆ ನೀಡಿದರು. ನಮ್ಮ ಭಾಷೆ, ಸಂಸ್ಕೃತಿ ಜನಪದಕ್ಕೆ ಪಾಶ್ಚಾತ್ಯ ಮೋಹದಿಂದ ಭಾರೀ ಧಕ್ಕೆಯುಂಟಾಗುತ್ತಿದೆ. ಇದನ್ನು ತಡೆಯುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಎಂದು ತಿಳಿಸಿದರು.
ಆಮೂಲಾಗ್ರ ಬದಲಾವಣೆ: ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ಉಳಿವಿಗಾಗಿ ಆಮೂಲಾಗ್ರ ಬದಲಾವಣೆಯಾಗಬೇಕು ಎಂದು ಪ್ರತಿಪಾದಿಸಿದ ಅವರು ಶಾಲಾ ಕಾಲೇಜುಗಳಲ್ಲಿ ರಂಗಕಲೆ ಮತತ್ತು ಜನಪದಕ್ಕೆ ಆದ್ಯತೆ ನೀಡಬೇಕು. ಪಠ್ಯಪುಸ್ತಕಗಳಲ್ಲೇ ಇರುವ ಅಶುದ್ಧ ಪದಪ್ರಯೋಗಗಳಿಗೆ ಕಡಿವಾಣ ಹಾಕಬೇಕು. ಉನ್ನತ ವಿದ್ಯಾಭ್ಯಾಸಕ್ಕೆ ಶೇಕಡಾವಾರು ಅಂಕಗಳನ್ನು ಪರಿಗಣಿಸುವಾಗ ಕನ್ನಡ ವಿಷಯವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಪತ್ರಿಕೆಗಳಲ್ಲಿ ವಿಕೃತ ತಲೆಬರಹ ಪ್ರಕಟಿಸುವುದು ಕೆಟ್ಟ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಪತ್ರಕರ್ತರು ಬೆರಳಚ್ಚುಗಾರರು ಭಾಷೆಯ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಬೇಕು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

