ಶಿವಮೊಗ್ಗ

ಜೀವನ ಪ್ರೀತಿಯಿಂದ ಬದುಕು ಹಸನು

Published On :

ಹೊಸನಗರ: ಬದುಕು ಹಸನಾಗಲು ಜೀವನ ಪ್ರೀತಿ ಅತ್ಯವಶ್ಯ. ಜೀವನ ಮೌಲ್ಯಗಳು ವ್ಯಕ್ತಿಯ ಬದುಕನ್ನು ಸಂಪೂರ್ಣಗೊಳಿಸುತ್ತದೆ ಎಂದು ಹಿರಿಯ ಸಾಹಿತಿ, ಮಲೆನಾಡ ಕವಿ ನಾ.ಡಿಸೋಜ ಹೇಳಿದರು.
ಇಲ್ಲಿನ ವಿದ್ಯಾಸಂಘ ರಂಗಮಂದಿರದಲ್ಲಿ ನಡೆದ ಹೊಸನಗರ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಮಾತನಾಡಿದ ಅವರು,
ಕನ್ನಡ ಮತ್ತು ಕನ್ನಡ ಸಾಹಿತ್ಯವನ್ನು ಕನ್ನಡಿಗರಾದ ನಾವು ಮೊದಲು ಗೌರವಿಸಬೇಕು. ಆಗ ಅನ್ಯ ವ್ಯಕ್ತಿಗಳು ಕೂಡಾ ಕನ್ನಡವನ್ನು ಗೌರವಿಸುತ್ತಾರೆ. ನಾಡು, ನುಡಿ, ಗಡಿ ವಿಚಾರದಲ್ಲಿ ಸಾಂಘಿಕ ಶಕ್ತಿ ಪ್ರದರ್ಶನ ಅವಶ್ಯವಾಗಿದ್ದು, ಕನ್ನಡಿಗರು ಎಂದಿಗೂ ಆತ್ಮಗೌರವ, ಅಭಿಮಾನ ಬಿಟ್ಟು ವ್ಯವಹರಿಸುವ ದುಷ್ಕೃತ್ಯಕ್ಕೆ ಕೈಹಾಕಬಾರದು ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ನಾಡು, ನುಡಿ, ರಕ್ಷಣೆಯಲ್ಲಿ ಮತ್ತು ನಾಡನ್ನು ಒಂದು ಗೂಡಿಸುವಲ್ಲಿ ಕನ್ನಡಿಗರು ಯಾವತ್ತೂ ಮುಂದಿದ್ದಾರೆ. ನಮ್ಮ ತಾಳ್ಮೆ, ಸಹನೆ ಅಸಹಾಯಕತೆಯಲ್ಲ. ವಿರೋಧಿಗಳು ಮೊದಲು ಇದನ್ನರಿಯಬೇಕು ಎಂದರು.
ಸಮ್ಮಾನ: ಇದೇ ವೇಳೆ ತಾಲೂಕಿನ ಪ್ರತಿಭಾವಂತ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ರಂಗಕರ್ಮಿ ಪತ್ತೇಪೇಟೆ ವಿ. ಶಾಂತರಾಮ್, ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆದ ಶೃತಿ, ಚಲನಚಿತ್ರ ನಟ ಚನ್ನಬಸಪ್ಪಗೌಡ, ನೆಲ್ಲುಂಡೆ ಲಲಿತಾ, ಲೀಲಾವತಿ, ಶ್ರೀಧರ್‌ರಾವ್, ಭೋಜಪ್ಪ ಮತ್ತಿತರರನ್ನು ಸಮ್ಮಾನಿಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷ ಕೆಸವಿನಮನೆ ರತ್ನಾಕರ್, ಸಮ್ಮೇಳನ ಸರ್ವಾಧ್ಯಕ್ಷ ಡಾ.ಶಾಂತರಾಮಪ್ರಭು, ಹೋಬಳಿ ಘಟಕ ಅಧ್ಯಕ್ಷ ಮಂಜುನಾಥಕಾಮತ್ ಇತರರು ಉಪಸ್ಥಿತರಿದ್ದರು. ಅಶೋಕ ಗುಳೇದ ನಿರೂಪಿಸಿದರು. ಹನಿಯರವಿ ಸ್ವಾಗತಿಸಿದರು.
ಕವಿಗೋಷ್ಠಿ: ಸಮಾರೋಪಕ್ಕೂ ಮೊದಲು ತಾಲೂಕಿನ ಪ್ರತಿಭಾವಂತ ಕವಿಗಳ ಕವಿಗೋಷ್ಠಿ ಸಭಿಕರ ಗಮನ ಸೆಳೆಯಿತು. ಕವಿ ಗಣೇಶಮೂರ್ತಿ ನಾಗರಕೊಡಿಗೆ  ಅಧ್ಯಕ್ಷತೆ ವಹಿಸಿದ್ದರು. ಅ.ಕ.ಪಾಟೀಲ ಕವಿ ಗೋಷ್ಠಿ ಉದ್ಘಾಟಿಸಿದರು. ಡಾ.ಅಂಜಲಿ, ನಾರವಿ ಹೊಸನಗರ, ರಚನಾಕಾಮತ್, ಮಂಜುನಾಥಕಾಮತ್, ಸಂತೋಷಕುಮಾರ್, ಗೀತಾಚಂದ್ರಶೇಖರ್, ನಾಗರಾಜ್ ಇತರರು ಕವನ ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.