ಶಿವಮೊಗ್ಗ

ಬದುಕಿಗೆ ಮಾರ್ಗದರ್ಶಕರು ಅಗತ್ಯ

Published On :

'ಸ್ವಾಭಿಮಾನಿ ಸ್ವಾತಂತ್ರ್ಯ ಹೋರಾಟಗಾರ ಹಾಲಪ್ಪ ಗೌಡರು' ಕೃತಿ ಬಿಡುಗಡೆ


ಸಾಗರ:  ಸಮಾಜಕ್ಕೆ ಮಾರ್ಗದರ್ಶನವಾಗಿ ಬದುಕಿದವರನ್ನು ನಾವು ಆದರ್ಶವಾಗಿರಿಸಿಕೊಂಡರೆ ನಮ್ಮ ಬದುಕಿನ ದಿಕ್ಕು ಸಹ ಸನ್ಮಾರ್ಗದತ್ತ ಸಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ತಾಲೂಕಿನ ಆವಿನಹಳ್ಳಿಯಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಕೆ. ಹಾಲಪ್ಪ ಗೌಡರ ನೆನಪು ಕಾರ್ಯಕ್ರಮದಲ್ಲಿ ಪತ್ರಕರ್ತ ಜಿ.ನಾಗೇಶ್ ಬರೆದಿರುವ 'ಸ್ವಾಭಿಮಾನಿ ಸ್ವಾತಂತ್ರ್ಯ ಹೋರಾಟಗಾರ ಹಾಲಪ್ಪ ಗೌಡರು' ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹೊತ್ತಿನಲ್ಲಿ ಸ್ವಾತಂತ್ರ್ಯ ಚಳವಳಿ, ಸಹಕಾರ, ರಾಜಕೀಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ ಹಾಲಪ್ಪ ಗೌಡರ ಹೆಜ್ಜೆಗುರುತು ದಾಖಲಿಸುವ ಪ್ರಯತ್ನ ಶ್ಲಾಘನೀಯ ಎಂದರು.
ಮಾರ್ಗದರ್ಶನವಾಗಲಿ: ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಮಾತನಾಡಿ, ಹಾಲಪ್ಪ ಗೌಡರು ತಮ್ಮ ಜೀವಿತಾವಧಿಯಲ್ಲಿ ಈ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾಗಿದ್ದು, ಅದನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ ಎಂದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಮಾತನಾಡಿ, ಸಾಗರ ಪ್ರಾಂತ್ಯದಲ್ಲಿ ರೈತ ಚಳವಳಿ ಕಟ್ಟುವಲ್ಲಿ ಎಚ್.ಎಲ್.ವೀರಭದ್ರಪ್ಪ ಗೌಡರು, ಗಾಡಿ ಗಣಪತಿಯಪ್ಪ, ಹಾಲಪ್ಪ ಗೌಡರು ಸೇರಿದಂತೆ ಅನೇಕ ಹಿರಿಯರ ಕೊಡುಗೆ ಅಪಾರ. ಅವರ ಹೋರಾಟದ ಮಜಲುಗಳು ನೇಪಥ್ಯಕ್ಕೆ ಸರಿಯಬಾರದು. ಇಂತಹ ಪುಸ್ತಕಗಳ ರೂಪದಲ್ಲಿ ಹೋರಾಟ ದಾಖಲಾದರೆ, ಅದು ಮುಂದಿನ ಹೋರಾಟಕ್ಕೆ ದಿಕ್ಸೂಚಿದೆ ಎಂದರು.
ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುಸ್ತಕ ಕುರಿತು ಡಾ. ಕೆ. ಪ್ರಭಾಕರ ರಾವ್ ಮಾತನಾಡಿದರು. ಪರಿಷತ್ ಅಧ್ಯಕ್ಷ ವಿ.ಟಿ. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಶ್ಯಾಮಲ ದೇವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಈಳಿ ನಾರಾಯಣಪ್ಪ, ರಾಮಚಂದ್ರಪ್ಪ ಕುರುವರಿ, ರಾಜೀವ ಶೆಟ್ರು ಇದ್ದರು. ರಾಜೇಂದ್ರ ಆವಿನಹಳ್ಳಿ ಸ್ವಾಗತಿಸಿದರು. ಲೇಖಕ ಜಿ. ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ್ ಹಿರೇನೆಲ್ಲೂರು ವಂದಿಸಿದರು. ಎಚ್.ಜಿ. ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.