ಶಿವಮೊಗ್ಗ

ಅರಣ್ಯ ಹಕ್ಕು ಕಾನೂನು ಬಳಕೆಯಾಗಲಿ

Published On :

ಜೋಗ್‌ಫಾಲ್ಸ್: ಸಾಗರ ತಾಲೂಕಿನ ಜನತೆ ಅರಣ್ಯ ಹಕ್ಕು ಕುರಿತು ಇರುವ ಕಾನೂನನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.
ಅವರು ತಾಳಗುಪ್ಪದ ರಂಗನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅರಣ್ಯ ಹಕ್ಕು ಸಮಿತಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾನೂನು ಸಮರ್ಪಕವಾಗಿರಬೇಕು. ಆದರೆ ಈ ಭೂಮಿ ಹಂಚಿಕೆಯ ವಿಷಯದಲ್ಲಿ ಅಷ್ಟೊಂದು ಪರಿಪೂರ್ಣವಾಗಿರಲು, ದಾಖಲೆಗಳನ್ನು ಹೊಂದಿರಲು ಕಷ್ಟವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಗ್ರಾಮ ಅರಣ್ಯ ಸಮಿತಿ ರೈತರ ಹಿತದೃಷ್ಟಿಯಿಂದ ತುಸು ಉದಾರತೆ ತೋರಿಸಬೇಕಾಗುತ್ತದೆ ಎಂದರು.
ಜಿಪಂ ಸದಸ್ಯೆ ಲಲಿತಾ ನಾರಾಯಣ್, ತಾಪಂ ಮಾಜಿ ಅಧ್ಯಕ್ಷ ಮಹಭಲೇಶ್ವರ್ ಕುಗ್ವೆ, ಮಲ್ಲಿಕಾರ್ಜುನ ಹಕ್ರೆ, ಸುಮಿತ್ರಾ ಮಹಭಲೇಶ್ವರ್, ಲೋಕೇಶ್, ನಾಗರಾಜ್ ಮಂಜಿನಕಾನು, ಪ್ರಕಾಶ್ ಪಿಡಿಒ, ಕೃಷ್ಣ, ತಹಸೀಲ್ದಾರ್ ಭಾಗ್ಯಲಕ್ಷ್ಮಿ, ವಿದ್ಯಾ ಬಸವರಾಜ್, ಮಂಜಪ್ಪ ಸೈದೂರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.