ಮಲೆನಾಡಲ್ಲಿ ಕೆಇಬಿ ಲೈನ್ಮೆನ್ ಕೆಲಸ ಸವಾಲಿನದ್ದು
ಹೊಸನಗರ: ವಿದ್ಯುತ್ ಸರಬರಾಜು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಲೈನ್ಮೆನ್ಗಳ ಕೆಲಸ ಸವಾಲಿನಿಂದ ಕೂಡಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಜೀವ ಅಪಾಯಕ್ಕೆ ಸಿಲುಕಲಿದ್ದು, ಹೆಚ್ಚಿನ ಜಾಗ್ರತೆಯೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ಮೆಸ್ಕಾಂ ಯೂನಿಯನ್ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಲ್. ಶ್ರೀಧರ್ ಹೇಳಿದರು.
ತಾಲೂಕಿನ ನಗರ ಮೆಸ್ಕಾಂ ಶಾಖೆಯ ನಿವೃತ್ತಗೊಂಡ ನೌಕರರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಲೆನಾಡಲ್ಲಿ ಅದರಲ್ಲೂ ಮಳೆಗಾಲದದಲ್ಲಿ ವಿದ್ಯುತ್ ಸರಬರಾಜಿನ ಕಾರ್ಯ ನಿರ್ವಹಿಸುವುದು ತುಂಬ ಕಷ್ಟ ಎಂದರು.
ಲೈನ್ಮೆನ್ ಕೆಲಸಕ್ಕೆ ಸೇರಿ ಪೂರ್ಣಾವಧಿ ಕೆಲಸ ನಿರ್ವಹಿಸಿ ನಿವೃತ್ತರಾಗುವುದು ದೊಡ್ಡ ಸಾಧನೆ ಎಂಬಂತಾಗಿದೆ. ಈ ನಡುವೆಯೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ನೌಕರರು ಬಹಳಷ್ಟಿದ್ದು, ಅವರ ಸೇವೆ ಇತರರಿಗೆ ಮಾದರಿ ಎಂದು ಹೇಳಿದರು.
ಸನ್ಮಾನ: ಈ ವೇಳೆ ನಿವೃತ್ತಗೊಂಡ ಸೀನಿಯರ್ ಲೈನ್ಮೆನ್ ಹಬೂಬ್ ಆಲಿಯವರನ್ನು ನಗರ ಶಾಖೆಯ ನೌಕರರ ಸಮಿತಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಸ್ಥಳೀಯ ಯೂನಿಯನ್ ಅಧ್ಯಕ್ಷ ಬಿ.ಎಂ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ನಗರ ಮೆಸ್ಕಾಂನ ಜೆಇ ಬಿ.ಎಂ. ಸೋಮಶೇಖರ್, ಹೊಸನಗರ ಎಂಯುಎಸ್ಎಸ್ ಜೆಇ ವೆಂಕಟೇಶ್ ಪೈ, ನಗರ, ಹೊಸನಗರ ಮತ್ತಿ ಸಾಗರ ಮೆಸ್ಕಾಂನ ನೌಕರರು ಮತ್ತು ನಿವೃತ್ತ ನೌಕರರು ಉಪಸ್ಥಿತರಿದ್ದರು.
ಖಲೀಂ ಉಲ್ಲಾ ಸ್ವಾಗತಿಸಿದರು. ಚೆಲುವಯ್ಯ ವಂದಿಸಿದರು. ಮಂಜುನಾಥ ಹುಗ್ಗಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

