ಶಿವಮೊಗ್ಗ

ಕಳಪೆ ಕಾಮಗಾರಿ: ಶಾಸಕರ ಪರಿಶೀಲನೆ

Published On :

ಭದ್ರಾವತಿ: ಪಟ್ಟಣದ ಬಿ.ಎಚ್. ರಸ್ತೆ ಮತ್ತು ಅದರ ಅಕ್ಕಪಕ್ಕದ ತಿರುವುಗಳಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಕಳಪೆ ಮಟ್ಟದ್ದಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಜೆ. ಅಪ್ಪಾಜಿ ಅವರು ನಗರಸಭೆ ಅಧಿಕಾರಿಗಳು, ಗುತ್ತಿಗೆದಾರರ ಪ್ರತಿನಿಧಿಗಳು ಹಾಗೂ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕರೆಸಿ ಛೀಮಾರಿ ಹಾಕಿದರು. ಪೌರಾಯುಕ್ತರು ಸ್ಥಳಕ್ಕೆ ಬಾರದೆ ಕಾರಣ ನೀಡಿ ತಪ್ಪಿಸಿಕೊಂಡರು.
ತಿರುವುಗಳಲ್ಲಿ ಮಾಡಿರುವ ಒಳಚರಂಡಿ ವ್ಯವಸ್ಥೆಯ ಮ್ಯಾನ್‌ಹೋಲ್ ನಿರ್ಮಾಣ ಅಳತೆಗನುಗುಣವಾಗಿಲ್ಲ. ಅದನ್ನು ಬಿ.ಎಚ್. ರಸ್ತೆಯಲ್ಲಿ ನಿರ್ಮಿಸಲಾಗಿರುವ ಮ್ಯಾನ್‌ಹೋಲ್‌ಗಳಿಗೆ ಸಂಪರ್ಕ ಕಲ್ಪಿಸಿದಾಗ ಒಳಚರಂಡಿ ನೀರು ಮನೆಯಿಂದ ಹೊರಗೆ ಹೋಗುವ ಬದಲು ಮನೆಯ ಕಡೆಗೇ ಹರಿಯುವಂತೆ ಇಳಿಜಾರು ಕೊಳವೆ ಅಳವಡಿಸಲಾಗಿದೆ. ಇದಕ್ಕೆ ಯಾವುದೇ ತಂತ್ರಜ್ಞಾನದ ಅವಶ್ಯಕತೆ ಬೇಕಾಗಿಲ್ಲ. ಸಾಮಾನ್ಯ ಜ್ಞಾನವೇ ಸಾಕು. ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳು ಹಾಗೂ ನಗರಸಭೆಯ ಮೇಲ್ವಿಚಾರಕರು ಕಾಮಗಾರಿ ಚಾಲನೆಯಲ್ಲಿದ್ದಾಗ ಏನು ಮಾಡುತ್ತಿದ್ದಿರಿ ಎಂದು ಶಾಸಕ ಎಂ.ಜೆ. ಅಪ್ಪಾಜಿ ಪ್ರಶ್ನಿಸಿದರು.
ತೆರೆದಿರುವ ಹಳ್ಳಗಳಿಗೆ ಪಾದಚಾರಿಗಳು ಓಡಾಡುವಾಗ ಬಿದ್ದು ಅಪಾಯವಾಗದಂತೆ ಸುತ್ತಲೂ ಬೇಲಿ ನಿರ್ಮಿಸುವಂತೆ ಅವರು ಆದೇಶಿಸಿದರು. ತೆರೆದಿರುವ ಹಳ್ಳ ಮುಚ್ಚುವಾಗ ಅವುಗಳನ್ನು ರೋಲರ್ ಉಪಯೋಗಿಸಿ ಸರಿಯಾಗಿ ಮುಚ್ಚುವಂತೆ ಗುತ್ತಿಗೆದಾರರಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.