ವಿವಿಧ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತು 2013ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ದತ್ತಿನಿಧಿ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಿದ್ದು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಬರಹಗಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮಲ್ಲಿಕಾ ಪ್ರಶಸ್ತಿ ದತ್ತಿ, ಅಂತರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ, ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ, ಲಿಂ. ಲಲಿತಾದೇವಿ ಗುರುಸಿದ್ಧಪ್ಪ ಸಿಂಧೂರ ದತ್ತಿ, ಶ್ರೀಮತಿ ನೀಲಗಂಗಾ ದತ್ತಿ, ಶ್ರೀಮತಿ ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ, ಶ್ರೀಮತಿ ಶಾರದಾ ಆರ್. ರಾವ್ದ್ತ್ತಿ, ದಿ. ಗೌರಮ್ಮ ಹಾರ್ನಹಳ್ಳಿ ಕೆ. ಮಂಜಪ್ಪ ದತ್ತಿ, ದಿ. ಎಚ್. ಕರಿಯಣ್ಣ ದತ್ತಿ ಪ್ರಶಸ್ತಿಗಳಿಗೆ ಮಹಿಳಾ ಬರಹಗಾರರು ಅರ್ಜಿಗಳನ್ನು ಸಲ್ಲಿಸಬಹುದು.
ಡಾ. ಎಚ್. ನರಸಿಂಹಯ್ಯ ದತ್ತಿ, ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ, ಜಿ.ಪಿ. ರಾಜರತ್ನಂ ಸಂಸ್ಮರಣ ದತ್ತಿ (ಮಕ್ಕಳ ಪುಸ್ತಕ ಬಹುಮಾನ ಸ್ಪರ್ಧೆ- ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ ಮಾತ್ರ), ದಿ. ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ, ರತ್ನಾಕರವರ್ಣಿ-ಮುದ್ದಣ-ಅನಾಮಿಕ ದತ್ತಿ, ಪಿ. ಶಾಂತಿಲಾಲ್ ದತ್ತಿ, ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ, ಶ್ರೀಮತಿ ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ, ಕುಂಬಾಸ ಪ್ರಶಸ್ತಿ ದತ್ತಿ, ಪ್ರೊ. ಡಿ.ಸಿ. ಅನಂತಸ್ವಾಮಿ ದತ್ತಿ, ಜಿ.ಆರ್. ರೇವಯ್ಯ ದತ್ತಿ, ಸಿಸು ಸಂಗಮೇಶ ದತ್ತಿ, ಶ್ರೀಮತಿ ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ (ರಾಯಚೂರು ಜಿಲ್ಲೆಯ ಬರಹಗಾರರಿಗೆ ಮಾತ್ರ), ಕೆ. ವಾಸುದೇವಾಚಾರ್ ದತ್ತಿ, ಡಾ. ಆರ್.ಜೆ. ಗಲಗಲಿ ದತ್ತಿ (ಬೆಳಗಾಗಿ ಜಿಲ್ಲೆಯ ಬರಹಗಾರರಿಗೆ ಮಾತ್ರ), ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ, ಬಿಜಾಪುರ ಜಿಲ್ಲಾ ಸಮೀರವಾಡಿಯಲ್ಲಿ ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ದತ್ತಿ (ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಯ ಲೇಖಕ ಲೇಖಕಿಯರಿಗೆ ಮಾತ್ರ), ವಸುದೇವ ಭೂಪಾಳಂ ದತ್ತಿ, ದಿ. ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ, ದಿ. ಕಾಕೋಳು ಸರೋಜಮ್ಮ ದತ್ತಿ, ದಿ. ಡಾ. ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ, ನಾ.ಕು. ಗಣೇಶ್ ದತ್ತಿ, 17-18 ಡಿಸೆಂಬರ್ 2011ರಂದು ಬೀಳಗಿಯಲ್ಲಿ ನಡೆದ ಬೀಳಗಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸವಿನೆನಪು ದತ್ತಿ, ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿಗಳಿಗೆ ಎಲ್ಲಾ ಬರಹಗಾರರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಬರಹಗಾರರು ಪ್ರವೇಶಕ್ಕೆ ತಮ್ಮ ವಿವರಗಳ ಪ್ರಸ್ತಾವನೆಯೊಂದಿಗೆ ಮೂರು ಪುಸ್ತಕಗಳನ್ನು ಏಪ್ರಿಲ್ 30ರೊಳಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು- 560018 ವಿಳಾಸಕ್ಕೆ ಸಲ್ಲಿಸುವಂತೆ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

