ಶಿವಮೊಗ್ಗ

ತೀರ್ಥಹಳ್ಳಿ ಪಪಂ ಅಧ್ಯಕ್ಷರ ಆಯ್ಕೆ

Published On :

ತೀರ್ಥಹಳ್ಳಿ: ಸೊಪ್ಪುಗುಡ್ಡೆ ರಾಘವೇಂದ್ರ ಅವರು ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಲಕ್ಮಿವೆಂಕಟಪ್ಪ ಆಯ್ಕೆಯಾಗಿದ್ದಾರೆ.  ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನೆಡೆದ ಈ ಆಯ್ಕೆ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಗಣೇಶಮೂರ್ತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಘೋಷಣೆ ಮಾಡಿದರು. ಮೊದಲ 30 ತಿಂಗಳ ಅವಧಿಗೆ 15 ತಿಂಗಳು ಸೊಪ್ಪುಗುಡ್ಡೆ ರಾಘವೇಂದ್ರ ಅಧ್ಯಕ್ಷರಾಗಿದ್ದಾರೆ. ಲಕ್ಮಿವೆಂಕಟಪ್ಪ ಉಪಾಧ್ಯಕ್ಷರಾಗಿದ್ದಾರೆ. 15 ಸದಸ್ಯರಿರುವ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ 11 ಸದಸ್ಯರನ್ನು ಹೊಂದಿದೆ.  2 ಕಾಂಗ್ರೆಸ್, 1 ಜೆಡಿಎಸ್ ಹಾಗೂ 1 ಕೆಜೆಪಿ ಸದಸ್ಯರನ್ನು ಹೊಂದಿದೆ.  ಬಿಜೆಪಿಯ 3 ಜನ ಸದಸ್ಯರಿಗೆ ಈ ಬಾರಿಯ ಅಧ್ಯಕ್ಷಗಾದಿಗೇರುವ ಅವಕಾಶ ಇತ್ತು.  ಕೊನೆ ಘಳಿಗೆಯಲ್ಲಿ ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾದರು.  ಮುಖ್ಯಾಧಿಕಾರಿ ನಾಗೇಂದ್ರ, ಮಾಜಿ ಶಾಸಕ ಆರಗ ಜ್ಞಾನೇಂದ್ರ,  ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಚೊಕ್ಕೋಡುಬೈಲು ರಾಘವೇಂದ್ರ ಈ ಸಂದರ್ಭದಲ್ಲಿದ್ದರು.
ಉಪನ್ಯಾಸ ಮುಂದೂಡಿಕೆ
ಶಿವಮೊಗ್ಗ: ಕರ್ನಾಟಕ ಸಂಘದಲ್ಲಿ ಮಾ.5ರಂದು ಆಯೋಜಿಸಿದ್ದ ಮಾಸ್ಟರ್ ಹಿರಣ್ಣಯ್ಯ ಅವರ ತಿಂಗಳ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ಡಾ. ಎಚ್.ಎಸ್.ನಾಗಭೂಷಣ ತಿಳಿಸಿದ್ದಾರೆ. ಮುಂದೂಡಲ್ಪಟ್ಟ ಕಾರ್ಯಕ್ರಮ ಮಾ.20ರಂದು ಸಂಜೆ ನಡೆಯಲಿದೆ. ಆಸಕ್ತರು ಪಾಲ್ಗೊಳ್ಳುವಂತೆ ಕೋರಿದ್ದಾರೆ.
ಕ್ಯಾಂಪಸ್ ನೇಮಕಾತಿ
ಶಿವಮೊಗ್ಗ: ಆಚಾರ್ಯ ತುಳಸಿ ನ್ಯಾಷನಲಲ್ಕಾಮರ್ಸ್ ಕಾಲೇಜಿನಲ್ಲಿ ಮಾ.15ರಂದು ಬೆಳಿಗ್ಗೆ 9ರಿಂದ ಕ್ಯಾಂಪಸ್ ಸಂದರ್ಶನ ನಡೆಯಲಿದೆ. ಸೌತ್ ಇಂಡಿಯನ್ ಬ್ಯಾಂಕ್‌ನವರು ಅಂತಿಮ ವರ್ಷದ ಬಿಕಾಂ ಮತ್ತು ಬಿಬಿಎಂನ ಆಸಕ್ತ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆ ನಡೆಸಲಿದ್ದಾರೆ. ಬೆಳಿಗ್ಗೆ ಕಾರ್ಯಕ್ರಮವನ್ನು ಎನ್‌ಇಎಸ್ ನಿರ್ದೇಶಕ ಎಚ್.ಎಂ.ಮಲ್ಲಪ್ಪ ಉದ್ಘಾಟಿಸುವರು.
ಮೂಳೆ ಸಾಂಧ್ರತೆ ಶಿಬಿರ ನಾಳೆ
ಶಿವಮೊಗ್ಗ: ಇಲ್ಲಿನ ಜಗನ್ನಾಥ ನರ್ಸಿಂಗ್ ಹೋಂನಲ್ಲಿ ಮಾ.16ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಶೇ.50ರ ರಿಯಾಯಿ ದರದಲ್ಲಿ ಡೆಕ್ಸಾ ಯಂತ್ರದಿಂದ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಸೊಂಟ, ಭುಜ, ಕುತ್ತಿಗೆ ಅಥವಾ ಬೆನ್ನು ನೋವಿನಿಂದ ತೊಂದರೆ ಒಳಗಾಗಿರುವ ಚಿಕಿತ್ಸೆ ಪಡೆಯಬಹುದು. ಸಂಪರ್ಕ ಸಂಖ್ಯೆ- 94481 49872.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.